ಹೂವಿನ ಹಡಗಲಿ

ಬಸವ ಸಂಸ್ಕೃತಿ ಅಭಿಯಾನ ಸೆ.7ಕ್ಕೆ ಆಗಮನ

ಬಸವ ಸಂಸ್ಕೃತಿ ಅಭಿಯಾನ ಸೆ.7ಕ್ಕೆ ಆಗಮನ

ಹೂವಿನಹಡಗಲಿ 03 : ರಂದು ಬಸವನಬಾಗೇವಾಡಿಯಿಂದ ಆರಂಭವಾದ ಬಸವ ಸಂಸ್ಕೃತಿ ಅಭಿಯಾನ ಹೊಸಪೇಟೆ ನಗರಕ್ಕೆ ಸೆ.7ರಂದು ಆಗಮಿಸಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚು ಜನ ಭಾಗವಹಿಸಬೇಕು ಎಂದು  ವೀರಶೈವ ಸಮಾಜದ ತಾಲೂಕು ಅದ್ಯಕ್ಷ ಸಿ.ಕೆ.ಎಂ.ಬಸವಲಿಂಗಸ್ವಾಮಿ ಕೋರಿದರು. 

ಪಟ್ಟಣದ ಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ 7ರಂದು ಬೆಳಿಗ್ಗೆ 9ಕ್ಕೆ ಬಸವ ಜ್ಯೋತಿ ರಥಯಾತ್ರೆ ಸ್ವಾಗತ. 10ಗಂಟೆಗೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ರೋಂದಿಗೆ ಮುಕ್ತ ಸಂವಾದ. ಸಂಜೆ 6ಕ್ಕೆ ವಿಶೇಷ ಉಪನ್ಯಾಸ. ನಂತರ ರಾತ್ರಿ 8ಕ್ಕೆ ಸಾಣೆಹಳ್ಳಿಯ ಶಿವಸಂಚಾರ ಕಲಾ ತಂಡದಿಂದ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.   ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದರು.ಉತ್ತಂಗಿ ಸೋಮಶಂಕರ ಸ್ವಾಮೀಜಿ ಮಾತನಾಡಿಲಿಂಗಾಯತ ಮಠಗಳ ಒಕ್ಕೂಟದಿಂದ ಅಭಿಯಾನ ಆರಂಭಗೊಂಡಿದ್ದು, ಶರಣರ ಹೆಸರಿನಲ್ಲಿರುವ ಎಲ್ಲ ಸಂಘಟನೆಗಳು, ಬಸವ ನಿಷ್ಠರು ಭಾಗವಹಿಸಬೇಕು. ಶರಣರ ಆಶಯಗಳನ್ನು ಸಾರ್ವತ್ರಿಕವಾಗಿ ತಿಳಿ ಹೇಳುವ ಮಹಾಕಾರ್ಯ ಇದಾಗಿದ್ದು, ತಾಲೂಕುನಿಂದ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.ವೀರಶೈವ ಸಮಾಜದ ನಗರ ಘಟಕ ಅದ್ಯಕ್ಷ ಮುಂಡವಾಡದ ಉಮೇಶ್ ಮಾತನಾಡಿದರು. ಸಿದ್ದೇಶ.   ರುದ್ರಪ್ಪ. ನಿಂಗ​‍​‍್.ಕೊಟ್ರೇಶ್‌.ಶಂಕ್ರಪ್ಪ ಇದ್ದರು. 


ಸುದ್ದಿ ಓದಿ