ಬಳ್ಳಾರಿ; ಜಾನೆಕುಂಟೆ ಶಾಲೆ ಸರಕಾರಿ ಶಾಲೆ ದತ್ತು ಪಡೆದು ಅಭಿವೃದ್ದಿ
ಬಳ್ಳಾರಿ 19: ಮೇ.20 ರಂದು, ಬೆಳಗ್ಗೆ 9 ಗಂಟೆಗೆ ಆರ್ವೈಎಂಇಸಿ ತಾಂತ್ರಿಕ ಮಹಾವಿದ್ಯಾಲಯದ "ಲೀಡ್ನ ಸುಮಾರು 200 ವಿದ್ಯಾಥರ್ಿಗಳು ಜಾನೇಕುಂಟೆ ಹಳ್ಳಿಗೆ ತೆರಳಿ ಸಸಿ ನೆಡುವುದು, ಹಳ್ಳಿಯ ಜನರ ತಿಳುವಳಿಕೆಗಾಗಿ ಡಿಜಿಟಲೈಸೇನ್ನ ಮಾಹಿತಿಗಳಾದ ಪೇಟಿಎಂಗಳ ಬಳಕೆ, ಭೀಮ್ಆಪ್ನ ಬಳಕೆ, ಮೊಬೈಲ್ ಮೂಲಕ ಗ್ಯಾಸ್ ಬುಕಿಂಗ್ ಮಾಡುವುದು ಹೇಗೆ, ಮಹಿಳಾ ಸಬಲೀಕರಣ, ಸ್ವಚ್ಚ ಭಾರತ ಅಭಿಯಾನ, ಸಾವಯವ ಕೃಷಿಯ ಬಗ್ಗೆ ಜಾಗೃತಿ ಹೀಗೆ ಹಲವಾರು ರೀತಿಯ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಲಿದ್ದಾರೆ.
ದಾನಿಗಳ ನೆರವಿನಿಂದ ಸುಮಾರು 6 ಲಕ್ಷರೂ ವೆಚ್ಚದಲ್ಲಿ, ಹಳ್ಳಿಯಲ್ಲಿ ಅಂಗನವಾಡಿಯ ಕಟ್ಟಡದ ನಿಮರ್ಾಣ, ಸರಕಾರಿ ಶಾಲೆಯಲ್ಲಿ ತರಗತಿಗಳ ನಿಮರ್ಾಣ, ಶೌಚಾಲಯಗಳ ನಿಮರ್ಾಣ, ಸುಸಜ್ಜಿತ ಲೈಬ್ರರಿಯ ಸ್ಥಾಪನೆ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್.ಬಸವರಾಜ್, ಆಡಳಿತ ಮಂಡಳಿಯ ಸದಸ್ಯರಾದ ಅರವಡಿಗಿ ಪ್ರಭು, ಕೆ.ಎಂ.ಶಿವಮೂತರ್ಿ, ಊರಿನ ಮುಖಂಡರಾದ ಜಾನೇಕುಂಟೆ ಬಸವರಾಜ್, ಪ್ರಾಶುಪಾಲರಾದ ಡಾ.ಕುಪ್ಪಗಲ್ ವೀರೇಶ, ಡಾ.ಹನುಮಂತರೆಡ್ಡಿ ಇತರರು ಭಾಗವಹಿಸಲಿದ್ದಾರೆ.