ಬಳ್ಳಾರಿ: ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶಪ್ರಸಾದ್ ಬಿಜೆಪಿಗೆ ಸೇರ್ಪಡೆ

ಬಳ್ಳಾರಿ:  ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶಪ್ರಸಾದ್ ಬಿಜೆಪಿಗೆ ಸೇರ್ಪಡೆ

ಬಳ್ಳಾರಿ 19: ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರ ಸಹೋದರ ಬಿ.ವೆಂಕಟೇಶಪ್ರಸಾದ್ ಇತ್ತೀಚಿನ ಬೆಳವಣಿಗೆಗಳ ಪ್ರಕಾರ ನಿರೀಕ್ಷೆಯಂತೆ ನಗರದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಬಿಜೆಪಿ ಬಾವುಟ ಹಿಡಿದು ಸೇರಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಮಾತನಾಡಿ ಬಿ.ವೆಂಕಟೇಶಪ್ರಸಾದ್ ಯಾವುದೇ ಶರತ್ತುಗಳಿಲ್ಲದೆ ಪ್ರಧಾನಿ ನರೇಂದ್ರಮೋದಿ ಯೋಜನೆಗಳನ್ನು ಮೆಚ್ಚಿ ಬಿಜೆಪಿ ಪಕ್ಷದ ಸಿದ್ದಾಂತವನ್ನು ಒಪ್ಪಿ ಸೇರಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ವಿದಾನ ಪರಿಷತ್ ಸದಸ್ಯ ಮೃತ್ಯುಂಜಯ್ಯ ಜಿನಿಗಾ, ಮಾಜಿ ಜಿಲ್ಲಾಧ್ಯಕ್ಷ ಗುತ್ತಿಗನೂರು ವೀರುಪಾಕ್ಷಗೌಡ, ಜಿಲ್ಲಾ ಪ್ರದಾನ ಕಾರ್ಯದರ್ಶಿ  ಮುರಾರಿಗೌಡ, ಜಿ.ಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಎ.ಎಂ.ಸಂಜಯ್, ಈ ಶಿವಕುಮಾರ, ಅನಿಲ್ ನಾಯ್ಡು, ಶ್ರೀನಿವಾಸ್ ಪಾಟಿಲ್ ಸೇರಿದಂತೆ ನೂರಾರು ಜನ ಕಾರ್ಯಕರ್ತರು, ಮುಖಂಡರುಗಳು ಹಾಜರಿದ್ದರು. 

ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಬಿ.ವೆಂಕಟೇಶಪ್ರಸಾದ್ ಟಿಕೇಟ್ ಗಾಗಿ ಬಿಜೆಪಿ ಸೇರಿಲ್ಲ. ಸದೃಡ ಭಾರತಕ್ಕಾಗಿ ಸೇರಿದದ್ದೇನೆ: 

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ಬಯಸಿ ನಾನು ಬಿಜೆಪಿ ಪಕ್ಷ ಸೇರುತ್ತಿಲ್ಲ. ಯಾವುದೇ ಶರತ್ತಿಲ್ಲದೇ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಸದೃಡಭಾರತಕ್ಕಾಗಿ ಸೇರಿದದ್ದೇನೆ ಎಂದರು. ಅವರು ನಗರದ ಬಿಜೆಪಿ ಕಛೇರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಈ ಸುದ್ದಿಗೋಷ್ಟಿಯನ್ನು ನಡೆಸಿ ಮಾತನಾಡಿ ನನಗೆ ಟಿಕೇಟ್ ನೀಡುತ್ತಾರೆಂಬ ಆಶ್ವಾಸನೆ ನೀಡಿಲ್ಲ. ಆದರೂ ಅಜರ್ಿ ಸಲ್ಲಿಸಿದ್ದೆ. ಕೊಡುವುದು ಬಿಡುವುದು ಪಕ್ಷದ ಹೈ.ಕಮಾಂಡ್ಗೆ ಬಿಟ್ಟಿದ್ದು. ಪಕ್ಷ ಹೇಳಿದಂತೆ ನಡೆಯುತ್ತೇನೆ. ನಿಮ್ಮ ಸೇರ್ಪಡೆಗೆ ಶ್ರೀರಾಮುಲು, ಸೋಮಶೇಖರರೆಡ್ಡಿ ಅವರು ಬಂದಿಲ್ಲ ಎಂದು ಕೇಳಿದ ಪ್ರಶ್ನೆಗೆ ಅವರನ್ನು ಈಗಾಗಲೇ ಭೇಟಿ ಮಾಡಿರುವೆ. ನಾನು ಬಿಜೆಪಿ ಸಿದ್ದಾಂತವನ್ನು ಮೆಚ್ಚಿ ಈಗಾಗಲೇ ಪಕ್ಷದ ಮುಖಂಡರುಗಳಾದ ಸಂತೋಷ.ಜಿ, ಬಿ,ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶ್ರೀರಾಮುಲು, ನಳಿನ್ ಕುಮಾರ ಕಟಿಲ್, ಅಲ್ಲದೇ ಜಿಲ್ಲೆಯ ಮುಖಂಡರುಗಳಾದ ಸಣ್ಣಪಕಿರಪ್ಪ, ಸುರೇಶಬಾಬು, ಜೆ.ಶಾಂತಾ, ಸೋಮಶೇಖರರೆಡ್ಡಿ ಅವರನ್ನು ಸಂಪರ್ಕಿಸಿ  ಪಕ್ಷ ಸೇರುತ್ತಿದ್ದೇನೆ ಎಂದರು. ನಂತರ ಮತ್ತೊಂದು ಪ್ರಶ್ನೆಗೆ ನನ್ನ ಸಹೋದರ ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದಾರೆ. ಆಗಂತ ನನಗೂ ಅವರಿಗೂ ರಾಜಕೀಯ ಸಂಬಂದವಿಲ್ಲ. ಶಾಸಕ ನಾಗೇಂದ್ರ ಅವರು ಬಿಜೆಪಿಗೆ ಬರಬಹುದು ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ. ರಾಜಕೀಯವಾಗಿ ನಾನು ನನ್ನ ಸ್ವಂತ ನಿಧರ್ಾರವನ್ನು ತೆಗೆದುಕೊಂಡಿದ್ದೇನೆ ಎಂದರು. ಬೆಳಿಗ್ಗೆ 11 ಗಂಟೆಗೆ ಸೇರ್ಪಡೆ ಕಾರ್ಯಕ್ರಮ ಎಂದು ಮಾದ್ಯಮದವರಿಗೆ ಹೇಳಿದ್ದರು. ಆದರೆ ಬರುತ್ತೇವೆ ಎಂದು ಹೇಳಿದ್ದ ಶ್ರೀರಾಮುಲು, ಮತ್ತು ಸೋಮಶೇಖರರೆಡ್ಡಿ ಬಾರದ ಕಾರಣ ಕೊನೆಗೆ ಮದ್ಯಾಹ್ನ 12 ಗಂಟೆಯ ನಂತರ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಸೇರಿದರು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಅದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಾಗ ಎಂದು ? ಯಾವಾಗ ?ಎಂಬ ಮಾದ್ಯಮದವರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ. 


ಸುದ್ದಿ ಓದಿ