ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಬುನಾದಿ ತರಬೇತಿ
ಲೋಕದರ್ಶನ ವರದಿ
ಬೈಲಹೊಂಗಲ25: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಇರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸರ್ಕಾರದಿಂದ ಬುನಾದಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೆನಿ ಹೇಳಿದರು.
ಅವರು ಸೋಮವಾರ ತಾಲೂಕಿನ ವಕ್ಕುಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಇಂಗ್ಲಿಷ್ ಗಣಿತ, ವಿಜ್ಞಾನ ವಿಷಯಗಳ ಬುನಾದಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಸತಿ, ಊಟ ಒದಗಿಸುವುದರ ಜತೆಗೆ ಓದಿನಲ್ಲೂ ಮುಂದೆ ತರುವ ಉದ್ದೇಶದಿಂದ ಇಲಾಖೆಯು ಬುನಾದಿ ಕಾರ್ಯಕ್ರಮ ರೂಪಿಸಿದೆ ಎಂದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಾಂತಾ ಮರಿಗೌಡರ ಮಾತನಾಡಿ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸುಧಾರಣೆಗೆ ಆದ್ಯತೆ ನೀಡಿದ್ದೇವೆ. ಅವರು ಉತ್ತಮ ಅಂಕ ಗಳಿಸಿ, ಶೇ 100 ಫಲಿತಾಂಶ ದಾಖಲಿಸಬೇಕು ಎಂಬ ಆಶಯವಾಗಿದೆ ಎಂದರು.
ಪ್ರಾಚಾರ್ಯ ಈರಣ್ಣ ಮುನವಳ್ಳಿ, ಶಿಕ್ಷಕರಾದ ವಿ.ಬಿ.ಚರಲಿಂಗಮಠ, ಪಿ.ಡಿ.ಹಿರೇಮಠ, ಎಮ.ಎಸ್.ಕುಂಬಾರಗೊಪ್ಪ, ಸಮರೀನಬಾನು ನದಾಫ, ರಮೇಶ ಎಮ್ಮಿ, ಗುರುನಾಥ ಬಡಿಗೇರ, ರಮೇಶ ದೇವರಮನಿ, ಚನ್ನವ್ವ ಪಾಟೀಲ ಇದ್ದರು.
ಬೈಲಹೊಂಗಲ, ರಾಮದುರ್ಗ, ಸವದತ್ತಿ, ಬೆಳಗಾವಿ, ಖಾನಾಪುರ ತಾಲೂಕುಗಳ 225 ವಿದ್ಯಾರ್ಥಿಗಳು ಬುನಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು