ಅಥಣಿ

ಬಸವೇಶ್ವರ ಏತ ನೀರಾವರಿ: ಜೂನ್ ಅಂತ್ಯದೊಳಗಾಗಿ ಚಾಲನೆ ; ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಉಚಿತ ಆರೋಗ್ಯ, ಕಣ್ಣು ತಪಾಸಣೆ, ರಕ್ತದಾನ ಶಿಬಿರಕ್ಕೆ ಚಾಲನೆ

ಬಸವೇಶ್ವರ ಏತ ನೀರಾವರಿ: ಜೂನ್ ಅಂತ್ಯದೊಳಗಾಗಿ ಚಾಲನೆ ; ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಉಚಿತ ಆರೋಗ್ಯ, ಕಣ್ಣು ತಪಾಸಣೆ, ರಕ್ತದಾನ ಶಿಬಿರಕ್ಕೆ ಚಾಲನೆ

ಲೋಕದರ್ಶನ ವರದಿ 



ಅಥಣಿ 31: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಪ್ರಥಮ ಹಂತದಲ್ಲಿ ಎರಡು ಪಂಪಸೆಟ್ಟಗಳ ಮೂಲಕ ನೀರು ಕೊಡುವ ಯೋಜನೆಗೆ ಜೂನ್ ಅಂತ್ಯದೊಳಗಾಗಿ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅವರು ಅಥಣಿ ಶುಗರ‌್ಸ ಆವರದಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ್ ಆಯೋಜಿಸಿದ್ದ ಉಚಿತ ಆರೋಗ್ಯ, ಕಣ್ಣು ತಪಾಸಣೆ ಹಾಗೂ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.  

      ಕರೋನಾ ರೋಗದ ಹಿನ್ನೆಲೆಯಲ್ಲಿ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳದೇ ಜನಪರ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಪಕ್ಷದ ಕಾರ್ಯಕರ್ತರು, ಶ್ರೀಮಂತ ಪಾಟೀಲ ಫೌಂಡೇಶನ್, ಅಭಿಮಾನಿಗಳು ನನ್ನ ಹುಟ್ಟು ಹಬ್ಬದ ನಿಮಿತ್ಯ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಚರಿಸಿದ್ದಾರೆ ಎಂದರು. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತ ತಲುಪಬೇಕಿತ್ತು ಆದರೆ ಕರೋನಾ ರೋಗದ ಎರಡನೇಯ ಅಲೆಯ ತೀವೃತೆಗೆ ಸಿಲಿಕಿದ ಕಾರ್ಮಿಕರು ಕೆಲಸ ಬಿಟ್ಟು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದ್ದರಿಂದಲೇ ಈ ಕಾರ್ಯ ಮಂದಗತಿಯಲ್ಲಿ ಸಾಗಲು ಕಾರಣವಾಯಿತು ಎಂದ ಅವರು ಈಗ ಮತ್ತೆ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರಿಂದ ಕೆಲಸ ತೀವ್ರಗತಿ ಪಡೆದುಕೊಂಡಿದೆ ಎಂದರು.  

      ಕೆ.ಎಮ್‌.ಎಫ್ ಸದಸ್ಯ ಅಪ್ಪಾಸಾಹೇಬ ಅವತಾಡೆ ಮಾತನಾಡಿ, ಶ್ರೀಮಂತ ಪಾಟೀಲರು ಅಥಣಿ ಶುಗರ‌್ಸ ಮೂಲಕ ಕಾಗವಾಡ ಭಾಗದ ನೂರಾರು ಎಕರೆ ಭೂಮಿಗೆ ನೀರಾವರಿ ಒದಗಿಸಿದ್ದಾರೆ ಇದರ ಪರಿಣಾಮ ಬರಡಾಗಿದ್ದ ಭೂಮಿಯಲ್ಲಿ ನೂರಾರು ಟನ್ ಕಬ್ಬು ಬೆಳೆಯಲಾಗುತ್ತಿದೆ ಇದರಿಂದ  ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದ ಅವರು ಶ್ರೀಮಂತ ಪಾಟೀಲ ಇವರ ಸತತ ಪ್ರಯತ್ನ ಮಾಡುತ್ತಿದ್ದರಿಂದಲೇ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಮುಕ್ತಾಯದ ಹಂತ ತಲುಪಿದೆ ಅಲ್ಲದೆ 100 ಕೊಟಿ ರಸ್ತೆ ಕಾಮಗಾರಿಗೆ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಅನುಮೋದನೆ ದೊರಕಿದೆ ಅಲ್ಲದೆ ಇನ್ನೆರಡು ದಿನಗಳಲ್ಲಿ ಕಾಗವಾಡ ಭಾಗದ 26 ಕೆರೆಗಳನ್ನು ತುಂಬಿಸುವ ಯೋಜನೆಗೂ ಮಂಜೂರಾತಿ ದೊರಕಲಿದೆ ಎಂದರು.  

      ಬಿಜೆಪಿ ಮುಖಂಡ ಶ್ರೀನಿವಾಸ ಪಾಟೀಲ ಮಾತನಾಡಿ, ಶ್ರೀಮಂತ ಪಾಟೀಲರ ಜನ್ಮ ದಿನದಂದು ಉಚಿತ ಕಣ್ಣು ತಪಾಸಣೆ ಜೊತೆಗೆ ಅವಶ್ಯ ಇದ್ದವರಿಗೆ ಉಚಿತವಾಗಿ ಕನ್ನಡಕವನ್ನೂ ಸಹ ಕೊಡಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣೆಯಲ್ಲಿ ಇಸಿಜಿ, ಸ್ಕ್ಯಾನ್ ಸೌಲಭ್ಯವನ್ನು ಇಂದು ಕಲ್ಪಿಸಲಾಗಿದೆ ಅವಶ್ಯ ಇರುವ ರೋಗಿಗಳಿಗೆ ಚಿಕಿತ್ಸೆಯನ್ನೂ ಕೂಡ ಕೊಡಲಾಗುವುದು, ರೈತರಿಗೆ ಉಚಿತವಾಗಿ ಪಂಪಸೆಟ್ಟ, ಅಂಗವಿಕಲರಿಗೆ ದ್ವಿಚಕ್ರ ವಾಹನ ಕೊಡಲಾಗಿದೆ  ಎಂದ ಅವರು ಶ್ರೀಮಂತ ಪಾಟೀಲರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ, ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.  

      ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಶೀತಲ್ ಪಾಟೀಲ ಮಾತನಾಡಿ, ಬದಲಾದ ರಾಜಕೀಯದಲ್ಲಿ ಶ್ರೀಮಂತ ಪಾಟೀಲರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇಂದಲೇ ಸ್ಪರ್ಧಿಸುತ್ತಾರೆ ಮತ್ತು ಕಾಗವಾಡ ಕ್ಷೇತ್ರದ ಮತದಾರರು ಕೂಡ ಶ್ರೀಮಂತ ಪಾಟೀಲರನ್ನೇ ಆಯ್ಕೆ ಮಾಡುವುದು ನಿಶ್ಚಿತ ಎಂದರು.  

ಬಸಗೌಡಾ ಪಾಟೀಲ (ನಾಗನೂರ), ಈಶ್ವರ ಕುಂಬಾರೆ, ಆರ್‌.ಎಮ್‌.ಪಾಟೀಲ, ನಾನಾಸಾಹೇಬ ಅವತಾಡೆ, ಶಿವರುದ್ದ ಘೂಳಪ್ಪನವರ, ತಿಪ್ಪಣ್ಣ ಭಜಂತ್ರಿ, ಅರುಣ ಬಾಂಸಿಗಿ ಸೇರಿದಂತೆ ಅಥಣಿ ಶುಗರ‌್ಸ ಕಾರಖಾನೆಯ ಸಿಬ್ಬಂದಿ, ಪಕ್ಷದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ