ಐಟಿಐ ಕಾಲೇಜಿನಲ್ಲಿ- ಬಾಬುಜೀ ಜಯಂತಿ ಆಚರಣೆ
ಗೋಕಾಕ 6: ನಗರದ ಬಸವಜ್ಯೋತಿ ಐಟಿಐ ಕಾಲೇಜಿನಲ್ಲಿ ಮಾಜಿ ಉಪ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ ಹಸಿರು ಕ್ರಾಂತಿಯ ಹರಿಕಾರ ಡಾ,, ಬಾಬು ಜಗಜೀವನ್ ರಾಮ್ ಅವರ 117 ಜನ್ಮ ದಿನಾಚರಣೆಯನ್ನು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವಮೂಲಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಶೋಕ ಲಗಮಪ್ಪಗೋಳ ನೆರವೇರಿಸಿದರು
ಅತಿಥಿಗಳಾಗಿ ಆಗಮಿಸಿದ ಪರಶುರಾಮ್ ಗೊಲ್ಲರ ಮಾತನಾಡಿ ಡಾ,, ಬಾಬು ಜಗಜೀವನ್ ರಾಮ್ ಅವರು ಬಿಹಾರ್ ರಾಜ್ಯದ ಚಮ್ಮಾರ ಕುಟುಂಬದಲ್ಲಿ ಜನಿಸಿ ಉನ್ನತ ಶಿಕ್ಷಣ ಪಡೆದು ಬಿಹಾರ್ ರಾಜ್ಯದಿಂದ 9 ಬಾರಿ ಲೋಕಸಭೆಗೆ ಸ್ಪರ್ದಿಸಿ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ,ರೈಲ್ವೆ,ಕೃಷಿ,ರಕ್ಷಣೆ,ಮತ್ತು ಹಲವಾರು ಇಲಾಖೆಯ ಸಚಿವರಾಗಿ ಕೆಲಸಮಾಡಿದ್ದಾರೆ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಸಹ ಅನುಭವಿಸಿದ್ದರು ಎಂದು ತಿಳಿಸಿದರು
ನಂತರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಶೋಕ ಲಗಮಪ್ಪಗೋಳ ಮಾತನಾಡಿ ಭಾರತದಲ್ಲಿ ಕೃಷಿಯೇ ಅಭಿವೃದ್ಧಿಯ ಮೂಲವಾಗಿದೆ.ಈ ದೃಷ್ಟಿಯಿಂದ ಅವರು ದೇಶದ ಭೀಕರ ಬರಗಾಲದ ಕ್ಷಾಮದ ಪರಿಸ್ಥಿತಿಯಲ್ಲಿ ಕೈಗೊಂಡ ಕ್ರಮಗಳು ದೇಶದ ಆಹಾರ ಕೊರತೆಯನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಯಿತು. ದೇಶದ ರಾಜಕೀಯ,ಸಾಮಾಜಿಕ,ಆರ್ಥಿಕ ಬದಲಾವಣೆಗೆ ಡಾ,, ಬಾಬು ಜಗಜೀವನ್ ರಾಮ್ ಮೂಲ ಕಾರಣರಾಗಿದ್ದಾರೆ ದೀನದಲಿತರ ಏಳಿಗೆಗಾಗಿ ಸದಾಶ್ರಮಿಸಿದರು ಮತ್ತು ಸಾಮಾಜಿಕ ಕಳಕಳಿ ಹೊಂದಿದ್ದ ವ್ಯೆಕ್ತಿಯಾಗಿದ್ದರು ಅವರ ತತ್ವಗಳನ್ನೂ ಇಂದಿನ ಯುವಜನರು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು,
ಬಸವಜ್ಯೋತಿ ಐ ಟಿ ಐ ಕಾಲೇಜಿನ ಪ್ರಾಚಾರ್ಯರಾದ ನಿಂಗಪ್ಪ ಮಗದುಮ್ಮ ಹಾಗೂ ಸಿಬ್ಬಂದಿಗಳಾದ ಸಂಪತ್ ರಾವ್ ಗಂಡವ್ವಗೋಳ, ಎಸ.ಡಿ.ಹಿರೇಗೊಳಿ, ಸಯ್ಯದ ಸರ್ಕಾವಸ್, ಮಂಜುನಾಥ ಕಾಶೆಪ್ಪಗೋಳ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ವಿದ್ಯಾರ್ಥಿ ಪ್ರತಿನಿಧಿ ಅರುಣ ಪೂಜೇರಿ ಸ್ವಾಗತಿಸಿ ವಂದಿಸಿದರು.