ಬಳ್ಳಾರಿ: ಉಚಿತ ಮೊಬೈಲ್ ಪೋನ್ ರಿಪೇರಿ ಶಿಬಿರ
ಲೋಕದರ್ಶನ ವರದಿ
ಬಳ್ಳಾರಿ 11: ರುಡ್ಸೆಟ್ ಸಂಸ್ಥೆ, ಚಿತ್ರದುರ್ಗದಲ್ಲಿ ದಿನಾಂಕ:11 ರಿಂದ13 ರವರೆಗೆ 30 ದಿನಗಳ ಉದ್ಯಮಶೀಲತಾಭಿವೃದ್ಧಿ ಮೋಬೈಲ್ ಪೋನ್ ರಿಪೇರಿ ತರಬೇತಿ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿ ನಿಮಿತ್ಯ ಶಿಭಿರಾಥರ್ಿಗಳಿಂದ ಚಿತ್ರದುರ್ಗ ತಾಲೂಕಿನ ಶಿರಿಗೆರೆಯಲ್ಲಿ ಉಚಿತ ಮೋಬೈಲ್ ಪೋನ್ ರಿಪೇರಿ ಶಿಭಿರದ ಒಂದು ದಿನದ ಕಾರ್ಯಗಾರವನ್ನು ಶಿರಗೆರೆ ಬಸ್ ನಿಲ್ದಾಣ ಬಳಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ತರ ಮೊಬೈಲ್ ಪೋನ್ ರಿಪೇರಿ ಮಾಡಲಾಯಿತು. ಒಟ್ಟು 100ಕ್ಕೂ ಹೆಚ್ಚು ಜನರಿಗೆ ಸೇವೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಸದಸ್ಯ ದೇವರಾಜ, ಸಿಂಡಿಕೆಟ್ಬ್ಯಾಂಕ್ನ ವಿಸ್ತರಣಾಧಿಕಾರಿ ಹುಲಿಕಂಠರಾಯ ರುಡ್ಸೆಟ್ ಸಂಸ್ಥೆಯ ನಿದರ್ೇಶಕರಾದ ಜಿ.ಮಂಜುಳಾ, ಮತ್ತು ರುಡ್ಸೆಟ್ಸಂಸ್ಥೆಯ ಉಪನ್ಯಾಸಕರಾದ ಲತಾಮಣಿ, ಹಾಗೂ ತೋಟಪ್ಪ ಎಸ್. ಗಾಣಿಗೇರ, ಮತ್ತು ಅತಿಥಿ ಉಪನ್ಯಾಸಕರಾದ ಕೃಷ್ಣಪೇಟೆ, ಮತ್ತು ಒಟ್ಟು ಕಾರ್ಯಕ್ರಮದಲ್ಲಿ 30 ಜನ ಶಿಬಿರಾಥರ್ಿಗಳು ಸೇರಿದಂತೆ ಊರಿನ ಗ್ರಾಮಸ್ಥರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.