ಬಳ್ಳಾರಿ: ಉಚಿತ ಸಿ.ಇ.ಟಿ, ನೀಟ್ ತರಬೇತಿ ಮಾ.21ರಿಂದ ಪ್ರಾರಂಭ

ಬಳ್ಳಾರಿ: ಉಚಿತ ಸಿ.ಇ.ಟಿ, ನೀಟ್ ತರಬೇತಿ ಮಾ.21ರಿಂದ ಪ್ರಾರಂಭ

ಬಳ್ಳಾರಿ 13: ಅಖಿಲಭಾರತ ವಿದ್ಯಾರ್ಥಿ  ಪರಿಷತ್ ಪ್ರತೀ ವರ್ಷದಂತೆ ಈ ವರ್ಷವು ಸಹ ಪ್ರತಿಭಾನ್ವಿತ ಬಡ ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಉಚಿತ ನೀಟ್ ಮತ್ತು ಸಿ.ಇ.ಟಿ ಕೊಚಿಂಗ್ ತರಬೇತಿಯನ್ನು ಹಮ್ಮಿಕೊಂಡಿದೆ. ಜಿಲ್ಲೆಗಳ ಸಂಚಾಲಕ ಶ್ರೀಕಾಂತರೆಡ್ಡಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪ್ರತೀವರ್ಷದಂತೆ ಈ ವರ್ಷವು ಸಿ.ಇ.ಟಿ ಕೊಚಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಶ್ರೀ ಮೇದಾ ಡಿಗ್ರಿ ಕಾಲೇಜಿನಲ್ಲಿ 21-03-2019ರಿಂದ 20-04-2019ರವರೆಗೆ ತರಬೇತಿಗಳನ್ನು ನಡೆಸುತ್ತಿದ್ದೇವೆ. ಈ ತರಬೇತಿಯಲ್ಲಿ ದ್ವಿತಿಯ ಪಿಯುಸಿ ವಿಜ್ಞಾನ ವಿದ್ಯಾಥರ್ಿಗಳು ಗಣಿತ, ರಾಸಾಯನಿಕ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರಗಳ ವಿಷಯಗಳನ್ನು ಕುರಿತು ನೂರಿತ ಉಪನ್ಯಾಷಕರಿಂದ  ವಿಷೇಶ ತರಬೇತಿ ಈಗಾಗಲೇ ನೊಂದಣಿ ಆರಂಭವಾಗಿದ್ದು ಆಸಕ್ತರು 9739996497, 8050442500ಗೆ ಸಂಪರ್ಕಿಸಿ  ನೊಂದಣಿ ಮಾಡಿಕೊಳ್ಳಬೇಕು ನೊಂದಾಯಿತವಿದ್ಯಾರ್ಥಿಗಳು  1000ರೂ ನೀಡಿ ಸಿಇಟಿ ಮತ್ತು ನೀಟ್ ಮೆಟಿರಿಯಲ್ ಪಡೆಯಬೇಕಾಗಿದೆ. ಕಟ್ಟಲಿಕ್ಕೆ ಆಗದೇ ಇರುವಂತಹ ಕಡುಬಡವರಿದ್ದರೇ ಉಚಿತವಾಗಿ ದಾನಿಗಳಿಂದ ನೀಡಿಸಲಿದ್ದೇವೆ ಎಂದು ವಿವರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಶ್ರೀಕಾಂತರೆಡ್ಡಿ, ವೀರನಗೌಡ, ಕೌಷಿಕ್, ಯುವರಾಜ, ಉಪಸ್ಥಿತರಿದ್ದರು.


ಸುದ್ದಿ ಓದಿ