ರಾಣೆಬೆನ್ನೂರ

ರೈತರ ಸರಣಿ ಆತ್ಮ ಹತ್ಯೆಗೆ ಬ್ಯಾಂಕಿನ ಮೊಂಡುತನ ಕಾರಣ: ಪಾಟೀಲ್

ರೈತರ ಸರಣಿ ಆತ್ಮ ಹತ್ಯೆಗೆ ಬ್ಯಾಂಕಿನ ಮೊಂಡುತನ ಕಾರಣ: ಪಾಟೀಲ್

ರಾಣೆಬೆನ್ನೂರು 13:  ಓಟಿಪಿ ಯೋಜನೆಯಲ್ಲಿ ರೈತರಿಗೆ ವಂಚನೆ ಮಾಡಿರುವುದನ್ನು ರೈತರು ಅರಗಿಸಿಕೊಳ್ಳುವ ಮೊದಲೇ, ಅತಿವೃಷ್ಟಿ,ಅನಾವೃಷ್ಟಿಯಿಂದ ನಲುಗಿಹೋದ ರೈತರಿಗೆ ಸರಕಾರದ ಬೆಳೆನಷ್ಟ ಬೆಳೆ ವಿಮೆ ಯೋಜನೆಯಲ್ಲಿ ಆಗುತ್ತಿರುವ ಅನ್ಯಾಯದಿಂದ, ರೈತರು ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಇದಕ್ಕೆ ಕಾರಣ ಬ್ಯಾಂಕಿನವರ ಮೊಂಡುತನವೇ ಕಾರಣವಾಗಿದೆಯೆಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅವರು ಇಂದು ತಾಲ್ಲೂಕಿನ ಮುಸ್ಟೂರು ಗ್ರಾಮದ ರೈತ ಪರಮೇಶಪ್ಪ ಬಸವಣ್ಣೆಪ್ಪ ಮುಸ್ಟೋರ ನಾಯಕ್, ಅವರ ಸಾವಿನ ಹಿನ್ನೆಲೆಯಲ್ಲಿ ಶವವಿಟ್ಟು ಪ್ರತಿಭಟಿಸಿ,ಮಾಧ್ಯಮದೊಂದಿಗೆ ಮಾತನಾಡಿದರು. ಮೃತ ರೈತನು, ಸರಕಾರದ ರೈತ ವಿರೋಧಿ ನೀತಿಯಿಂದ ಬೇಸತ್ತುವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪರಮೇಶಪ್ಪ ಮಾಕನೂರು ಯೂನಿಯನ್ ಬ್ಯಾಂಕಿಗೆ ಓಟಿಪಿ ಯೋಜನೆಗಾಗಿ ದಿನನಿತ್ಯ ಅಲೆದಾಡಿ, ಆಸೆಗಣ್ಣಿನಿಂದ ನೋಡುತ್ತಿದ್ದ, ಬ್ಯಾಂಕಿನ ಮೊಂಡುತನ, ಅತಿವೃಷ್ಟಿಯಿಂದ ನಷ್ಟ, ಬೆಳೆವಿಮೆಯಲ್ಲಿ ಆದ ಅನ್ಯಾಯ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿಕ್ಕುತೋಚದೆ ಸಾವು ಕಂಡಿದ್ದಾನೆ ಇದಕ್ಕೆ ನೇರವಾಗಿ ಬ್ಯಾಂಕ್ ಮತ್ತು ಸರ್ಕಾರವೇ ಹೊಣೆಯಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೃಹತ್ ಪ್ರತಿಭಟನೆಗೆ ಮುಂದಾಗಿದ್ದ, ರೈತರು ಸ್ಥಳಕ್ಕೆ ಕೃಷಿ ಮಂತ್ರಿಗಳು, ಬರುವ.ತನಕ ಅಂತಿಮ ಸಂಸ್ಕಾರ ನಡೆಸುವುದಿಲ್ಲ ಎಂದು ಬ್ಯಾಂಕಿನ ಮುಂದೆ ಶವವಿಟ್ಟು ಧರಣಿ ಆರಂಭಿಸಿದ್ದರು. ಪೊಲೀಸ್ ಇಲಾಖೆ ಅಧಿಕಾರಿಗಳು  ಮನವೊಲಿಸಿ, ಸ್ವಗ್ರಾಮಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಸನ್ನಿವೇಶ ವಿಕೋಪಕ್ಕೆ ತಿರುಗುತ್ತಿದ್ದಂತೆ ಜಿಲ್ಲಾ ಮತ್ತು ತಾಲೂಕು ಆಡಳಿತ ಗ್ರಾಮದಲ್ಲಿ ಹಾಜರಿದ್ದು, ಬ್ಯಾಂಕಿನ ಡಿಜಿಎಂ ಕಥೆ ಕರೆದು ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ತಾಲೂಕ ದಂಡಾಧಿಕಾರಿಗಳು, ಡಿವೈಎಸ್ಪಿ ಶಹರ  ಸಿಪಿಐ, ಸಂಚಾರಿ ಸಿಪಿಐ, ಪಿಎಸ್‌ಐ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರು. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್ ಪಿ - ಡಿಆರ್ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. 

ಹಿನ್ನೆಲೆ :- ರಾಣೆಬೆನ್ನೂರು ತಾಲೂಕಿನ ರೈತ ಸಾಲದ ಬಾಧೆಗೆ ಸಿಲುಕಿ, ಓಟಿಪಿ ಯೋಜನೆಗಾಗಿ ಅಲೆದಾಡಿ, ಕೊನೆಗೆ ದಾರಿ ಕಾಣದೆ, ವಿಷ ಸೇವಿಸಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ,, ಕೊನೆಗೂ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬುಧವಾರ ಸಾವು ಕಂಡಿದ್ದ, ವಿಷಯ ತಿಳಿದ ರೈತರು, ಸಂಘಟನೆಯ ಮುಖಂಡರು ಪ್ರತಿಭಟಿಸಿದ್ದರು. 


ಸುದ್ದಿ ಓದಿ