ಶಿಗ್ಗಾವ್

‘ಬಸವರಾಜ ಬೊಮ್ಮಾಯಿ ಸರ್ವಾಧಿಕಾರಿ ಧೋರಣೆ ಮಿತಿಮೀರಿದೆ’

‘ಬಸವರಾಜ ಬೊಮ್ಮಾಯಿ ಸರ್ವಾಧಿಕಾರಿ ಧೋರಣೆ ಮಿತಿಮೀರಿದೆ’

ಶಿಗ್ಗಾವಿ 27: ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಾಂತರಗೊಳ್ಳುವುದು ಸರ್ವೆ ಸಾಮಾನ್ಯ ಆದರೆ ತಾಲೂಕಿನ ಪರಿಸ್ಥಿತಿಯಲ್ಲಿ ಬಸವರಾಜ ಬೊಮ್ಮಾಯಿಯವರದು ಸರ್ವಾಧಿಕಾರಿ ಧೋರಣೆ ಮಿತಿಮೀರಿದೆ ಎಂದು ಹಾವೇರಿ ಜಿಲ್ಲಾ ಕಾಂಗ್ರೇಸ ಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಇರುವವರೆಗೂ ಯಾರನ್ನು ಬೆಳೆಯಲು ಬಿಡುವುದಿಲ್ಲ ಹಾಗೂ ಯಾರಿಗೂ ಸಹಿತ ಅವಕಾಶವನ್ನು ನೀಡುವ ಗೋಜಿಗೂ ಹೋಗುವುದಿಲ್ಲ ಅಲ್ಲದೇ ಎರಡನೇಯ ಹಂತದ ಮುಖಂಡರು ಹಾಗೂ ಕಾರ್ಯಕರ್ತರ ಅಭಿವೃದ್ದಿಯನ್ನು ಸಹಿಸುವುದಿಲ್ಲ ಅವರು ಇರುವವರೆಗೂ ಅವರು ಹೇಳಿದ ಹಾಗೇ ಕೇಳಿ ಇರಬೇಕು ಇಲ್ಲದಿದ್ದರೆ ಅವರ ವೈಯಕ್ತಿಕ ವರ್ಚಸಿನ ಮೇಲೆ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು. 

ಕಾಂಗ್ರೇಸ ಜಿಲ್ಲಾ ಅಧ್ಯಕ್ಷರಿಗೂ ಮತ್ತು ಮುಖಂಡರಿಗೂ ಬರುವ ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಪಕ್ಷದ ಪರ ಹಾಗೂ ಜನಸಾಮಾನ್ಯರಲ್ಲಿ ಬೆರೆಯುವ ಕಾರ್ಯಕರ್ತರು ಮತ್ತು ಮುಖಂಡರಿಗೆ ಅವಕಾಶ ಮಾಡಿಕೊಡಬೇಕು ಎಂದರು. 


ಸುದ್ದಿ ಓದಿ