ಹೂವಿನ ಹಡಗಲಿ

ಬಾಲ್ ಬ್ಯಾಡ್ಮಿಂಟನ್‌: ಸೋಗಿ ಕಾಲೇಜ್ ರಾಜ್ಯಮಟ್ಟಕ್ಕೆ

ಬಾಲ್ ಬ್ಯಾಡ್ಮಿಂಟನ್‌: ಸೋಗಿ ಕಾಲೇಜ್ ರಾಜ್ಯಮಟ್ಟಕ್ಕೆ

ಬಾಲ್ ಬ್ಯಾಡ್ಮಿಂಟನ್‌: ಸೋಗಿ ಕಾಲೇಜ್ ರಾಜ್ಯಮಟ್ಟಕ್ಕೆ ಲೋಕದರ್ಶನ ವರದಿ 

ಹೂವಿನಹಡಗಲಿ 7:  2025-26 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ನಲ್ಲಿ ಸೋಗಿಯ ಪಟ್ಟೇದ ಸಿದ್ಧಮಲ್ಲಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಹರಪನಹಳ್ಳಿ ತಂಡದ ವಿರುದ್ಧ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಪ್ರಾಚಾರ್ಯರಾದ ಕೆ ಶಬೀನಾ ತಿಳಿಸಿದ್ದಾರೆ.ತಾಲೂಕು ಕ್ರೀಡಾಕೂಟದ ಹಂತದಿಂದಲೂ ಸ್ಥಿರ ಹಾಗೂ ಆಕ್ರಮಣಕಾರಿ ಪ್ರದರ್ಶನ ತೋರಿದ ಸೋಗಿ ಕಾಲೇಜಿನ ಅಜಯ್, ಮಾದೇಶ, ಕಿರಣ್, ಸಾಗರ್, ಸುದೀಪ್ ಗುರುಬಸವರಾಜ್, ಬಸವರಾಜ್, ಮಹಮ್ಮದ್ ಜಬಿ ಅವರ ತಂಡವು ಜಿಲ್ಲಾ ಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ ನಿರಾಯಾಸವಾಗಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯಿತು.ತಂಡದ ಸಾಧನೆಗೆ ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್ ನಾರಾಯಣ್, ಉಪನ್ಯಾಸಕರಾದ ಜ್ಯೋತಿ, ವೆಂಕಟೇಶ್, ಪರಶುರಾಮ ನಾಗೋಜಿ, ನರೇಶ್, ನಟರಾಜ್ ಹಾಗೂ ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ