ಬಸವಣ್ಣನವರ ವಚನಗಳು ಸಾವಿರಾರು ವರ್ಷಗಳ ಕಾಲ ಬೆಳಕನ್ನು ನೀಡುತ್ತವೆ
ನಾಡಹಬ್ಬ ನವರಾತ್ರಿ ಉತ್ಸವದ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಪ್ರಭುನೀಲಕಂಠ ಮಹಾಸ್ವಾಮಿಗಳು
ಸವದತ್ತಿ 18: ಬಸವಣ್ಣನವರು ಇಂದು ಇಲ್ಲದಿರಬಹುದು ಆದರೆ ಅವರ ವಚನಗಳು ಇನ್ನೂ ಇವೆ ಮತ್ತು ಇನ್ನೂ ಸಾವಿರಾರು ವರ್ಷಗಳಕಾಲ ಬಸವಣ್ಣನವರನ್ನು ಜೀವಂತವಾಗಿಟ್ಟಿರುತ್ತವೆ. ಅವರ ತತ್ವ ಆದರ್ಶಗಳು ಇನ್ನೂ ಸಾವಿರಾರು ವರ್ಷಗಳಕಾಲ ಉಳಿದು ಬೆಳಕನ್ನು ನೀಡುತ್ತವೆ ಎಂದು ಬೈಲಹೊಂಗಲದ ಮೂರುಸಾವಿರಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು ಹೇಳಿದರು
ಅವರು ಪಟ್ಟಣದ ಮಧ್ಯಭಾಗದಲ್ಲಿನ ಗಾಂಧಿಚೌಕದಲ್ಲಿ ದಿ ಬಾಬಣ್ಣ ಶಿ ಹಂಪಣ್ಣವರ ವೇದಿಕೆಯ ಮೇಲೆ ನಡೆಯುತ್ತಿರುವ 43ನೇಯ ನಾಡಹಬ್ಬ ನವರಾತ್ರಿ ಉತ್ಸವದ ಎರಡನೇಯ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಾಯಕವೇ ಕೈಲಾಸ ಎಂಬ ವಿಷಯವಾಗಿ ಮಾತನಾಡುತ್ತಿದ್ದರು.
ಅವರು ಜನ್ಮತಾಳಿದ ಎಲ್ಲ ಜನರೂ ಒಂದಲ್ಲ ಒಂದು ಉದ್ಯೋಗ ಮಾಡಿಯೇ ಜೀವನ ಸಾಗಿಸುತ್ತಾರೆ. ಅಂತವರಿಗೆ ಬಸವಣ್ಣನವರು ನೀವು ಮಾಡುತ್ತಿರುವ ಉದ್ಯೋಗದಲ್ಲಿಯೇ ದೇವರನ್ನು ಕಾಣಿರಿ ಎಂದು ಹೇಳಿ ಆಗಿನ ಕಾಲದಲ್ಲಿ ಕಾಯಕ ಮಾಡುವವರಿಗೆ ದೇವರನ್ನು ತೋರಿಸುವ ಕಾರ್ಯ ಅವರಿಂದ ಆಗಿದೆ. ಆದ್ದರಿಂದ ಬಸವಣ್ಣನವರ ತತ್ವಾದರ್ಶಗಳು ಇಂದಿಗೂ ಮಾರ್ಗದರ್ಶನ ಮಾಡುತ್ತವೆ ಎಂದರು.
ಸಾಹಿತಿ ಶ್ರೀಧರ ಆಸಂಗಿಹಾಳರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಶ್ರೇಯಾ ಮತ್ತು ಸೃಷ್ಟೀ ಅಮರಗೋಳ ಪ್ರಾರ್ಥನೆ ಹಾಡಿದರು. ಪೂಜಾ ಕಾಳೆ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾದವು.
ಸಾನಿಧ್ಯ ವಹಿಸಿದ ಬೇಡಸೂರಮಠದ ಅಜ್ಜಯ್ಯ ಮಹಾಸ್ವಾಮಿಗಳು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಶೋಕ ಗು ಹಂಪಣ್ಣವರ, ಬಸನಗೌಡಾ ಆರ್ ಪಾಟೀಲ ಮಾತನಾಡಿದರು. ನಾಗರಾಜ ಬೋನಗೇರಿ, ಜಾವೇದ ಪಠಾದ, ಪ್ರಕಾಶ ನಿಕ್ಕಮ್, ಬಸವರಾಜ ಪುರದಗುಡಿ, ಬಸವರಾಜ ಅತ್ತಿಗೇರಿ, ಶಂಕರ ಗೊಡೆಯವರ, ಪ್ರಕಾಶ ಬಾಳೋಜಿ, ಸತೀಶ ಹಂಪಣ್ಣವರ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವರ್ತಕರ ಸಂಘದ ಅಧ್ಯಕ್ಷ ಮದನಲಾಲ್ ಚೋಪ್ರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಲಹೊಂಗಲದ ಮೂರುಸಾವಿರಮಠದ ಪ್ರಭುನೀಲಕಂಠ ಮಹಾಸ್ವಾಮಿಗಳನ್ನು 43ನೇಯ ನಾಡಹಬ್ಬ ನವರಾತ್ರಿ ಉತ್ಸವದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮೌನೇಶ್ವರ ಭಜನಾ ಮಂಡಳಿ ಶಿರಸಂಗಿ ಇವರು ಭಜನಾ ಕಾರ್ಯಕ್ರಮ ನಡೆಸಿದರು.
ರಾತ್ರಿ ಪಟ್ಟಣದ ಶಿವ ಪಾರ್ವತಿ ನೃತ್ಯಾಲಯ ಗುರ್ಲಹೊಸೂರಿ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ನಡೆಯಿಸಿ ಕೊಟ್ಟರು. ನಂತರ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಶಾಂತಲಾ ನಾಟ್ಯ ಸುಧಾ ಕಲಾ ನಿಕೇತನ ಪಾಶ್ಚಾಪುರ ಇವರು ನೃತ್ಯ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಉಮೇಶ ನೀಲಪ್ಪನವರ, ಹನುಮಂತ ಅಗಸಿಮನಿ, ಸುವೀನ ತೋಟಗಿ, ಎಚ್ ಕೆ ಏಡೋಳ್ಳಿ, ಮಂಜುನಾಥ ಮುನವಳ್ಳಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.