ಬಾಣಂತಿ ಸಾವು: ಶಾಸಕರಿಂದ ಉನ್ನತ ಮಟ್ಟದ ತನಿಖೆಗೆ ಆಗ್ರಹ
ಕಾರವಾರ 18: ಸವರ್ೋದಯ ನಗರದ ಗೀತಾ ಬಾನಾವಳಿಕರ್ ಬಾಣಂತಿ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ರಾಜ್ಯ ಸಕರ್ಾರವನ್ನು ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಆಗ್ರಹಿಸಿದರು. ಜಿಲ್ಲಾಧಿಕಾರಿ ಹರೀಶ್ ಕುಮಾರ್ ಅವರನ್ನು ಕಂಡು ಅವರು ಈ ಆಗ್ರಹ ಮಾಡಿದರಲ್ಲದೇ, ವಿವಾದಿತ ವೈದ್ಯ ನನ್ನ ಕ್ಷೇತ್ರದಲ್ಲಿ ಬೇಡ. ಅವರು ಹಠ ಮುಂದುವರಿಸಿದರೆ, ಸಕರ್ಾರದ ವಿರುದ್ಧವೇ ಪ್ರತಿಭಟನೆಗೆ ಇಳಿಯುವೆ ಎಂದು ಎಚ್ಚರಿಸಿದರು.
ಬಾಣಂತಿ ಸಾವಿನ ಆರೋಪ ಎದುರಿಸುತ್ತಿದ್ದ ಡಾ.ಶಿವಾನಂದ ಕುಡ್ತಲಕರನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಹುದ್ದೆಗೆ ಮರುನೇಮಕ ಖಂಡಿಸಿ ಮೀನುಗಾರರು, ಹಾಗ ಮುಖಂಡರು ಈ ಹೋರಾಟವನ್ನು ತಾವು ಬೆಂಬಲಿಸುವುದಾಗಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ತಿಳಿಸಿದ್ದಾರೆ.
ಗೀತಾ ಬಾನಾವಳಿ ಸಾವಿನ ಕುರಿತು ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ತನಿಖಾ ತಂಡದ ಬಗ್ಗೆ ಪ್ರತಿಭಟನಾಕಾರರು ಈ ಹಿಂದೆಯೇ ಸಂದೇಹ ವ್ಯಕ್ತಪಡಿಸಿದ್ದರು. ಉನ್ನತ ಮಟ್ಟದ ಅಧಿಕಾರಿಗಳಿರುವ ತಂಡ ರಚಿಸುವಂತೆಯೂ ಆಗ್ರಹಿಸಿದ್ದರು. ಆ ಸಮಿತಿ ನೀಡಲಿರುವ ವರದಿಯ ಬಗ್ಗೆ ಈ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಸ್ಥಳೀಯರು ಹಾಗೂ ಮೀನುಗಾರ ಸಮಾಜದವರ ಬೇಡಿಕೆಯಂತೆ ಗೀತಾ ಬಾನಾವಳಿ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಾಗಿದೆ. ಮರಣೋತ್ತರ ಪರೀಕ್ಷಾ ವರದಿಯೂ ಬರಬೇಕಾಗಿದೆ. ಸಾವಿಗೆ ಕಾರಣ ಏನು, ಯಾರು ಕಾರಣ ಎನ್ನುವ ರಹಸ್ಯ ಬಹಿರಂಗಗೊಳ್ಳಬೇಕಾಗಿದೆ ಎಂದು ಶಾಸಕರು ಆಗ್ರಹಿಸಿದ್ದಾರೆ.
ಕಳೆದ ಆಗಸ್ಟ್ 31ರಂದು ಹೆಣ್ಣು ಮಗುವಿಗೆ ಸುರಕ್ಷಿತವಾಗಿ ಜನ್ಮನೀಡಿದ ಸವರ್ೋದಯ ನಗರದ ಶ್ರೀಮತಿ ಗೀತಾ ಬಾನಾವಳಿ ಸೆಪ್ಟೆಂಬರ್ 3 ರಂದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಮೃತಪಟ್ಟಿದ್ದರು. ಸಾರ್ವಜನಿಕರ ಅಭಿಪ್ರಾಯ, ಒತ್ತಾಯ ಹಾಗೂ ಮಾನವೀಯತೆಯ ನೆಲೆಯಲ್ಲಿ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೂ ಮನವಿ ಮಾಡಿದ್ದಾಗಿ ಶಾಸಕರು ತಿಳಿಸಿದ್ದಾರೆ. ಆರೋಪಿತ ವೈದ್ಯರ ಮರುನೇಮಕಕ್ಕಿಂತ ಮೊದಲು ಇವರ ಕುಟುಂಬಕ್ಕೆ ಹಾಗೂ ಇವರ ಪರವಾಗಿ ಹೋರಾಡಿದ ಮೀನುಗಾರ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಮೃತಪಟ್ಟ ಗೀತಾ ಬಾನಾವಳಿ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ತಾವು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕರು ತಿಳಿಸಿದ್ದಾರೆ.
ತಾವೊಬ್ಬ ಮಹಿಳೆಯಾಗಿ ಗೀತಾ ಬಾನಾವಳಿಕರ ಅವರ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಲು ಬದ್ಧರಿದ್ದು, ಅವರ ಕುಟುಂಬದ ಭಾವನೆಗಳೊಂದಿಗೆ ಯಾರೂ ಚೆಲ್ಲಾಟವಾಡಬಾರದು. ನೊಂದವರ, ಸಂಕಷ್ಟಕ್ಕೊಳಗಾದವರ ನೆರವಿಗೆ ಸದಾ ತಾವು ಇರುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.