ಲಾಕ್ಡೌನ್ಗೆ ಸ್ತಬ್ದವಾದ ಕದಂಬ ನಗರ ಬನವಾಸಿ
ಬನವಾಸಿ 10: ರಾಜ್ಯ ಸಕರ್ಾರ ಕೋವಿಡ್ ನಿಯಂತ್ರಣಕ್ಕಾಗಿ ಮಾಡಿರುವ 14 ದಿನಗಳ ಲಾಕ್ಡೌನ್ ನಿಯಮವನ್ನು ಸೋಮವಾರ ಬನವಾಸಿಯ ಜನತೆ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದು ಪಟ್ಟಣದಲ್ಲಿ ಜನ ಸಂಚಾರವಿಲ್ಲದೇ ಸಂಪೂರ್ಣ ಬಂದ್ ಆಗಿದ್ದವು.
ಲಾಕ್ಡೌನ್ ಹಿನ್ನಲೆಯಲ್ಲಿ ಮುಂಜಾನೆ 6 ಗಂಟೆಯಿಂದ 10ರವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ ಕೊಡಲಾಗಿತ್ತಾದರೂ ಕಾರು, ದ್ವಿಚಕ್ರ, ಆಟೋ ಓಡಾಟಕ್ಕೆ ಅನುಮತಿಯಿಲ್ಲದ ಕಾರಣ ಸಾರ್ವಜನಿಕರು ನಡೆದುಕೊಂಡು ಬಂದು ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋದರು. ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿತ್ತು. ದಾಸನಕೊಪ್ಪ ಹಾಗೂ ತಿಗಣಿ ಕ್ರಾಸ್ ಚೆಕ್ ಪೋಸ್ಟ್ಗಳಲ್ಲಿ ಅಂತರ್ ಜಿಲ್ಲೆಯಿಂದ ಆಗಮಿಸದಂತೆ ನಿಗಾ ವಹಿಸಲಾಗಿತ್ತು. ಔಷಧಿ, ಹಾಲಿನ ಅಂಗಡಿಗಳನ್ನು ಹೊರತುಪಡಿಸಿದರೆ ಎಲ್ಲ ವ್ಯಾಪಾರ ವಹಿವಾಟುಗಳು ಸಂಪೂರ್ಣ ಬಂದ್ ಆಗಿದ್ದವು.
ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಅನಗತ್ಯವಾಗಿ ಹೊರಗಡೆ ತಿರುಗಾಡುವವರ 10 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.