ಕರುನಾಡು ಹರಿಕಾರ ರಾಜ್ಯ ಪ್ರಶಸ್ತಿಗೆ ಬಂಡೆ ಆಯ್ಕೆ
ಇಂಡಿ07: ಕರುನಾಡು ಸೇವಾ ಟ್ರಸ್ಟ್(ರಿ),ಮಂಡ್ಯ ಇವರು 2021 ನೇ ಸಾಲಿನ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ವಿಶಿಷ್ಟ ಸಾಧನೆಗೈದ ನಾಡಿನ ಸಾಧಕರಿಗೆ ಕೊಡಮಾಡುವ "ಕರುನಾಡು ಹರಿಕಾರ ರಾಜ್ಯ ಪ್ರಶಸ್ತಿ"ಗೆ ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಎಸ್ ಬಂಡೆ ಅವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಮುಖ್ಯಸ್ಥ ಅಭಿನಂದನ ಎಂ ತಿಳಿಸಿದ್ದಾರೆ. ಇದೇ ಅ.9ರಂದು ಮಂಡ್ಯ ಜಿಲ್ಲೆಯ ಗಾಂಧಿ ಭವನದಲ್ಲಿ ನಡೆಯುವ ಸಾಧನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ತಿಳಿಸಿದ್ದಾರೆ.