ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಗ್ರೀಡ್ ಮಂಜೂರಾತಿ: ಶಾಸಕ ಬಳ್ಳಾರಿ
ಬ್ಯಾಡಗಿ: ರೈತರ ನೀರಾವರಿ ಸೇರಿದಂತೆ ಜನರ ನಿರಂತರ ವಿದ್ಯುತ್ ಪೂರೈಕೆಗಾಗಿ ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಗ್ರೀಡ್ಗಳನ್ನು ಮಂಜೂರಾತಿ ಮಾಡಿಸಲಾಗಿದ್ದು, ಬ್ಯಾಡಗಿಯಲ್ಲಿ 10ಎಂಎಂ ಇದ್ದ ವಿದ್ಯುತ್ ಸಾಮಥ್ರ್ಯವನ್ನು 20 ಎಂಎಂಗೆ ಹೆಚ್ಚಿಸಲಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ಪಂಚಾಯತರಾಜ್ ತಾಂತ್ರಿಕ ಉಪವಿಭಾಗದ ವತಿಯಿಂದ 90ಲಕ್ಷ ರೂಗಳ ಅನುದಾನದಡಿ ತಾಲೂಕಿನ ತಿಮಕಾಪುರ-ಕುರಬಗೊಂಡ ರಸ್ತೆ ಹಾಗೂ 60ಲಕ್ಷ ರೂಗಳ ಅನುದಾನದಡಿ ತಿಪಲಾಪುರ ಚಿನ್ನಿಕಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರೈತರು ತಮಗೆ ಅವಶ್ಯವಿರುವ ವಿದ್ಯುತ್ ಪ್ರಮಾಣದ ಬೇಡಿಕೆಯ ಅನುಸಾರ ವಂತಿಗೆ ತುಂಬಿದರೆ, ಇಲಾಖೆಯವರು ಸಹ ಹೆಚ್ಚು ಸಾಮಥ್ರ್ಯದ ಟಿಸಿಯನ್ನು ಅಳವಡಿಸಲು ಕ್ರಮ ವಹಿಸುತ್ತಾರೆ. ಇದರಿಂದ ಓವರ್ ಲೋಡ್ ಹಾಗೂ ಟಿಸಿ ಪದೇಪದೇ ಸುಟ್ಟು ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರಲ್ಲದೇ, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿಯೂ ಸಂಪರ್ಕ ರಸ್ತೆ, ನೀರಾವರಿ, ಶೈಕ್ಷಣಿಕ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಹೆಡಿಗ್ಗೊಂಡ ಗ್ರಾಪಂ ಸದಸ್ಯರುಗಳಾದ ಈರಣ್ಣ ಬಣಕಾರ, ಹನುಮಂತಪ್ಪ ಹೊನ್ನಪ್ಪನವರ, ನಿರ್ಮಲಾ ಹೆಗ್ಗೇರಿ, ಕೆರವಡಿ ಗ್ರಾಪಂ ಅಧ್ಯಕ್ಷೆ ವಿನೋದಾ ಓಲೇಕಾರ, ಸದಸ್ಯ ಮಂಜಪ್ಪ ಹೊನ್ನಳ್ಳಿ, ಮುಖಂಡರಾದ ಸುರೇಶ ಉದ್ಯೋಗಣ್ಣನವರ, ಮೃತ್ಯುಂಜಯ ಕಡೇಮನಿ ಮಾಲತೇಶ ಚೌಟಿ, ಬಸಣ್ಣ ಕೂಸಮ್ಮನವರ, ಅಶೋಕ ಓಲೇಕಾರ, ಎಇಇ ಡಿ.ಎಲ್.ಕಲ್ಲೋಳ್ಕರ, ಜೆಇ ವೈ.ಕೆ.ಮಟಗಾರ, ಗುತ್ತಿಗೆದಾರರಾದ ತಿಮ್ಮಣ್ಣ ವಡ್ಡರ, ಯಲ್ಲನಗೌಡ್ರ ಕರೇಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು