ಬಳ್ಳಾರಿ: ಬದಲಾವಣೆಗಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬಳ್ಳಾರಿ: ಬದಲಾವಣೆಗಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಲೋಕದರ್ಶನ ವರದಿ

ಬಳ್ಳಾರಿ 19: ಕುಡತಿನಿ ಗ್ರಾಮದಲ್ಲಿ ಮದರ್ ಥೆರೆಸಾ ಮಹಿಳಾ ಗ್ರಾಮ ಒಕ್ಕೂಟ ಝಾನ್ಸಿರಾಣಿ ಮಹಿಳಾ ಗ್ರಾಮ ಒಕ್ಕೂಟ ಇಂದಿರಾ ಮಹಿಳಾ ಗ್ರಾಮ ಒಕ್ಕೂಟ ಹಾಗೂ ಎಸಿಸಿ ಕುಡುತಿನಿ ಸಿಮೆಂಟ್ ವಕ್ರ್ಸ ಮತ್ತು ಫೋರಂ ಫರ್ ರೂರಲ್ ಡೆವಲಪ್ಮೆಂಟ್ ಮತ್ತು ವಿವಿಧ ಸಕರ್ಾರಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ "ಬದಲಾವಣೆಗಾಗಿ ಸಮಾನತೆ ಆಲೋಚನೆ ಹೊಸತನದ ಜ್ಞಾನ ನಿಮರ್ಾಣ ಎಂಬ ಪ್ರತಿಪಾದನೆಯೊಂದಿಗೆ ಹಾಗೂ ಉತ್ತಮಕ್ಕಾಗಿ ಸಮತೋಲನ ಎಂಬ ಧ್ಯೇಯದೊಂದಿಗೆ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಸಾಮಾಜಿಕ ದೃಷ್ಠಿಯಲ್ಲಿ ಲಿಂಗ ಅಸಮಾನತೆಯಿಲ್ಲದೇ ಎಲ್ಲಾ ಮಹಿಳೆಯರಿಗೂ ಸಮಾನ ಅಧಿಕಾರವನ್ನು ನೀಡಬೇಕೆನ್ನುವುದೇ ಈ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ಆಗಿದೆ. ಪ್ರಥಮವಾಗಿ ರ್ಯಾಲಿಯನ್ನು ದೊಡ್ಡ ಆಂಜನೇಯ ಸ್ವಾಮೀ ದೇವಸ್ಥಾನದಿಂದ ಪ್ರಾರಂಭವಾಗಿ ಮಹಿಳಾ ದಿನಾಚರಣೆಯ ಬಗ್ಗೆ ಘೋಷಣೆ ಕೂಗುತ್ತಾ ಕಂಪ್ಲಿ ಅಲ್ಲಮ ತಿಮ್ಮಪ್ಪ ಕಲ್ಯಾಣ ಮಂಟಪದವರೆಗೆ ಬಂದು ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. 

              ನಂತರ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀಣಾ ನಾಯ್ಕರ್ ಮಾತನಾಡುತ್ತಾ ಮಹಿಳೆಯರ ಒಗ್ಗಟ್ಟು ಸಾಧನೆಗಳ ಕುರಿತು ಹಾಗೂ ಮಹಿಳೆಯರಿಗೆ ಕಾನೂನು ಸೌಲಭ್ಯಗಳನ್ನು ತಿಳಿಸಿಕೊಟ್ಟರು. ನಂತರ ಎಸಿಸಿ ಲೇಡಿಸ್ ಕ್ಲಬ್ ಅಧ್ಯಕ್ಷ ಮೋನಿಕಾ ಭಗತ್ ಮಾತನಾಡುತ್ತಾ ಮಹಿಳೆಯರ ಸ್ವಾವಲಂಬನೆ ಆರ್ಥಿಕತೆ, ಉತ್ಪಾದನೆ ವಿವಿಧ ಕ್ಷೇತ್ರಗಳ ಸಾಧನೆಗಳ ಬಗ್ಗೆ ತಿಳಿಸಿಕೊಟ್ಟರು. 

              ನಂತರ ಮತ್ತೊಬ್ಬ ಅತಿಥಿ ವಿಜಯ ಲಕ್ಷ್ಮೀ ಬಳ್ಳಾರಿ ಮಾತನಾಡುತ್ತಾ ಮಹಿಳೆಯರು ಸದಾ ಬದಲಾವಣೆಯತ್ತ ನಡೆಯುವರು ಹಾಗೆಯೇ ವಿವಿಧ ಕ್ಷೇತ್ತಗಳಲ್ಲಿ ಸಾಧನೆ ಮಾಡಿ ಪುರುಷರಿಗಿಂತ ಮುಂದಿದ್ದಾರೆ. ನಂತರ ಮೂರು ಗ್ರಾಮದ ಒಕ್ಕೂಟದ ಅಧ್ಯಕ್ಷರುಗಳಾದ ನಾಗರತ್ನಮ್ಮ, ನಾರಿ ಬಸಮ್ಮ, ಲಕ್ಷ್ಮಮ್ಮ ಇವರು ಒಕ್ಕೂಟದ ಸಾಧನೆ ಮತ್ತು ಆಭಿವೃದ್ಧಿಯನ್ನು ತಿಳಿಸಿಕೊಟ್ಟರು. ನಂತರ ಎಲ್ಲಾ ಮಹಿಳಾ ಸಂಘದ ಸದಸ್ಯರಿಗೆ ಕ್ರೀಡೆಗಳನ್ನು (ಆಟಗಳನ್ನು) ಆಡಿಸಿ ಬಹುಮಾನಗಳನ್ನು ವಿತರಿಸಿದರು. ಈ ಒಂದು ಕಾರ್ಯಕ್ರಮಕ್ಕೆ  ಸಿದ್ದಮ್ಮನಹಳ್ಳಿ, ವೇಣಿವೀರಾಪುರ, ಕುಡುತಿನಿ ಮಹಿಳಾ ಸಂಘದ ಸದಸ್ಯರು ಹಾಗೂ ಎಸಿಸಿ ಲೇಡಿಸ್ ಕ್ಲಬ್ ಸದಸ್ಯರು ಎಸಿಸಿ ಫೋಡರ್್ ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 


ಸುದ್ದಿ ಓದಿ