ಬಳ್ಳಾರಿ: ನ್ಯಾಷನಲ್ ಯೂತ್ ರೆಡ್ ಕ್ರಾಸ್ ಟ್ರೈನಿಂಗ್ ಕ್ಯಾಂಪ್

ಬಳ್ಳಾರಿ: ನ್ಯಾಷನಲ್ ಯೂತ್ ರೆಡ್ ಕ್ರಾಸ್ ಟ್ರೈನಿಂಗ್ ಕ್ಯಾಂಪ್

ಲೋಕದರ್ಶನ ವರದಿ

ಬಳ್ಳಾರಿ 24: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕನರ್ಾಟಕ ರಾಜ್ಯ ಶಾಖೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ ವತಿಯಿಂದ ಓ.ಪಿ.ಜೆ ಸೆಂಟರ್ ಆಡಿಟೋರಿಯಂ, ತೋರಣಗಲ್ಲು ಗ್ರಾಮದಲ್ಲಿ, "ನ್ಯಾಷನಲ್ ಯೂತ್ ರೆಡ್ ಕ್ರಾಸ್ ಟ್ರೈನಿಂಗ್ ಕ್ಯಾಂಪ್ ಅನ್ನು ಹಮ್ಮಿಕೊಂಡಿದ್ದರು. ಈ ಉದ್ಘಾಟನಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಡಾ|| ವನಶ್ರೀ, ಇನ್ಚಾರ್ಜ ಹೆಲ್ತ್ ಪ್ರೊಗ್ರಾಮ್ಸ್ & ಯೂತ್ ಪ್ರೊಗ್ರಾಮ್ಸ್, ಐ.ಎಫ್.ಆರ್.ಸಿ., ಎನ್.ಹೆಚ್.ಕ್ಯೂ, ನವದೆಹಲಿ. ಇವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ತರಬೇತಿ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ, ಅಗ್ನಿಶಮನ, ವಿಪತ್ತು ನಿಯಂತ್ರಣ, ಅಪಘಾತಗಳ ಬಗ್ಗೆ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ. ತರಬೇತಿಯನ್ನು ನೀಡಲಾಗುವುದು ಈ ತರಬೇತಿಗಳಿಗೆ ಹರಿಯಾಣ, ದೆಹಲಿ, ಆಂದ್ರ ಪ್ರದೇಶ್, ಓರಿಸ್ಸಾ, ತಮಿಳುನಾಡು, ಕೇರಳದಿಂದ ಸುಮಾರು ಹತ್ತು ರಾಜ್ಯಗಳಿಂದ 200 ಜನ ಶಿಬಿರಾಥರ್ಿಗಳು ತರಬೇತಿಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ  ಬಸ್ರೂರ್ ರಾಜೀವ್ ಶೆಟ್ಟಿ, ಸ್ಟೇಟ್ ಚೇರ್ಮನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,  ಕರ್ನಾಟಕ  ರಾಜ್ಯ ಶಾಖೆ, ಬೆಂಗಳೂರು. ಮಂಜುನಾಥ ಪ್ರಭು, ಉಪಾಧ್ಯಕ್ಷರು, ಜೆ.ಎಸ್.ಡ.ಬ್ಲ್ಯೂ ತೋರಣಗಲ್ಲು. ಎಂ.ಎ.ಶಕೀಬ್, ಕಾರ್ಯದರ್ಶಿಗಳು  ಮತ್ತು ರಾಜ್ಯ ಯೂತ್ ರೆಡ್ ಕ್ರಾಸ್ ಕೋ-ಆಡರ್ಿನೇಟರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಮತ್ತು ವಿವಿಧ ರಾಜ್ಯಗಳಿಂದ ಆಗಮಿಸಿರುವ ಸುಮಾರು 200 ಜನ ತರಬೇತಿಶಿಬಿರಾರ್ಥಿಗಳು  ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುಳಾ ರೆಡ್ಡಿ, ಮತ್ತು ದಿಲೀಪ್, ಸ್ಟೇಟ್ ಕೋ-ಆಡರ್ಿನೇಟರ್, ನಡೆಸಿಕೊಟ್ಟರು.  


ಸುದ್ದಿ ಓದಿ