ಬಳ್ಳಾರಿ

ಬಳ್ಳಾರಿ; ನೀರಿನ ಸಮಸ್ಯೆ: ಎಸ್.ಯು.ಸಿ.ಐ ಸಂಘಟನೆಯಿಂದ ಮನವಿ

ಬಳ್ಳಾರಿ; ನೀರಿನ ಸಮಸ್ಯೆ: ಎಸ್.ಯು.ಸಿ.ಐ ಸಂಘಟನೆಯಿಂದ ಮನವಿ

ಬಳ್ಳಾರಿ 19: ಮುಂಡ್ರಗಿಯಲ್ಲಿ ಬಹುತೇಕವಾಗಿ ಬಡವರು, ದುಡಿಯುವ ಜನರೇ ವಾಸವಾಗಿದ್ದು, ಹಲವು ಮೂಲಭೂತ ಸೌಕರ್ಯದ ಕೊರತೆಯಿಂದ ಶೋಚನೀಯ ಪರಿಸ್ಥಿತಿಗೆ ಒಳಗಾಗಿದ್ದಾರೆ. ಕುಡಿಯುವ ನೀರಿನ ಸರಬರಾಜು 10-13 ದಿನಕ್ಕೊಮ್ಮೆ ಮಾಡಲಾಗುತ್ತಿದ್ದು, ಜನರು ಈ ಬಿಸಿಲಿನ ಬೇಗೆಯಲ್ಲಿ ತತ್ತರಿಸುತ್ತಿದ್ದಾರೆ. 

ಈ ಹಿಂದೆ ಮುಂಡ್ರಗಿಯ ಆಶ್ರಯ ಕಾಲನಿಯಲ್ಲಿರುವ ಬೋರ್ನಿಂದ ದಿನ ಬಳಕೆಗೆ ಸಾಕಷ್ಟು ನೀರು ದೊರೆಯುತ್ತಿತ್ತು. ಆದರೆ ಬೋರ್ ರಿಪೇರಿಯಾಗಬೇಕೆಂದು  ಅಥವಾ ಇನ್ನಾವುದೇ ಕಾರಣಗಳಿಗೆ ಬೋರ್ ಯಂತ್ರವನ್ನು ತೆಗೆದುಕೊಂಡು ಹೋಗಿ 7-8 ತಿಂಗಳು ಕಳೆದಿವೆ. ಆದರೆ ಇನ್ನೂವರೆಗೆ ಬೋರ್ ಮರು ಜೋಡಿಸುವುದಾಗಲಿ, ಬೋರ್ ಮೂಲಕ ನೀರು ಸರಬರಾಜು ಮಾಡುವುದಾಗಲಿ ಆಗುತ್ತಿಲ್ಲ. 

ಈ ವಿಷಯದಲ್ಲಿ ಮಹಾನಗರ ಪಾಲಿಕೆಯ ನಿರ್ಲಕ್ಷ್ಯತನ ನಿಜಕ್ಕೂ ಬೇಸರ ತರಿಸುವಂತದ್ದು. ಆಶ್ರಯ ಕಾಲನಿಯಲ್ಲಿರುವ 2 ರಸ್ತೆಗಳಿಗೆ ಮಾತ್ರ ಸಿಸಿ ರಸ್ತೆ ಹಾಕದೆ, ವಷರ್ಾನುಗಟ್ಟಲೆಯಿಂದ ನಿರ್ಲಕ್ಷ್ಯವಹಿಸಲಾಗಿದೆ. ತಗ್ಗು-ದಿಣ್ಣೆಗಳಿಂದ ಕೂಡಿದ ಈ ರಸ್ತೆಗಳಲ್ಲಿ ರಾತ್ರಿ ಹೊತ್ತು ಮಕ್ಕಳು-ವೃದ್ಧರು ಓಡಾಡುವುದೇ ಕಷ್ಟಕರವಾಗಿದೆ. 

ಈ ಹಿನ್ನಲೆಯಲ್ಲಿ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕಾಗಿ ಮನವಿ ಪತ್ರವನ್ನು ನೀಡಿದರು. ಪತ್ರದಲ್ಲಿ ಬರೆದಿರುವಂತೆ  ಮುಂಡ್ರಗಿಯ ಆಶ್ರಯ ಕಾಲನಿಯಲ್ಲಿರುವ ಬೋರ್ನ್ನು ರಿಪೇರಿ ಮಾಡುವುದಷ್ಟೆ ಅಲ್ಲದೆ, ಬೋರ್ ಮೂಲಕ ನೀರು ಸರಬರಾಜು ಆಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಆಶ್ರಯ ಕಾಲನಿಯಲ್ಲಿ ಮತ್ತೊಂದು ಬೋರ್ ಪಂಪ್ ಅಳವಡಿಸಬೇಕು. ಹಾಗೆಯೇ ಮುಂಡ್ರಗಿಯ ಬೇರೆ ಕಡೆಯಲ್ಲೂ ಅಗತ್ಯವಿರುಷ್ಟು ಬೋರ್ ಪಂಪ್ ಅಳವಡಿಸಿ, ಆ ಮೂಲಕ ಇಡೀ ಬಡಾವಣೆಗೆ ನೀರು ಸರಬರಾಜು ಮಾಡಬೇಕು, ಮುಂಡ್ರಗಿಯ ಆಶ್ರಯ ಕಾಲನಿಯಲ್ಲಿ ಉಳಿದಿರುವ 2 ರಸ್ತೆಗಳಿಗೆ ಸಿಸಿ ರಸ್ತೆ ಹಾಕಲು ಕೂಡಲೆ ಕ್ರಮಕೈಗೊಳ್ಳಬೇಕು, ಆಶ್ರಯ ಕಾಲನಿಯಲ್ಲಿರುವ ಮಳೆ ನೀರಿನ ಕಾಲುವೆಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರವನ್ನು ಎಸ್.ಯು.ಸಿ.ಐ (ಸಿ) ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಕಛೇರಿಯಲ್ಲಿ ನೀಡಲಾಯಿತು. ಆಯುಕ್ತರ ಪರವಾಗಿ ಸಹಾಯಕ ಕಾರ್ಯನಿವರ್ಾಹಕ ಇಂಜಿನಿಯರ್ ಅಭೀಷೇಕ್ಅವರು ಮನವಿ ಪತ್ರ  ಸ್ವೀಕರಿಸಿದರು. 

ದಿನಾಂಕ ಮೇ 20ರಿಂದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. 

ಬೋರ್ ಪಂಪ್ನ್ನು ರಿಪೇರಿ ಮಾಡಿಸುವುದಾಗಿ ಅಥವಾ ಹೊಸ ಬೋರ್ ಪಂಪ್ ಅಳವಡಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಸಿಸಿ ರಸ್ತೆ, ಕಾಲುವೆ ಸ್ವಚ್ಛತೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಡಾ.ಪ್ರಮೋದ್, ಗೋವಿಂದ್, ಸದಸ್ಯರಾದ ಈಶ್ವರಿ, ಮುಂಡ್ರಿಗಿಯ ಹುಸೇನ್ ಸಾಬ್, ರಸೂಲ್ ಬೀ, ಶೇಕನ್ ಬೀ ಮುಂತಾದವರು ಉಪಸ್ಥಿತರಿದ್ದರು.


ಸುದ್ದಿ ಓದಿ