‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಶಿಗ್ಗಾವಿ ಕ್ಷೇತ್ರಕ್ಕೆ ಹೆಮ್ಮೆಯ ಗರಿ’
ಲೋಕದರ್ಶನ ವರದಿ
ಶಿಗ್ಗಾವಿ 02: ಬಸವರಾಜ ಬೊಮ್ಮಾಯಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೂಂಡಿರುವುದು ಹಾವೇರಿ ಜಿಲ್ಲೆಗೆ ವಿಶೇಷವಾಗಿ ಶಿಗ್ಗಾವಿ ಸವಣೂರ ಕ್ಷೇತ್ರಕ್ಕೆ ಹೆಮ್ಮೆಯಗರಿ ಮೂಡಿಸಿದೆ ಎಂದು ಹಾವೇರಿಜಿಲ್ಲಾ ಪಂಚಾಯತ ರಾಜ್ಯ ನಗರ ಘಟಕ ಸಂಚಾಲಕ ರಾಜುಕುನ್ನೂರ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿ.ಎಸ್.ಯಡಿಯೂರ್ಪನವರಂತಹ ಮೇರು ವ್ಯಕ್ತಿತ್ವದ ನಾಯಕನ ನಿರ್ಗಮನ ಹಾಗೂ ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಸಂದರ್ಭದಲ್ಲಿ ಬಲಿದು ಬಂದಿರುವ ಮುಖ್ಯಮಂತ್ರಿ ಗಾದಿ ಹೂವಿನ ಹಾಸಿಗೆಯಲ್ಲ ಆದರೆಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಬಸವರಾಜ ಬೊಮ್ಮಾಯಿಯವರಿಗೆ ಇದೆ ಎಂದರು.
ಬಸವರಾಜ ಬೊಮ್ಮಾಯಿಯವರು ಅವರ ತಂದೆ ಕಾಲದಿಂದಲೂ ರಾಜಕೀಯ ಅನುಭವ ಹೊಂದಿದ ಪಕ್ವರಾಜಕಾರಣಿ ಅವರ ಅವಧಿಯಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಿದ ಅವರು ಯಡಿಯೂರ್ಪನವರ ನಂತರ ಸಮರ್ಥವ್ಯಕ್ತಿಯನ್ನು ಬಿಜೆಪಿ ಹೈಕಮಾಂಡ್ ಗುರುತಿಸಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಂದ್ರ ಗೃಹ ಸಚಿವಅಮಿತ್ ಶಾ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಢಾ ಅವರಿಗೆ ಹಾಗೂ ರಾಜ್ಯದ ಎಲ್ಲ ನಾಯಕರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.