ಕೃಷಿ ಮೇಳ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ
ಬ್ಯಾಡಗಿ: ಧರ್ಮ, ಜಾತಿ, ರಾಜಕೀಯ ಪಕ್ಷ ಯಾವುದೇ ಇದ್ದರೂ ಸಮಸ್ಯೆಗಳು ಬಂದಾಗ ಮಣ್ಣಿನ ಮಕ್ಕಳು ಒಟ್ಟಾಗಬೇಕು, ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಮೊದಲು ಮಣ್ಣಿನ ಮಕ್ಕಳು ಕೃಷಿ ಧರ್ಮವನ್ನು ಪಾಲಿಸಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಮೇಳ ಹಾಗೂ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಕೃಷಿ ಕ್ಷೇತ್ರದಿಂದ ಯುವಕರು ಹೊರ ನಡೆದು ನಗರದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೊಲಗದ್ದೆಗಳು ಹಾಳು ಬಿದ್ದಿದ್ದು, ದುರಾಶೆಯಿಂದ ತಮ್ಮ ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ಗ್ರಾಮೀಣರ ಬದುಕು ಹಸನವಾಗಬೇಕು ಮತ್ತು ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಉತ್ತೇಜನ ನೀಡುವ ಸಂಕಲ್ಪದಿಂದಲೇ 2020ರಲ್ಲಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸಿದ್ದು, ರಾಜ್ಯದ ಹಲವು ಜಿಲ್ಲೆಯಲ್ಲಿ ಸಾವಿರಾರು ಸಂಘಗಳ ಮೂಲಕ ಅವರಿಗೆ ಸ್ವ ಉದ್ಯೋಗ ನೀಡುವ ಕೌಶಲ್ಯ ತರಬೇತಿ ನೀಡಲು ಮುಂದಾಗುತ್ತಿದೆ ಎಂದರಲ್ಲದೇ, ಪುಷ್ಪಗಿರಿ ನಡೆದ ಕೃಷಿ ಮೇಳ ಬಹಳ ಉತ್ತಮವಾಗಿ ನಡೆದ ಸಂದರ್ಭದಲ್ಲಿ ಕೃಷಿ ಸಚಿವರು ಉತ್ತರ ಕರ್ನಾಟಕದಲ್ಲಿಯೂ ಇಂತಹ ಮೇಳವನ್ನು ಒಮ್ಮೆ ನಡೆಸಬೇಕು ಎಂಬ ಆಶಯದ ಹಿನ್ನೆಲೆಯಲ್ಲಿ ಇಂದು ಅತ್ತಿಕಟ್ಟಿ ಎಂಬ ಸಣ್ಣ ಗ್ರಾಮದಲ್ಲಿ ನಡೆಸಲಾಗುತ್ತಿದ್ದು, ಇದರ ಸದುಪಯೋಗವನ್ನು ಕೃಷಿಕರು ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಹಾಗೂ ಮುಖ್ಯಸ್ಥರು ಅಧುನಿಕ ಕೃಷಿ, ಸಿರಿಧಾನ್ಯ ಮತ್ತು ಸಾವಯವ ಕೃಷಿ ಬಗ್ಗೆ ಸಮಗ್ರ ವಿಷಯವನ್ನು ಜನರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಹಾನಗಲ್ ತಾಲೂಕಿನ ಸಿದ್ದಾರೂಡ ಮಠದ ಹೋತನಹಳ್ಳಿ ಶ್ರೀಶಂಕರಾನಂದ ಸ್ವಾಮೀಜಿ, ಹರಿಹರ ತಾಲೂಕಿನ ಯಲವಟ್ಟಿ ಸಿದ್ದಾಶ್ರಮ ಶ್ರೀಯೋಗಾನಂದ ಸ್ವಾಮೀಜಿ, ಉದ್ಯಮಿ ಪರಮೇಶ್ವರ ಕಾಗಿನಲೆ, ದೇವಿ ಹೊಸೂರು ತೋಟಗಾರಿಕೆ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ.ಪ್ರಭುದೇವ್, ಹನುಮನಮಟ್ಟಿ ಕೆವಿಕೆ ಮುಖ್ಯಸ್ಥ ಆಶೋಕ, ಜಿಲ್ಲಾ ಯೋಜನಾಧಿಕಾರಿ ಸಿದ್ಧರಾಮಪ್ಪ ಅಜಗೊಂಡರ, ನಿವೃತ್ತ ನ್ಯಾಯಾಧೀಶ ಸಿದ್ದಪ್ಪ ಕೆಂಪೇಗೌಡ, ಗ್ರಾಮೀಣಾಭಿವೃದ್ಧಿ ಯೋಜನೆ ನಿದರ್ೆಶಕ ಎಂ.ಎಸ್.ಅಡವಿ, ಜಯಣ್ಣ ಮಲ್ಲಿಗಾರ, ವೇ.ಮಲ್ಲಿಕಾಜರ್ುನ ಶಾಸ್ತ್ರಿ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಇಓ ನಾಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
*ಪ್ರಸ್ತುತ ದಿನದಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಪುಷ್ಪಗಿರಿ ಮಹಾಸಂಸ್ಥಾನ ಧಾಮರ್ಿಕ, ಶೈಕ್ಷಣಿಕ, ಆರೋಗ್ಯ, ಪರಿಸರ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದೆ. ಈ ಸಾಧನೆ ಇಂದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ನಮಗೆ ಜನ್ಮ ನೀಡಿದ ಶರಣ ಸಂತರ ನಾಡು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮವು ರಾಜ್ಯಕ್ಕೆ ಮಾದರಿ ಗ್ರಾಮವಾಗಬೇಕು ಎಂಬ ಹಂಬಲ ನಮಗೆ ಇದೆ.
-ಜಗದ್ಗುರು ಶ್ರೀಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜೀ..ಪುಷ್ಪಗಿರಿ ಮಹಾಸಂಸ್ಥಾನ