ಬಸವಣ್ಣ, ಕುವೆಂಪುರವರ ವಿಶ್ವಮಾನವ ಸಂದೇಶ ಕುರಿತು ಉಪನ್ಯಾಸ
ಲೋಕದರ್ಶನ ವರದಿ
ಬಳ್ಳಾರಿ 07: 12ನೇ ಶತಮಾನದ ಬಸವಣ್ಣ 21ನೇ ಶತಮಾನದ ಕುವೆಂಪುರವರು ಕಾಲದ ಅಂತರದಲ್ಲಿ 900 ವರ್ಷಗಳಿದ್ದರೂ ಸಾಮಾಜಿಕ ಚಿಂತನೆ, ಮಾನವೀಯ ಮೌಲ್ಯ ವಿಶ್ವಮಾನವ ಸಂದೇಶಗಳು ಒಂದೇ ಆಗಿವೆ. ಜಗತ್ತಿನ ಎಲ್ಲಾ ಜೀವಿಗಳಿಗೆ ಲೇಸನ್ನೇ ಬಯಸುತ್ತಾ ಬಾಳಿದರು ಎಂದು ಗುರು ತಿಪ್ಪೇರುದ್ರ ಕಾಲೇಜಿನ ಕನ್ನಡ ಉಪನ್ಯಾಸಕ ಎ.ಮಲ್ಲಿಕಾಜರ್ುನ ಚೇಳ್ಳಗುಕರ್ಿಯ ಎರ್ರಿತಾತನ ಮಠದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 226ನೇ ಮಹಾಮನೆ, ಕೆ.ಎಂ.ಗವಿಸಿದ್ದಯ್ಯ ಸರೋಜಮ್ಮ ದತ್ತಿ ಕಾರ್ಯಕ್ರಮದಲ್ಲಿ 'ಬಸವಣ್ಣ-ಕುವೆಂಪುರವರ ವಿಶ್ವಮಾನವ ಸಂದೇಶ' ವಿಷಯ ಕುರಿತು ಮಾತನಾಡುತ್ತಾ ಅನಿಕೇತನ-ಪದ್ಯದ ಮೂಲಕ ಮನುಜಮತ ವಿಶ್ವಪಥ ಸವರ್ೋದಯ ತತ್ವಗಳಿಂದ ವಿಶ್ವದ ಜನತೆಯನ್ನು ಒಂದುಗೂಡಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡುತ್ತಾ ಮೌಲ್ಯಗಳಿಲ್ಲದ ಬದುಕಿಲ್ಲ, ಮೌಲ್ಯಗಳೇ ಸಮಾಜದ ಸಮಾನತೆಯನ್ನು ಸಾರುವ ಅಂಶಗಳು ಮಾನವೀಯತೆಯನ್ನು ಬೆಳೆಸುವುದೇ ಧ್ಯೇಯವಾಗಬೇಕು. ನಡೆಯುವ ಎಡವುವವನು ಬಿದ್ದವನು ಬಾಳುವನು ಎಂಬಂತೆ ಬದುಕಿನ ಅಂಶಗಳನ್ನು ಬಸವಣ್ಣ ಮತ್ತು ಕುವೆಂಪುರವರು ತಮ್ಮದೇ ಆದ ಕ್ಷೇತ್ರದಲ್ಲಿ ಸಾರಿದ್ದಾರೆ ಎಂದರು.
ವೇದಿಕೆಯಲ್ಲಿ ದತ್ತಿ ದಾಸೋಹಿಗಳಾದ ಕೆ.ಎಂ.ವೀರಯ್ಯನವರ ಸಹೋದರ ಕೆ.ಎಂ.ಮಲ್ಲಯ್ಯನವರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹನುಮಂತಪ್ಪ ಉಪಸ್ಥಿತರಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ದಾಸೋಹಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಎಲ್ಲಾ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾರ್ಥನೆಯನ್ನು ವಿದ್ಯಾಥರ್ಿನಿ ಸೌಮ್ಯ ಮಾಡಿದರು.