ಕುಶಲ ಕೆಲಸಗಾರರೊಂದಿಗೆ ಪಯರ್ಾಯ ಸಂಸ್ಕೃತಿ ಕಟ್ಟಲು ಬಸವಣ್ಣನ ಪ್ರಯತ್ನ: ಡಾ.ಸಿ.ವೀರಣ್ಣ
ಬಳ್ಳಾರಿ 07:ವಚನಕಾರರ ಕಾಲದಲ್ಲಿ ಕುಶಲ ಕೆಲಸಗಾರರೆಲ್ಲರೂ ಬಸವಣ್ಣನವರೊಂದಿಗೆ ಸೇರಿ ಪಯರ್ಾಯ ಸಂಸ್ಕೃತಿ ಕಟ್ಟಿಕೊಡುವ ಪ್ರಯತ್ನ ಮಾಡಿದರು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸಿ.ವೀರಣ್ಣ ಅವರು ನುಡಿದರು. ಯುಜಿಸಿ ಪಿಎಚ್.ಡಿ.ಕೋಸರ್್ವಕರ್್ ಹಾಗೂ ಡಾ. ಶಂಬಾಜೋಶಿ ಜನ್ಮದಿನದ ಅಂಗವಾಗಿ ಕನ್ನಡ ವಿಶ್ವವಿದ್ಯಾಲಯ, ಅಧ್ಯಯನಾಂಗವು ಡಾ.ಶಂಬಾ ಜೋಶಿ ಅಧ್ಯಯನ ಪೀಠದ ಸಹಯೋಗದಲ್ಲಿ ದಿ : 7 ರಿಂದ 12 ರ ವರೆಗೆ ಏರ್ಪಡಿಸಿದ್ದ ಸಂಶೋಧನ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಂಟಪ ಸಭಾಂಗಣದಲ್ಲಿ ಅವರು ಮಾತನಾಡಿದರು. 2018-19ನೇ ಸಾಲಿನಲ್ಲಿ ಪ್ರವೇಶ ಪಡೆದ ಸಂಶೋಧಕರಿಗಾಗಿ ಸಾಹಿತ್ಯದಲ್ಲಿ ಸಂಶೋಧನೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದ ಡಾ.ಸಿ. ವೀರಣ್ಣ ಅವರು, ಅಪಾರ ಸಂಖ್ಯೆಯಲ್ಲಿ ನೆರೆದ ಸಂಶೋಧನಾ ವಿದ್ಯಾಥರ್ಿಗಳನ್ನು ನೋಡಿ ಕನ್ನಡದಲ್ಲಿ ಸಂಶೋಧನೆ ಮಾಡಲು ಇಷ್ಟೊಂದು ಜನ ಇದ್ದಾರೆ ಎಂಬುದೇ ಸಂತೋಷ ಪಡುವ ವಿಚಾರ. ಕನ್ನಡಕ್ಕೆ ಕೊಯ್ಲು ಜಾಸ್ತಿ ಆಗುತ್ತದೆ ಎಂದು ಭಾವಿಸುತ್ತೇನೆ ಎನ್ನುತ್ತ, ಅಲ್ಲಮನ ವಚನವನ್ನು ಉದ್ಘರಿಸುತ್ತ ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿನ್ನ ಬೆನ್ನಹಿಂದಿನ ಬೆಳಕನ್ನು ದಶರ್ಿಸದೇ ಹೋದರೆ ಇವತ್ತಿನ ಹೆಜ್ಜೆ ಏನು ಎಂದು ತಿಳಿಯಲು ಸಾಧ್ಯವಾಗುವುದಿಲ್ಲ.
ಚರಿತ್ರೆಯ ಪಾಠದಿಂದ ಮನುಷ್ಯನ ನಡುವಳಿಕೆ, ಮಾಡಿರುವ ತಪ್ಪು ಒಪ್ಪುಗಳನ್ನು ಅಥರ್ೈಸಿಕೊಳ್ಳುತ್ತ ಇವತ್ತಿಗೆ ಬೆಳಕನ್ನು ಕಾಣುವ ಪ್ರಯತ್ನ ನಾವು ಮಾಡುತ್ತೇವೆ. ಜ್ಞಾನವನ್ನು ವೇದಗಳ ಕಾಲದಲ್ಲಿ ಅನೇಕರಿಂದ ದೂರ ಮಾಡಲಾಗಿತ್ತು. ಇಂದು ಜ್ಞಾನ ಎಲ್ಲರಿಗೂ ದೊರೆಯುತ್ತಿರುವುದು ಬಹಳ ದೊಡ್ಡ ವಿಚಾರವಾಗಿದೆ. ಕನ್ನಡದಲ್ಲಿ ವೈಚಾರಿಕ ಸತ್ಯವನ್ನು ತಿಳುವಳಿಕೆಯನ್ನು ಯಾರು ಹುಟ್ಟು ಹಾಕಿದರು ಎಂದು ಪ್ರಶ್ನಿಸುತ್ತ ವಚನಕಾರರು ನಿನ್ನರಿವೆ ನಿನಗೆ ಗುರು ಎಂದು ಹೇಳಿದ್ದಾರೆ. ಈ ಬಗೆಯಲ್ಲಿ ಸಮಾಜದ ಕುರಿತು ಆಲೋಚಿಸಬೇಕು. ಸಾಹಿತ್ಯಕವಾಗಿ ಹೊಸತೇನು ಹೇಳಲು ಸಾಧ್ಯವಿದೆ ಎಂದು ಸಂಶೋಧಕರು ಯೋಚಿಸಬೇಕು. ಶಾಸನ ಹೇಳಲಾರದ ಸತ್ಯವನ್ನು ಓಲೆಗರಿ ತಿಳಿಸುತ್ತದೆ. ಕವಿರಾಜ ಮಾರ್ಗದ ಕತರ್ೃ ನೃಪತುಂಗ ಅಲ್ಲ ಎಂದು ಸಾಬೀತಾಗಿದೆ. ಹೀಗೆ ಹೊಸ ವಿಚಾರಗಳನ್ನು ಪ್ರಸ್ತುತ ಪಡಿಸುತ್ತ ಆಗಿರುವ ತಪ್ಪುಗಳನ್ನು ಸರಿಪಡಿಸುವುದು ಸಂಶೋಧನೆಯ ಕೆಲಸವಾಗಿದೆ ಎಂದು ತಿಳಿಸಿದರು. ಪಂಪನ ಆದಿಪುರಾಣ, ವಿಕ್ರಮಾಜರ್ುನ ವಿಜಯ, ವಡ್ಡಾರಾಧನೆ, ಶಾಂತಿಪುರಾಣ, ರಾಮಾಯಣ, ಮಹಾಭಾರತಗಳನ್ನು ಕುರಿತು ಮಾತನಾಡುತ್ತ ನಿನರ್ಾಮಿಕೆಯರ ಕಥೆ, ಕಪಿಲನ ಕಥೆಗಳಂತಹ ಉಪೇಕ್ಷಿತ ವಿಷಯಗಳಲ್ಲಿ ಅಡಗಿರುವ ಜನಸಾಮಾನ್ಯರ ಬದುಕನ್ನು ಕುರಿತು ಸಂಶೋಧನೆ ನಡೆಸಬೇಕು. ಮೂಲ ಮಹಾಭಾರತದಲ್ಲಿ ದ್ರೌಪದಿಯ ಸೀರೆ ಸೆಳೆಯುವ ಪ್ರಸಂಗವೇ ಇಲ್ಲ. ನಂತರ ಸೇರಿಸಲಾಗಿದೆ. ಕೃಷ್ಣನಿಗೂ ಭಗವದ್ಗೀತೆಗೂ ಸಂಬಂಧವೇ ಇಲ್ಲ. ಕೃಷ್ಣನ ಕಾಲವೇ ಬೇರೆ ಭಗವದ್ಗೀತೆಯ ಕಾಲವೇ ಬೇರೆಯಾಗಿದೆ.
ಹೀಗೆ ಚರಿತ್ರೆಯಲ್ಲಿ ಸತ್ಯಗಳನ್ನು ಹುಡುಕುವ ಸಂಶೋಧಿಸುವ ಕೆಲಸ ಮಾಡಬೇಕು. ದಾಖಲಾಗಿರುವ ಮನುಷ್ಯನ ಚರಿತ್ರೆಯನ್ನು ತರ್ಕಬದ್ಧವಾಗಿ ಹುಡುಕುವ ಕೆಲಸ ನಿರಂತರವಾಗಿ ಸಾಗಬೇಕು. ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಕೆಲಸವನ್ನು ಸಂಶೋಧಕರು ಮಾಡಬಾರದು. ಸತ್ಯಕ್ಕಾಗಿ ಸಂಶೋಧಿಸಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿದ್ದ ಕನರ್ಾಟಕ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಹರೀಶ್ ರಾಮಸ್ವಾಮಿ ಅವರು ಸಮಾಜ ವಿಜ್ಞಾನಗಳ ನೆಲೆಯಲ್ಲಿ ಸಂಶೋಧನೆ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಸಂಶೋಧನೆ ಎಂಬುದು ಬಹಳ ಜವಾಬ್ದಾರಿಯುತ ಕೆಲಸ. ಇದನ್ನು ನಿಭಾಯಿಸಲು ನಾವು ತಯಾರಾಗಿದ್ದೇವಾ? ಎಂದು ಪ್ರಶ್ನಿಸಿದರು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ.ಗಾಗಿ ಪ್ರವೇಶ ಪಡೆದವರು ಶೇ. 33%ರಷ್ಟು, ಆದ್ದರಿಂದ ಸಂಶೋಧನೆಯ ಕ್ಷೇತ್ರಕ್ಕೆ ನಮ್ಮ ಕೊಡುಗೆ ದೊಡ್ಡದು. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದವರು ಶೇ. 14%ರಷ್ಟು, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದವರು ಶೇ. 12% ಎಂದು ಅಂಕಿ ಸಂಖ್ಯೆಗಳನ್ನು ನೀಡುತ್ತ ಯಾರಿಗೆ ಸಾಮಾಜಿಕ ಸ್ಪಂದನೆ ಇರುವುದಿಲ್ಲವೋ ಬಹುಶಃ ಅವರಿಗೆ ಸಂಶೋಧನೆ ಮಾಡಲು ಕಷ್ಟ ಎಂದು ಅಭಿಪ್ರಾಯಪಟ್ಟರು. ಯಾವ ಸಿದ್ಧಾಂತದ ಆಧಾರದ ಮೇಲೆ ಸಂಶೋಧನೆ ಮಾಡಲು ಹೊರಟಿದ್ದೀರೋ ಆ ಸಿದ್ಧಾಂತದ ಬಗ್ಗೆ ಸಂಶೋಧಕರು ಅರಿವು ಹೊಂದಬೇಕು. ಸಮಾಜ ವಿಜ್ಞಾನಕ್ಕೆ ಬೇಕಾಗಿರುವುದು ತರ್ಕ. ಸಮಾಜ ವಿಜ್ಞಾನಗಳು ಅವಜ್ಞತೆಗೆ ಒಳಗಾಗಲು ಕಾರಣವೆಂದರೆ ಮೂಲ ಪಠ್ಯಗಳನ್ನು ಓದದೇ ಇರುವುದು. ವಿದ್ಯಾಥರ್ಿಗಳು ಸಮಾಜ ವಿಜ್ಞಾನದಲ್ಲಿ ಬಳಸುವ ಪರಿಭಾಷೆಗಳನ್ನು ತಿಳಿದಿರಬೇಕು. ಸಮಾಜವನ್ನು ಸದಾ ಅಬ್ಸರ್ವೇಷನ್ ಮಾಡುವ ಮೂಲಕ ಸಮಾಜದ ಚಲನೆಯನ್ನು ತಿಳಿದುಕೊಳ್ಳಬೇಕು. ಜ್ಞಾನ ಹೇಗೆ ರಚನೆ ಆಗುತ್ತದೆ ಎಂಬ ಅರಿವು ಬೇಕು. ಇತಿಹಾಸ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಹೀಗೆ ಬೇರೆ ಶಿಸ್ತುಗಳಿಗೆ ಬೇರೆ ಬೇರೆಯದೇ ಆದ ಸಂಶೋಧನಾ ವಿಧಾನಗಳಿವೆ. ಸೈಕೋ ಅನಾಟಿಕಲ್ ಸ್ಟಡಿಯ ಅರಿವು ಬೇಕು. ಪರಾಮರ್ಶನ ಗ್ರಂಥಗಳನ್ನು ಉಲ್ಲೇಖಿಸುವಾಗ ಎಚ್ಚರ ವಹಿಸಬೇಕು ಎಂದು ಸಂಶೋಧಕರಿಗೆ ತಿಳಿಸುತ್ತ ಮಾರ್ಗದರ್ಶಕರು ಓದುವ ಮೂಲಕ ವಿದ್ಯಾಥರ್ಿಗಳ ಜೊತೆ ದುಡಿದರೆ ಮಾತ್ರ ಒಳ್ಳೆಯ ಪಿಎಚ್.ಡಿ ಪ್ರಬಂಧ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿ ದೊರೆತಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಯವರಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡುತ್ತ ದೇಶದಲ್ಲಿ ಭಾಷೆಗಳಿಗಾಗಿಯೇ ಇರುವ 4 ವಿಶ್ವವಿದ್ಯಾಲಯಗಳನ್ನು ಮಾನವ ಸಂಪನ್ಮೂಲ ಇಲಾಖೆ ಮುಚ್ಚಬೇಕು ಎಂಬ ಅಭಿಪ್ರಾಯದಲ್ಲಿದೆ. ಈ ಹಿನ್ನೆಲೆಯಲ್ಲಿ ಒಂದು ಸಮಿತಿಯನ್ನು ಮಾಡಿದ್ದು ಆ ಸಮಿತಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಸದಸ್ಯರಾಗಿದ್ದಾರೆ. ಭಾಷೆಗೆ ಸಂಬಂಧಪಟ್ಟ ಹಾಗೆ ಜಗತ್ತಿನಲ್ಲಿರಬಹುದಾದಂತಹ ಕೆಲವೇ ಕೆಲವು ವಿಶ್ವವಿದ್ಯಾಲಯಗಳು ಹೀಗೆ ಮುಚ್ಚುವುದೇ ಆದರೆ ಮುಂದಿನ ದಿನಗಳಲ್ಲಿ ಭಾಷೆ ಮತ್ತು ಬದುಕಿಗೆ ಸಂಬಂಧಪಟ್ಟ ಹಾಗೆ ಆಲೋಚನೆ ಮಾಡುವಂಥ ಒಂದು ಪರಂಪರೆಯನ್ನು ನಾಶ ಮಾಡಿದ ಹಾಗೆ ಆಗುತ್ತದೆ.
ವೇದಿಕೆಯಲ್ಲಿ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರು ಉಪಸ್ಥಿತರಿದ್ದರು. ಅಧ್ಯಯನಾಂಗದ ನಿದರ್ೇಶಕರಾದ ಡಾ.ಶಿವಾನಂದ ವಿರಕ್ತಮಠ ಅವರು ಸ್ವಾಗತಿಸಿದರು. ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಪ್ರಾಸ್ತಾವಿಕ ನುಡಿದರು. ಶೈಕ್ಷಣಿಕ ಉಪಕುಲಸಚಿವರಾದ ಡಾ.ಎಸ್.ವೈ.ಸೋಮಶೇಖರ ಅವರು ನಿರೂಪಿಸಿ, ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾಥರ್ಿಗಳು ಪ್ರಾಥರ್ಿಸಿದರು. ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಶಂಬಾ ಜೋಶಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.