ಬಳ್ಳಾರಿ : ವ್ಯಕ್ತಿಗಳನ್ನು ಕೊಲ್ಲಬಹುದು ದೇಶಾಭಿಮಾನ ಕೊಲ್ಲುವುದು ಅಸಾಧ್ಯ: ಜಗದೀಶ್ ಹೇಳಿಕೆ

ಬಳ್ಳಾರಿ : ವ್ಯಕ್ತಿಗಳನ್ನು ಕೊಲ್ಲಬಹುದು ದೇಶಾಭಿಮಾನ ಕೊಲ್ಲುವುದು ಅಸಾಧ್ಯ: ಜಗದೀಶ್ ಹೇಳಿಕೆ

ಲೋಕದರ್ಶನ ವರದಿ

ಬಳ್ಳಾರಿ 24: ಗಾಂಧಿನಗರದಲ್ಲಿರುವ ಹೌಸಿಂಗ್  ಬೋರ್ಡ್  ಕಾಲೋನಿಯಲ್ಲಿ ಸ್ವಾಮಿ ವಿವೇಕಾನಂದ ಯೋಗಕೇಂದ್ರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಭಾನುವಾರ ಬೆಳಿಗ್ಗೆ 6-00 ಗಂಟೆಯಿಂದ ಬಲಿದಾನ ದಿವಸ ಆಚರಣೆ ಹಮ್ಮಿಕೊಳ್ಳಲಾಗಿದ್ದು ಹುತಾತ್ಮರುಗಳಾದ ಭಗತ್ಸಿಂಗ್   ಸುಖ್ದೇವ  ರಾಜಗುರು, ಇವರ ಭಾವಚಿತ್ರಗಳಿಗೆ ಪತಂಜಲಿ ಯೋಗದ ಪದಾಧಿಕಾರಿಗಳು ದೀಪವನ್ನು ಬೆಳಗಿಸಿ ಪುಷ್ಪವನ್ನು ಅರ್ಪಿಸುವ  ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಬಲಿದಾನದ ದಿನದ ಅಂಗವಾಗಿ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಉಪನ್ಯಾಸಕರಾದ ಜಗದೀಶ್ ಬಸಾಪುರ್ ರವರು ವ್ಯಕ್ತಿಗಳನ್ನು ಕೊಲ್ಲಬಹುದು ಅವರಲಿರತಕ್ಕಂತಹ ದೇಶಪ್ರೇಮ, ಮತ್ತು ವಿಚಾರಗಳನ್ನು ಕೊಲ್ಲಲು ಅಸಾದ್ಯ ಭಾರತದ ಸ್ವತಂತ್ರದ ಇತಿಹಾಸದಲ್ಲಿ ಇವರನ್ನು ಮರೆಯುವಂತಿಲ್ಲ. 1931 ಮಾಚರ್ು 23 ರಂದು ಭಾರತದ ತ್ರಿವಳಿ ಪುತ್ರ ರತ್ನರಾದ ಶಾಹಿದ್ ಭಗತ್ಸಿಂಗ್, ಸುಖ್ದೇವ್ ಹಾಗೂ ರಾಜಗುರು ಇವರ ವೀರಸ್ವರ್ಗವನ್ನು ಪಡೆದ ದಿನವನ್ನು ಬಲಿದಾನ ದಿವಸ ಎಂದು ಆಚರಿಸಲಾಯಿತು 1928 ರಲ್ಲಿ ದೆಹಲಿಯ ಸೆಂಟ್ರಲ್ ಅಸೆಂಬ್ಲಿಗೆ ಬಾಂಬ್ ಎಸೆದ ಆರೋಪ  ಮತ್ತು ಬ್ರಿಟಿಷ್ ಅಧಿಕಾರಿ ಒಬ್ಬರನ್ನು ಗುಂಡಿಕ್ಕಿ ಕೊಂದ ಆರೋಪ ಅವರ ಮೇಲಿತ್ತು ಈ ಮೂರು ಜನರನ್ನು ಅಂದಿನ ಬ್ರಿಟಿಷ್ ಸಕರ್ಾರ ಈ ಒಂದು ಆರೋಪದ ಮೇಲೆ ಅವರಿಗೆ 1931 ಮಾರ್ಚ್  23 ರಂದು ಬೆಳಿಗ್ಗೆ 7-33 ನಿಮಿಷಕ್ಕೆ ಗಲ್ಲಿಗೆ ಏರಿಸಲು ತೀರ್ಮಾನಿಸಿದರು . ಸಾಯುವುದಕ್ಕಿಂತ ಮುಂಚೆ ದೇಶಕ್ಕಾಗಿ ಇನ್ಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆಯನ್ನು ಕೂಗುತ್ತಾ ಅವರ ಪ್ರಾಣವನ್ನು ಲೆಕ್ಕಿಕ್ಕಲ್ಲದೆ ದೇಶಕ್ಕಾಗಿ ಬಲಿದಾನಕ್ಕೆ ತುತ್ತಾದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪತಂಜಲಿಯೋಗ ಸಂಯೋಜಕರಾದ ಕಣೆಕಲ್ ಎರ್ರಿಸ್ವಾಮಿ ಮತ್ತು ಇಸ್ವಿ ಪಂಪಾಪತಿ ಜಿಲ್ಲಾಧ್ಯಕ್ಷರುಗಳಾದ ಪಿ.ಎಂ.ನಟರಾಜ್, ಲಕ್ಷ್ಮಿರೆಡ್ಡಿ, ಚಂದ್ರೇಗೌಡ, ಮಹಿಳಾ ಅಧ್ಯಕ್ಷೆ ಸಂತೋಷ್ಮೆಹತಾ, ರೈಲ್ವೆ ಸಮಿತಿ ಸದಸ್ಯರಾದ ಗೋವಿಂದ, ಪದಾದಿಕಾರಿಗಳಾದ ಕೃಷ್ಣ, ಸಂಗಪ್ಪ, ಪುರಾಣಿಕ್, ಯೋಗ ಶಿಕ್ಷಕರಾದ ಪ್ರಕಾಶ್,  ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಗೂಳಪ್ಪ ಬೆಳ್ಳಿಕಟ್ಟೆ, ಸ್ವಾಗತವನ್ನು ಉಪನ್ಯಾಸಕರುಗಳಾದ ರುದ್ರಮುನಿ, ಪ್ರಾರ್ಥನೆಯನ್ನು ಮಹಾದೇವಿ, ಉಮಾ, ಮತ್ತು ಸುಮಾರೆಡ್ಡಿಯವರು ನಡೆಸಿಕೊಟ್ಟರು.


ಸುದ್ದಿ ಓದಿ