ಬ್ಯಾಡ್ಗಿ

ಬ್ಯಾಡಗಿ: ಕೋವಿಡ್ ನಿಯಮಗಳನ್ನು ಅನುಸರಿಸಿ ವಾರದ ಸಂತೆ ನಡೆಸಲು ಅವಕಾಶ

ಬ್ಯಾಡಗಿ: ಕೋವಿಡ್ ನಿಯಮಗಳನ್ನು ಅನುಸರಿಸಿ ವಾರದ ಸಂತೆ ನಡೆಸಲು ಅವಕಾಶ

ಬ್ಯ್ಯಾಡಗಿ 16: ಪಟ್ಟಣದಲ್ಲಿ ಎಂದಿನಂತೆ ಬುಧವಾರ ಮತ್ತು ಶನಿವಾರ ದಿನಗಳಂದು ಸಂತೆ ಮೈದಾನದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ಸಂತೆಗಳನ್ನು ನಡೆಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಏಸು ಬೆಂಗಳೂರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಪಟ್ಟಣದಲ್ಲಿ ವಾರದ ಸಂತೆಗಳನ್ನು ರದ್ದು ಪಡಿಸಲಾಗಿತ್ತು. ಈಗ ಕೋವಿಡ್ ಸೋಂಕು ನಿಯಂತ್ರಣದಲ್ಲಿ ಇರುವುದರಿಂದ ವಾರದ ಸಂತೆಗಳನ್ನು ನಡೆಸಲು ನಡೆಸಲು ತಾಲೂಕಾಡಳಿತ ನಿರ್ಧರಿಸಿದ್ದು, ಅದರಂತೆ ನಾಳೆ ದಿ. 17ರಿಂದ ಎಂದಿನಂತೆ ಪ್ರತಿ ಶನಿವಾರ ಹಾಗೂ ಬುಧವಾರ ದಿನಗಳಂದು ಸಂತೆ ಮೈದಾನದಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ, ವಹಿವಾಟನ್ನು ನಡೆಸಬೇಕೆಂದು ತಿಳಿಸಿದ್ದಾರೆ. 


ಸುದ್ದಿ ಓದಿ