ಜ.22ರಂದು ಬನಶಂಕರಿ ದೇವಿಗೆ ಕುಂಕುಮಾರ್ಚನೆ
ರಾಣಿಬೆನ್ನೂರ 20: ಇಲ್ಲಿನ ಬನಶಂಕರಿ ನಗರದ ಬನಶಂಕರಿ ದೇವಿಯ ಕಲ್ಯಾಣ ಮಂಟಪದಲ್ಲಿ ಜ.22ರಂದು ಮುಂಜಾನೆ 10ಕ್ಕೆ ವಾರ್ಷಿಕ ಸಂಪ್ರದಾಯದಂತೆ ಬನಶಂಕರಿ ದೇವಿಗೆ ಕುಂಕುಮಾರ್ಚನೆ ಹಾಗೂ ಅಭಿಷೇಕ ಧಾರ್ಮಿಕ ಕಾರ್ಯಕ್ರಮವು ನಡೆಯಲಿದೆ. ಅಂದು ಮಧ್ಯಾಹ್ನ 1.30ಕ್ಕೆ ಸಾರ್ವಜನಿಕವಾಗಿ ಅನ್ನ ಸಂತರ್ಪಣೆ ಸೇವಾ ಕಾರ್ಯ ಜರುಗಲಿದೆ. ಭಕ್ತಾದಿಗಳು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಲು ದೇವಸ್ಥಾನದ ಪ್ರಮುಖರಾದ ಡಾ.ಸಂಜಯ ಎಂ.ನಾಯ್ಕ ಅವರು ಕೋರಿದ್ದಾರೆ.