ಶಿಕ್ಷಣದ ಮೂಲ ಉದ್ದೇಶ ಹಾಗೂ ಪ್ರತಿಭಾಕಾರಂಜಿ ಕಾರ್ಯಕ್ರಮ
ಶಿಕ್ಷಣದ ಮೂಲ ಉದ್ದೇಶ ಹಾಗೂ ಪ್ರತಿಭಾಕಾರಂಜಿ ಕಾರ್ಯಕ್ರಮ
ಬ್ಯಾಡಗಿ 05 ;ಮಕ್ಕಳ ಪ್ರತಿಭೆ ಹೋರಾ ಹಾಕುವ ಒಂದು ಸೂಕ್ತ ವೇದಿಕೆ ಪ್ರತಿಭಾಕಾರಂಜಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ್. ಬ್ಯಾಡಗಿ. ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುವುದು ಶಿಕ್ಷಣದ ಮೂಲ ಉದ್ದೇಶ ಹಾಗೂ ಪ್ರತಿಭಾಕಾರಂಜಿ ಕಾರ್ಯಕ್ರಮ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಒಂದು ಕಾರ್ಯಕ್ರಮ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಕೆ ಮಲ್ಲಿಕಾರ್ಜುನ್ ಹೇಳಿದರು ಪಟ್ಟಣದ ಎನ್ ಬಿ ಬಿ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಇಂದು 2024. 25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕಾರಂಜಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಪ್ರಗತಿ, ನಾಡಿನ ನೃತ್ಯ ಹಾಗೂ ಗ್ರಾಮೀಣ ಕಲೆ ಉಳಿಸಲು ಹಾಗೂ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿಯು ರೂಪಗೊಂಡಿದೆ. ಮಕ್ಕಳ ಮನದಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮಹತ್ತರ ಜವಬ್ದಾರಿ ಶಿಕ್ಷಕರದ್ದಾಗಿದೆ. ಈ ನಿಟ್ಟಿನಲ್ಲಿ ಪೋಷಕರ ಹೊಣೆಯು ಇರಬೇಕು.ಎಂದು ಹೇಳಿದರು. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ ಮಾತನಾಡಿ ಶಾಲಾ ಮಕ್ಕಳು ತಮ್ಮಲ್ಲಿ ಅಡಗಿರುವ ಸುಕ್ತ ಪ್ರತಿಭೆ ಹೊರಹಾಕಲು ಪ್ರತಿಭಾರಂಜಿ ವೇದಿಕೆ ಸೂಕ್ತವಾಗಿದೆ. ಎಲ್ಲಾ ಮಕ್ಕಳು ಈ ವೇದಿಕೆಯ ಪ್ರಯೋಜನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿ ತರಬೇಕು. ತೀಪುಗಾರರ ತಾರತಮ್ಯ, ಪೂರ್ವಾಗ್ರಹ ಪೀಡಿತರಾಗದೆ ನೈಜ ಪ್ರತಿಭೆಯನ್ನು ಆಯ್ಕೆ ಮಾಡಬೇಕು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕರು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಎಮ್ ಎಫ್ ಹುಲ್ಯಾಳ. ಚಮನ್ ಸಾಬ್ ಹುಣಸಿ ಮರದ. ಉಮಾಪತಿ. ಎಂಎಫ್ ಕರಿಯಣ್ಣನವರ್. ವೈಟಿ ಹೆಬ್ಬಳ್ಳಿ. ಮೋಹನ್ ಕುಮಾರ್. ಜಿ ಬಿ ಬೂದಿಹಾಳ. ಸಿ ಬಿ ಪಾಟೀಲ. ನಂಜುಂಡಯ್ಯ ಹಿರೇಮಠ್ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕ ಶಿಕ್ಷಕರು ಸಂಘಟನೆಗಳು ಬ್ಯಾಡಗಿ ಸಿಆರ್ಿ. ಬಿ ಆರ್ ಪಿ. ಬಿ ಐ ಇ ಆರ್ ಟಿ ಹಾಗೂ ಶಿಕ್ಷಕ ಸಂಯೋಜಕರು ಮತ್ತು ಬ್ಯಾಡಗಿ ತಾಲೂಕಿನ ಸಮಸ್ತ ಶಿಕ್ಷಕ ವೃಂದ .ಮುದ್ದು ಮಕ್ಕಳು ಉಪಸ್ಥಿತರಿದ್ದರು.