ಯಾವುದೆ ಉನ್ನತ ಹುದ್ದೆಯಲ್ಲಿದ್ದರೂ ಸಂಸ್ಕಾರವಂತರಾಗಿ ಬಾಳಿ: ಲಮಾಣಿ
ಅಥಣಿ 09: ಕೃಷಿಕರಿರಲಿ ರೈತರಿರಲಿ ಅಧಿಕಾರಿಯಾಗಿರಲಿ ಯಾವುದೆ ಉನ್ನತ ಹುದ್ದೆಯಲ್ಲಿದ್ದರೂ ಜೀವನದೊಳಗೆ ಸಂಸ್ಕಾರವಂತರಾಗಿ ನೀವು ಬಾಳಿ, ನಿಮ್ಮ ಮಕ್ಕಳನ್ನು ಬದುಕಲಿಕ್ಕೆ ಬಾಳು ಕೊಡಿ ಎಂದು ಶಿಕ್ಷಕ ಸಿ ಕೆ ಲಮಾಣಿ ಕರೆ ನೀಡಿದರು.
ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸನ್ 2003 ಹಾಗೂ 2004 ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡ ಗುರುನಮನ ಮತ್ತು ಅಪೂರ್ವ ಸ್ನೇಹಸಂಗಮ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಅವತ್ತು ನಾವು ಕೊಟ್ಟ ವಿದ್ಯೆಯಿಂದ ಇವತ್ತು ನೀವು ದೊಡ್ಡ ವ್ಯಕ್ತಿಗಳಾಗಿದ್ದು ಇದಕ್ಕಿಂತ ಸಂತೋಷ ಬೇರೊಂದಿಲ್ಲ ಶಿವಯೋಗಿಗಳ ನಾಡಿನಲ್ಲಿ ನಾವು ಮೊದಲು ಬಂದಾಗ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೆ ಇದ್ದರೂ ಕೂಡ ಇದೇ ಶಾಲೆಯಲ್ಲಿ ನಾವು ಪಾಠ ಮಾಡಬೇಕು ಅಂತಾ ಅನಿಸಿದ್ದು ಅದು ಈ ಮಣ್ಣಿನ ಪುಣ್ಯ ಮತ್ತು ಇಲ್ಲಿರುವ ವಿದ್ಯಾರ್ಥಿಗಳು ಈ ಶಾಲೆಯನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದರು.
ಇನ್ನೊರ್ವ ಶಿಕ್ಷಕ ಜಿ ಎಸ್ ಹಂಚಿನಾಳ ಮಾತನಾಡಿ ನನ್ನ 25 ವರ್ಷದ ಸೇವಾ ಅನುಭವದಲ್ಲಿ ನದಿ ಇಂಗಳಗಾಂವ ಮಕ್ಕಳನ್ನು ನೆನೆಯದ ದಿನಗಳಿಲ್ಲ ಯಾಕೆಂದರೆ ಅಂತಹ ಸಂಸ್ಕಾರ, ಮೌಲ್ಯ ಈ ಪೂಣ್ಯ ಭೂಮಿಯಲ್ಲಿ ಹುಟ್ಟಿಕೊಂಡಿದೆ, ನಮ್ಮ ಕೈಯಲ್ಲಿ ಕಲಿತವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಹಾಗೆ ಅವರಿಗೆ ಶಿಕ್ಷಣ ನೀಡುವ ಸ್ಪರ್ಧೆ ಶಿಕ್ಷಕರಲ್ಲಿ ಇರಬೇಕು. ಕೆಲಸ ಮುಖ್ಯವಲ್ಲ ಆದರೆ ಅದು ಜೀವನ ರೂಪಿಸಿಕೊಳ್ಳುವಂತಿರಬೇಕು ಅಷ್ಟೇ ಅಲ್ಲದೆ ನಾವು ಎಂದಾದರೂ ಮುಂದೆ ಬರಬೇಕಾದರೆ ತಂದೆ ತಾಯಿ ಆಶೀರ್ವಾದದ ಜೊತೆಯಲ್ಲಿ ಗುರುವಿನ ಮಾರ್ಗದರ್ಶನ ಅವಶ್ಯಬೇಕು. ಅದಕ್ಕಾಗಿ ಇವತ್ತು ನನ್ನ ಕೈಯಲ್ಲಿ ಕಲಿತವರು ನನಗಿಂತ ಹೆಚ್ಚಿನ ಹುದ್ದೆಯಲ್ಲಿ ಇರೊದು ಶಿಕ್ಷಣ ನೀಡಿದ್ದಕ್ಕೆ ಸ್ವಾರ್ಥಕವಾಯಿತು ಎಂದರು.
ಇನ್ನೂ ಶಿಕ್ಷಕರಾದ ಈ ಎನ್ ಚಂದ್ರಗಿರಿ, ಜಿ ಆರ್ ಆಸಂಗಿ, ಸಿ ಜೆ ಗಸ್ತಿ, ಪಿ ಡಿ ಕೋಳೆಕರ, ಎ ಬಿ ಕಾಂಬಳೆ, ಎಸ್ ಬಿ ಹೆಬ್ಬಾಳೆ, ಮಾತನಾಡಿದರು.
20 ವರ್ಷಗಳ ನಂತರ ದೇಶ, ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳೆಲ್ಲರೂ ತಮಗೆ ಅರಿವಿನ ಪಾಠ ಹೇಳಿದ ಗುರುಗಳಿಗೆ ನಮನ ಸಲ್ಲಿಸುವ ಮತ್ತು ತಾವು ಕಲಿತ ಶಾಲೆಯಲ್ಲಿ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕಿದರು. ವಿನಾಯಕ ಆಸಂಗಿ, ಶಿವಾನಂದ ಮಾಳಿ, ವಿನೋದ ಕಾಂಬಳೆ, ಜಕ್ಕವ್ವ ಅರಳಿಕಟ್ಟಿ,ಹಾಗೂ ಪ್ರೀಯಂಕಾ ಬೊಮ್ಮನ್ನವರತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಅಗಲಿದ ಶಿಕ್ಷಕ, ಗೆಳೆಯರನ್ನು ನೆನೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಲ್ಲ ಶಿಕ್ಷಕ ವೃಂದವನ್ನು ಹಾಗೂ ಭಾರತೀಯ ಸೈನ್ಯದಲ್ಲಿ ಸೇವೆ ಮಾಡುತ್ತಿರುವ ಹಳೆ ವಿದ್ಯಾರ್ಥಿಗಳಾದ ಸುರೇಶ ಮಧಬಾವಿ,ಆರಿಫ್ ನದಾಪ,ಮುರಿಗೆಪ್ಪ ಮುದಿಗೌಡರ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.
ಸಾನಿಧ್ಯವನ್ನು ಸಿದ್ಧಲಿಂಗ ಮಾಹಾಸ್ವಾಜೀಗಳು ವಹಿಸಿದರು, ಪ್ರಾಂಶುಪಾಲರಾದ ಶ್ರೀಶೈಲ ಮಶ್ಯಾಳೆ,ಶಿಕ್ಷಕರಾದ ಶ್ರೀಶೈಲ ಮಲಗೌಡರ, ಭರತೇಶ ಸನದಿ, ಶಿವಶಂಕರ ಚನ್ನಣ್ಣವರ, ಶಿವಾನಂದ ಚನಗೌಡರ,ಸಿದ್ಧಾರೂಡ ಚನಗೌಡರ, ಸಂಗಪ್ಪ ಠಕ್ಕಣ್ಣವರ, ಸದಾಶಿವ ಡಾಬೋಳಿ, ಮಹಾತೇಶ ಮಿರ್ಜಿ, ಅನಸೂಯಾ ಘೂಳಪ್ಪನ್ನವರ, ಬಸಮ್ಮ ಬಾಗೊಜೀಮಠ, ಶಿವಲೀಲಾ ಚನಗೌಡರ, ರೂಪಾ ಉಳ್ಳಾಗಡ್ಡಿ, ಅನೀತಾ ಅಂಬಿ, ಸೇರಿದಂತೆ 2003 ಮತ್ತು 2004 ನೇ ಸಾಲಿನ ಎಲ್ಲ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರೂಪಣೆ ಸಂಗಮೇಶ ಹಚ್ಚಡದ, ಸ್ವಾಗತ ಶಂಕರ ಪಾಟೀಲ, ಹಾಗೂ ವಂದನಾರೆ್ಣ ಪ್ರಭು ಗುಡೆನ್ನವರ ಮಾಡಿದರು.