ಬಳ್ಳಾರಿ: ಸದಾಶಿವ ಆಯೋಗ ಜಾರಿಗೆ ಅಡ್ಡಪಡಿಸಿದವರ ಸೋಲಿಗೆ ಹನುಮಂತಪ್ಪ ಕರೆ

ಬಳ್ಳಾರಿ: ಸದಾಶಿವ ಆಯೋಗ ಜಾರಿಗೆ ಅಡ್ಡಪಡಿಸಿದವರ ಸೋಲಿಗೆ ಹನುಮಂತಪ್ಪ ಕರೆ

ಬಳ್ಳಾರಿ 17: ಅನ್ಯಾಯಕ್ಕೆ ಒಳಗಾದ ಹಿಂದುಳಿದ ಸಮೂದಾಯಕ್ಕೆ ನ್ಯಾಯಮೂತರ್ಿ ಸದಾಶಿವ ಅಯೋಗದ ವರದಿಯನ್ನು ಜಾರಿಗೆ ತರಲು ಅಡ್ಡಿಯಾಗಿರುವ ಸಮೂದಾಯದ ನಾಯಕರನ್ನು ಸೋಲಿಸಲು ಮಾದಿಗ ಮಿಸಲಾತಿ ಹೋರಾಟ ಸಮಿತಿ ಕರೆ ನೀಡಿದೆ. 

ಸಮಿತಿಯ ರಾಜ್ಯಧ್ಯಕ್ಷ ಹೆಚ್.ಹನುಮಂತಪ್ಪ, ಮಾತನಾಡಿ ಜನಸಂಖ್ಯೆಗೆ ಅನುಗುಣವಾಗಿ ಮಿಸಲಾತಿ ಸೌಲಭ್ಯ ದೊರಕಿಸಿಕೊಡವ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರೂ ಅದನ್ನು ಸರಕಾರ ಜಾರಿಗೆ ತರಲಿಲ್ಲ. ಈ ವರದಿ ಜಾರಿಗೆಯಾಗದ ಕಾರಣ ತಾವು ಕಳೆದ ಚುನಾವಣೆಯಲ್ಲಿ ಸೋಲಿಸಬೇಕಾಯಿತು ಎಂದು ಸ್ವತಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. 

ಇನ್ನು ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ಬುದ್ದಿ ಬಂದಿಲ್ಲ ಎಂದರು. ಜಾರಿಗೆ ತರಲು ಮುಂದಾದ ನಾಯಕರಿಗೆ ಅಡ್ಡಿಪಡಿಸಿದ್ದಾರೆ ಎನ್ನಲಾದ ಮಾಜಿ ಸಚಿವರಾದ ನರೇಂದ್ರಸ್ವಾಮಿ, ಹೆಚ್.ಸಿ ಮಾದೇವಪ್ಪ, ಮಲ್ಲಿಕಾರ್ಜುನ ಖರ್ಗೆ  ಮತ್ತು ಡಾ|| ಜಿ.ಪರಮೇಶ್ವರ, ಶಿವರಾಜ ತಂಗಡಗಿ, ಪರಮೇಶ್ವರನಾಯಕ, ರಾಜು ಕುಡುಚಿ, ಮಾನಪ್ಪ ವಜ್ಜಲ್, ಮೊದಲಾದವರನ್ನು ಈ ಬಾರಿ ಸೋಲಿಸಲು ಸ್ಪಷ್ಟ ನಿಧರ್ಾರ ತೆಗೆದುಕೊಂಡಿದ್ದೇವೆ. ಈ ಮಿಸಲಾತಿಗೆ ಕಳೆದ 20 ವರ್ಷಗಳ ಹೋರಾಟವನ್ನು ಹತ್ತಿಕ್ಕಿರುವ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಪಾಟ ಕಲಿಸಬೇಕಾಗಿದ್ದು ಈಗ ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನಮಗೆ ಅವಕಾಶ ನೀಡಿದೆ ಎಂದರು. ವಿವಿದ ದಲಿತ ಸಂಘಟನೆಯ ಮುಖಂಡರುಗಳಾದ ವೀರಬಸಪ್ಪ, ಟಿ.ಪಂಪಾಪತಿ, ಈಶ್ವರಪ್ಪ, ಸೋಮಶೇಖರ, ಕೃಷ್ಣಾ, ಹುಸೇನ್, ಮೊದಲಾದವರು ಮಾತನಾಡಿ ಇವರೆಲ್ಲರಿಗೂ ಈ ಬಾರಿ ಚುನಾವಣೆಯಲ್ಲಿ ನಮ್ಮ ಸಮೂದಾಯದಿಂದ ವಿರೋದ ವ್ಯೆಕ್ತಪಡಿಸಿ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಗುಡುಗಿದರು. 


ಸುದ್ದಿ ಓದಿ