ಶಿಗ್ಗಾವ್

ತಾಲೂಕಿನಲ್ಲಿ ಸೂರಿಲ್ಲಿದವರಿಗೆ ಸೂರು ಕಲ್ಪಿಸುವ ಸಂಕಲ್ಪ : ಬಸವರಾಜ ಬೊಮ್ಮಾಯಿ

ತಾಲೂಕಿನಲ್ಲಿ ಸೂರಿಲ್ಲಿದವರಿಗೆ ಸೂರು ಕಲ್ಪಿಸುವ ಸಂಕಲ್ಪ : ಬಸವರಾಜ ಬೊಮ್ಮಾಯಿ

ಶಿಗ್ಗಾವಿ 14: ಮನೆಯಿಲ್ಲದವರಿಗೆ ಮನೆಯೆಂಬ ವಾಜಪೇಯಿ ನಗರ ವಸತಿ ಯೋಜನೆಯಡಿ ಪಟ್ಟಣದಲ್ಲಿ ನೆಲೆಸಿರುವ ಸೂರಿಲ್ಲದವರಿಗೆ ಸೂರು ಅಂದರೆ ವಸತಿರಹಿತರಿಗೆ ತಾಲೂಕಿನಲ್ಲಿ ಸೂರು ಕೊಡಿಸಿದ ಕೀರ್ತಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ.

ತಾಲೂಕಿನ ಬಂಕಾಪೂರ ಪಟ್ಟಣದ ಹೃದಯ ಭಾಗದಲ್ಲಿರುವ 8 ಎಕರೆ ಕ್ಷೇತ್ರದಲ್ಲಿ ಜೀ + 1 ಮನೆಗಳು ಒಂದು ಬ್ಲಾಕ್‍ನಲ್ಲಿ 8 ಮನೆಗಳಂತೆ ಒಟ್ಟು 604 ಮನೆಗಳ ನಿರ್ಮಾಣದ ಗುರಿ ಈ ಯೋಜನೆ ಹೊಂದಿದ್ದು ಕೇಂದ್ರ ಸರಕಾರದ ಪ್ರಧಾನಮಂತ್ರಿ ಅವಾಸ ಯೋಜನೆ ಮತ್ತು ರಾಜ್ಯ ಸರಕಾರದ ರಾಜೀವ ಗಾಂಧಿ ವಸತಿ ಯೋಜನೆಗಳ ಸಹಭಾಗಿತ್ವದಲ್ಲಿ ವಸತಿರಹಿತರಿಗೆ ಹೊರೆಯಾಗದಂತೆ ಮನೆ ನಿರ್ಮಿಸಿಕೊಡಲು ಬಸವರಾಜ ಬೊಮ್ಮಾಯಿಯವರು ಕೇಂದ್ರ ಸರಕಾರಕ್ಕೆ ಅರ್ಪಿಸಿದ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಗೋಳಿಸಲಾಗಿದೆ.

2013 ರಲ್ಲಿ ಜೀ + 1 ಮಾದರಿಯ ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿದರೂ ಸಹಿತ ಕಾಮಗಾರಿಗೆ ಕೆಲವು ತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿತ್ತು ಬೊಮ್ಮಾಯಿಯವರ ಸತತ ಪರಿಶ್ರಮದಿಂದ ಸಮಸ್ಯೆ ಪರಿಹಾರ ಇತ್ಯರ್ಥವಾಗಿ  ಕಾಮಗಾರಿ ಪುನಾರಂಭಗೊಂಡು 6 ತಿಂಗಳ ಅವಧಿಯಲ್ಲಿ ಸರಿ ಸುಮಾರು 11 ಬ್ಲಾಕ್‍ಗಳಲ್ಲಿ 88 ಮನೆಗಳು ಸಂಪೂರ್ಣ ಸಿದ್ದಗೊಂಡು ಹೈಟೇಕ್ ಮನೆಗಳ ಸೌಭಾಗ್ಯ ಬಡವರ ಪಾಲಾಗಲಿವೆ.

ಅಲ್ಲದೇ 44 ಬ್ಲಾಕ್‍ಗಳಲ್ಲಿ 352 ಮನೆಗಳು ನಿರ್ಮಾಣ ಗೊಳ್ಳುತ್ತಿದ್ದು ಶೀಘ್ರದಲ್ಲಿ 450 ಮನೆಗಳು ಪೂರ್ಣಗೊಳ್ಳಲಿವೆ, ಇನ್ನುಳಿದ 134 ಮನೆಗಳು ಸಹ ಪ್ಲಿಂತ ಹಂತಕ್ಕೆ ತಲುಪಿದ್ದು ಇವು ಸಹಿತ ಆದಷ್ಟು ಬೇಗ ನಿರ್ಮಾಣ ಹಂತಕ್ಕೆ ಬರುತ್ತವೆ ಎಂದು ಗುತ್ತಿಗೆದಾರರು ಹೇಳುತ್ತಾರೆ.

ಒಟ್ಟಿನಲ್ಲಿ ಜೀ + 1 ಮಾದರಿ ಮನೆಗಳು ಮುಕ್ತಾಯ ಹಂತಕ್ಕೆ ತಲುಪಿದ್ದು ಬಂಕಾಪೂರ ಪಟ್ಟಣದ ವಸತಿರಹಿತರ ಕನಸು ನನಸಾಗುವ ಶುಭಗಳಿಗೆ ಕೂಡಿ ಬಂದಿದೆ ಎಂದು ಫಲಾನಿಭವಿಗಳು ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಂಕಾಪೂರ ಪಟ್ಟಣದಲ್ಲಿರುವ ಮಲ್ಲಪ್ಪನ ಕೇರಿ , ಕುಂಬಾರಗಟ್ಟಿ ಕೇರಿ , ಆಯ್ಯನ ಹೊಂಡದ ಸುತ್ತಮುತ್ತಲಿನ ಕ್ಷೇತ್ರವು ನೆರೆಹಾವಳಿಯಂತಹ ಸಂದರ್ಭದಲ್ಲಿ ಹೆಚ್ಚು ಹೊತ್ತವರಿಯಾದರೆ ಅಲ್ಲಿರುವ ಜನಸಾಮಾನ್ಯರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಕೆಲವು ಜೀ+1 ಮನೆಗಳನ್ನು ಯಾರಿಗೂ ಕೊಡದೇ ಕಾಯ್ದಿರಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಗಳು ಹೇಳುತ್ತಾರೆ. 

ತಾಲೂಕಿನ ಎಲ್ಲ ವಸತಿರಹಿತರಿಗೆ ಸೂರು ಕೊಡುವ ಮಹತ್ವಾಕಾಂಕ್ಷೆ ಯೋಜನೆಯ ಉದ್ದೇಶ ಹೊಂದಿದ್ದು ಆದಷ್ಟು ಬೇಗ ಎಲ್ಲರೂ ಅವರವರ ಸ್ವಂತ ಹೈಟೇಕ್ ಮನೆಯಲ್ಲಿ ನೆಲೆಸಬೇಕೆಂಬ ಸಂಕಲ್ಪ.

ಬಸವರಾಜ ಬೊಮ್ಮಾಯಿ

ಗೃಹ ಹಾಗೂ ಕಾನೂನು ಸಂಸದೀಯ ಸಚಿವ. 

ಸರಕಾರದ ಮಾರ್ಗಸೂಚಿಯಂತೆ  ಯಾರು ಆರ್ಹರಾಗಿರುತ್ತಾರೋ ಅವರಿಗೆ ಮಾತ್ರ ಅಂದರೆ ವಸತಿರಹಿತ ಅರ್ಹ ಫಲಾನುಭವಿಗಳಿಗೆ ಎಲ್ಲ ದಾಖಲಾತಿಗಳನ್ನು ಪಡೆದು ನೀಡಲಾಗುವುದು.

-ರೇಣುಕಾ ದೇಸಾಯಿ   

ಮುಖ್ಯಾಧಿಕಾರಿಗಳು ಪುರಸಭೆ ಬಂಕಾಪೂರ.

ಈಗಾಗಲೇ ಸುಮಾರು ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿಹಾಕಿದ್ದು ಅದರಲ್ಲಿ ಸರಕಾರದ ಮಾರ್ಗಸೂಚಿಯಂತೆ 477 ಅರ್ಹ ಫಲಾನುಭವಿಗಳನ್ನು ಪುರಸಭೆ ವತಿಯಿಂದ ಆಯ್ಕೆಮಾಡಲಾಗಿದೆ.

ಸುದ್ದಿ ಓದಿ