ಬಳ್ಳಾರಿ: ಸುಗಮವಾಗಿ ಜರುಗಿದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳು

ಬಳ್ಳಾರಿ: ಸುಗಮವಾಗಿ ಜರುಗಿದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳು

ಲೋಕದರ್ಶನ ವರದಿ

ಬಳ್ಳಾರಿ 13:ಕರ್ನಾಟಕ ಸರ್ಕಾರದ  ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆ.ಎಸ್.ಕ್ಯು.ಎ.ಎ.ಸಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಮೊರಾಜರ್ಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ  ನಗರದ ಸರಳಾದೇವಿ ಸತೀಶಚಂದ್ರ ಅಗರವಾಲ್ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದವು.

ಸದರಿ ಪರೀಕ್ಷೆಗೆ ಒಟ್ಟು 2,031 ಅಭ್ಯಥರ್ಿಗಳು ಅಜರ್ಿ ಹಾಕಿದ್ದು, ಒಟ್ಟು 1,965 ಅಭ್ಯಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದರು. 66 ಅಭ್ಯರ್ಥಿಗಳು ಗೈರಾಗಿದ್ದರು ಮೋಕಾ ಮೊರಾರ್ಜಿದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ತಾಲೂಕು ಪ್ರವೇಶ ಪರೀಕ್ಷಾಧಿಕಾರಿಗಳಾದ ಅನುಸೂಯ ಅವರು ತಿಳಿಸಿದ್ದಾರೆ.

ಪರೀಕ್ಷಾ ವೀಕ್ಷಣೆಗೆ ಜಿಲ್ಲಾ ಪ್ರವೇಶ ಪರೀಕ್ಷಾಧಿಕಾರಿ ಎನ್.ರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿದರ್ೇಶಕ ರವಿಶಂಕರ ಹಾಗೂ ಕರ್ನಾಟಕವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಹಾಯಕ ಅಭಿಯಂತರರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


ಸುದ್ದಿ ಓದಿ