,,...ಹದಗೆಟ್ಟ ರಸ್ತೆ; ತಪ್ಪದ ಗೋಳಾಟ! ಹಾಳಾದ ಲಕ್ಕುಂಡಿ ಕ್ರಾಸದಿಂದ-ಪೀರಾಪೂರದವರೆಗಿನ ರಸ್ತೆ ವಿಶೇಷ ವರದಿ- ಸಂಜಯಸಿಂಗ ರಜಪೂತ
ತಾಳಿಕೋಟಿ: ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಹಾಳಾಗಿದ್ದು ವಾಹನ ಸವಾರರ ಗೋಳು ಹೇಳತೀರದಾಗಿದೆ.
ತಾಲೂಕಿನ ದೇ. ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಲಕ್ಕುಂಡಿ ಕ್ರಾಸದಿಂದ ಪೀರಾಪೂರದವರೆಗಿನ ಸುಮಾರು 7 ಕಿ. ಮೀ. ರಸ್ತೆ ಅಭಿವೃದ್ಧಿಗೊಳ್ಳದೆ 4 ವರ್ಷಗಳಾಗಿವೆ ರಸ್ತೆ ಎಲ್ಲೆಂದರಲ್ಲಿ ತಗ್ಗು-ದಿನ್ನಿಗಳಿಂದ ಕೂಡಿ ಸಂಚಾರವೆ ದುಸ್ತರವಾಗಿದೆ.
ಇದು ಹುನಗುಂದ-ಸುರಪೂರ ರಾಜ್ಯ ಹೆದ್ಧಾರಿ ಸಂಪರ್ಕ ರಸ್ತೆಯಾಗಿದೆ. ಪ್ರತಿನಿತ್ಯ ಈ ರಸ್ತೆಯ ಮೇಲೆ ನೂರಾರು ವಾಹನಗಳು, ಶಾಲಾ ವಾಹನಗಳು ಖಾಸಗಿ ಸರಕಾರಿ, ಬಸ್ಸಗಳು ಹಾಗೂ ಲೆಕ್ಕವಿಲ್ಲದಷ್ಟು ದ್ವಿ-ಚಕ್ರ ವಾಹನಗಳು ಸಂಚರಿಸುತ್ತವೆ. ಅದೇಷ್ಟೋಬಾರಿ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಕೆಲವು ಬಾರಿ ಜೀವ ಹಾನಿಯು ಸಂಭವಿಸಿವೆ. ಈ ಭಾಗದಲ್ಲಿ ಕ್ರಷರ್ ಫ್ಯಾಕ್ಟರಿಗಳಿರುವುದರಿಂದ ಟಿಪ್ಪರಗಳು ಈ ರಸೆಯ ಮೂಲಕ ಸಂಚರಿಸುವದರಿಂದ ದಿನದಿಂದದಿನ ರಸ್ತೆ ಹಾಳಾಗುತ್ತೀದೆ. ಈ ಭಾಗದಲ್ಲಿ ಜನರು ಅನಾರೋಗ್ಯಕ್ಕೀಡಾದಾಗ ಇಲ್ಲವೆ ಗರ್ಬಿಣಿಯರನ್ನು ಹೆರಿಗೆಗೆ ಅಂಬ್ಯುಲನ್ಸ್ ಮೂಲಕ ಸಮೀಪದ ತಾಳಿಕೋಟಿಗೆ ಬರಬೇಕು ಇಂಥಹ ಸ್ಥಿತಿಯಲ್ಲಿ ಅವರ ಪಾಡು ದೇವರೆ ಬಲ್ಲ.
ರಸ್ತೆ ಮರು ನಿರ್ಮಿಸಿ:- ಸಂಪೂರ್ಣ ಹದಗೆಟ್ಟಿರುವ ಈ ರಸ್ತೆ ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ ಬದಲಿಗೆ ಈ ರಸ್ತೆಯನ್ನು ಮರು ನಿರ್ಮಾಣ ಮಾಡಬೇಕೆನ್ನುತ್ತಾರೆ, ಇಲ್ಲಿಯ ಗ್ರಾಮಸ್ಥರು ಈ ಭಾಗದ ಶಾಸಕರು ಆದಷ್ಟು ಬೇಗ ಈ ರಸ್ತೆಯನಿರ್ಮಾಣಕ್ಕೆ ಕ್ರಮವಹಿಸಬೇಕು ಇಲ್ಲದಿದ್ದರೆ ಇದು ಜನರ ಆಕ್ರೋಶಕ್ಕೆ ಕಾರಣವಾಗಬಹುದು.
ಕೋಟ್:
ಕಳೆದ ನಾಲ್ಕು ವರ್ಷಗಳಿಂದ ಹಾಳಾಗಿ ಹೋದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿಲ್ಲ ಇದು ರಾಜ್ಯ ಹೆದ್ಧಾರಿಯ ಮುಖ್ಯ ಸಂಪರ್ಕ ರಸ್ತೆಯಾಗಿದೆ. ಈಗ 9 ತಿಂಗಳೊಳಗಾಗಿ ಮತ್ತೆ ಚುನಾವಣೆಗಳು ಬರುತ್ತಿವೆ. ಆದಷ್ಟು ಬೇಗ ಈ ರಸ್ತೆಯನ್ನು ನಿರ್ಮಿಸಬೇಕು.
-ಸುರೇಶಬಾಬುಗೌಡ ಪೀರಾಪೂರ,
ಕೆಪಿಸಿಸಿ ಮಾಜಿ ಸದಸ್ಯರು.
ಸಾಹೇಬರಾ ಮಳಿಬಂತಂದ್ರ ಈ ರಸ್ತೆ ಮ್ಯಾಲ್ ಹೋಗಾಕ ಆಗೋದಿಲ್ರಿ ನಾಲ್ಕು ವರ್ಷ ಆದರೂ ಬರೀ ಟೆಂಡರ್ ಆಗೈತಿ ಅಂತಾನೇ ಹೇಳ್ತಾರಿ ನಮಗಂತು ಇದರ ಕಾಲಾಗ ಸಾಕಾಗಿ ಹೋಗೈತರಿ ಈ ಹಾಳ ರಸ್ತೆ ಯಾವಾಗ ಆಗ್ತತೈನ್ರೀ......
-ಹೆಸರು ಹೇಳದ ಗ್ರಾಮಸ್ಥ