ಬನವಾಸಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಬನವಾಸಿ 09: ಬನವಾಸಿ ಗ್ರಾಮ ಪಂಚಾಯತನ ಅಧ್ಯಕ್ಷೆಯಾಗಿ ತುಳಸಿ ಆರೇರ, ಉಪಾಧ್ಯಕ್ಷರಾಗಿ ತಬರೇಜ ಶೌಕತಬೇಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಣೇಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
18 ಗ್ರಾ.ಪಂ ಸದಸ್ಯರ ಬಲ ಹೊಂದಿರುವ ಬನವಾಸಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ “ಬ’’ವರ್ಗದ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿ ಮೀಸಲಾತಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಮಾರ್ಗದರ್ಶನದಂತೆ ಗ್ರಾಮಗಳ ಅಭಿವೃದ್ಧಿ ಹಾಗೂ ಹಿತ ದೃಷ್ಠಿಯಿಂದ ಗ್ರಾಮದ ಮುಖಂಡರುಗಳು ನಿರ್ಧಾರ ಕೈಗೊಂಡು ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಚುನಾವಣೆ ಪ್ರಕ್ರಿಯೇ ಸಂದರ್ಭದಲ್ಲಿ ನೂತನ ಸದಸ್ಯರಾದ ಸಫಿಯಾಬಿ ಇಸೂಬ ಸಾಬ, ಫಝಲು ರಹ್ಮಾನ ಕಲೆಗಾರ, ಜ್ಯೋತಿ ಚನ್ನಯ್ಯ, ಚೌದರಿ ಅಲ್ತಾಫ ಅಹ್ಮದ ಅಬ್ದುಲ ಗಫಾರ, ಸಾಬ ರಹಮತಬಿ ಬಶೀರ ಅಹ್ಮದ, ಅಶೋಕ ಕೊಲ್ಲಮ್ಮನಕುಡಿ, ಹಸೀನಾಬಿ ಅಂಡಗಿ, ಆನಂದ ಚನ್ನಯ್ಯ, ನಾಗರಾಜ ಉಪ್ಪಾರ, ಶಿವಕುಮಾರ ಉಪ್ಪಾರ, ಗೀತಾ ಚನ್ನಯ್ಯ, ಜಮೀಲ ಖಾನ್, ಮಹಮ್ಮದ ಇಮ್ರಾನ ಜವಳಿ, ರೇಖಾ ವಾಲ್ಮಿಖಿ, ಸಿದ್ದವೀರೇಶ ಎಂ.ಎನ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಮತಾ ನಾಯ್ಕ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಬನವಾಸಿ ಗ್ರಾಮ ಪಂಚಾಯತಗೆ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಬಿಜೆಪಿಯ ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಮಹಾ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಶಿವಕುಮಾರ ಗೌಡ, ಶಕ್ತಿ ಕೇಂದ್ರದ ಅಧ್ಯಕ್ಷ ಸಿದ್ದು ನೇರಗಲ್ ಹಾಗೂ ಪ್ರಮುಖರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.