ಬಳ್ಳಾರಿ: ಜಾಗೃತ ಮಹಿಳೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಮಾತಾ ಪ್ರಬೋಧಾಮಯೀ ಹೇಳಿಕೆ
ಲೋಕದರ್ಶನ ವರದಿ
ಬಳ್ಳಾರಿ 15: ಮಾತಾ ಪ್ರಬೋಧಾಮಯೀ "ಮಹಿಳೆ ಪ್ರಯತ್ನಪಟ್ಟರೆ ಏನನ್ನಾದರೂ ಸಾಧಿಸ ಬಲ್ಲಳು ಅಂತಹ ಶಕ್ತಿ ಸಾಮಥ್ರ್ಯಗಳು ಮಹಿಳೆಯರಲ್ಲಿ ಇರುತ್ತವೆ. ಜಾಗೃತ ಮಹಿಳೆಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೊಸಪೇಟೆಯ ಹಂಸಾಂಬ ಶಾರದಾಶ್ರಮದ ಮಾತಾ ಪ್ರಬೋಧಾಮಯೀ ಅಭಿಪ್ರಾಯಪಟ್ಟರು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಕೋಶ `ಮನಸ್ವಿ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ಯದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ತ್ರೀ ಸಂತೃಪ್ತಳಾಗಿ ಇರುವಲ್ಲಿ ಭಗವಂತ ಇರುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಸ್ತ್ರೀಯ ಸ್ಥಿತಿಗತಿಗಳನ್ನು ಉತ್ತಮ ಪಡಿಸುವಲ್ಲಿ ಸಮಾಜ ಹೆಚ್ಚಿನ ಪ್ರಯತ್ನಗಳು ಅಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಥಿಯೋಸಫಿಕಲ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ ಬಿ. ಮಂಜುಳಾ ಮಾತನಾಡಿ ಪ್ರತಿ ತಾಯಿಯು ತನ್ನ ಮಕ್ಕಳಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವವಿಲ್ಲದೆ ನೋಡಬೇಕು ಎಂದು ಹೇಳಿದರು. ಕಾಲೇಜಿನ ಮಹಿಳಾ ಸಬಲೀಕರಣ ಕೋಶ 'ಮನಸ್ವಿಯ ಅಧ್ಯಕ್ಷೆ ಡಾ ಶರಣ ಬಸಮ್ಮ ಮಾತನಾಡಿ "ಮಹಿಳಾ ಸಬಲೀಕರಣ ಎಂದರೆ, ತನ್ನ ಜೀವನದಲ್ಲಿನ ಎಲ್ಲಾ ವಿಷಯಗಳ ಬಗ್ಗೆ ಒಬ್ಬ ಮಹಿಳೆ ತಾನೇ ತೀರ್ಮಾನ ಕೈಗೊಳ್ಳುವುದೇ ಸಬಲೀಕರಣ'' ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಎಸ್.ಎಂ. ಶಶಿಧರ್ ಮಾತನಾಡಿ. ತೊಟ್ಟಿಲನ್ನು ತೂಗುವ ಕೈ ದೇಶ ಆಳಬಲ್ಲದು ಎನ್ನುವುದು ನಿವರ್ಿವಾದವಾಗಿ ಸಾಬೀತಾಗಿರುವ ಸತ್ಯ.ಎಂದರು.
ಈ ಸಮಾರಂಭದ ವೇದಿಕೆಯಲ್ಲಿ ಇನ್ನಿತರ ಅತಿಥಿಗಳಾದ ಸೌಮ್ಯ ಏಕಾಮರೇಶ್, ಅನ್ನಪೂರ್ಣ ಸದಾಶಿವ ಮೂರ್ತಿ , ಕೆಎಂ ಪಾರ್ವತಿ ಅಧ್ಯಾಪಕರಾದ ಪಾರ್ವತಿ ಕಡ್ಲಿ, ಶಮಿತಾ, ಸಿಂಧೂ, ಗಿರಿಜಾ ಇವರು ಉಪಸ್ಥಿತರಿದ್ದರು.