ಬ್ಯಾಡ್ಗಿ

ಬಾಬಾ ಸಾಹೇಬರ ಚಿಂತೆನೆ ಇಂದಿಗೂ ಯುವಜನೆತೆಗೆ ಸ್ಫೂರ್ತಿ : ತಹಶೀಲ್ದಾರ

ಬಾಬಾ ಸಾಹೇಬರ ಚಿಂತೆನೆ ಇಂದಿಗೂ ಯುವಜನೆತೆಗೆ ಸ್ಫೂರ್ತಿ : ತಹಶೀಲ್ದಾರ

ಬ್ಯಾಡಗಿ:   ಏ.14ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಹಶೀಲ್ದಾರ ಎಸ್.ಎ.ಪ್ರಸಾದ ಹೇಳಿದರು.

ತಹಶೀಲ್ದಾರರ ಕಾರ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 132 ನೇ ಜಯಂತಿಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು. 

ಭಾರತೀಯರ ಪವಿತ್ರ ಗ್ರಂಥವಾದ ದೇಶದ ಆತ್ಮವೆಂದೇ ಕರೆಯಬಹುದಾದ ಸಂವಿಧಾನ ರಚನೆಯ ಹಿಂದಿನ ದೊಡ್ಡ ಶಕ್ತಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್,ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ಭಾರತೀಯರ ಪಾಲಿಗೆ ಸಾರ್ವಕಾಲಿಕ ಸಕಾಲಿಕ ಎನ್ನಬಹುದು. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲಿವೆ ಎಂದರು.

ಮಾಜಿ ಪುರಸಭಾ ಸದಸ್ಯ ಸುರೇಶ್ ಅಸಾದಿ ಮಾತನಾಡಿ ಇಂದಿನ ಸಮಾಜದಲ್ಲಿ ಡಾ.ಬಿ.ಆರ್.ಅಂಬೇಡ್ಕರ ತತ್ವ ಸಿದ್ಧಾಂತಗಳನ್ನು ಅನುಸರಿಸುವ ಅಗತ್ಯವಿದೆ. ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರು ಅತ್ಯಂತ ಕಡುಬಡತನದಿಂದ ಬಂದರೂ ಸಹ ಛಲದಿಂದ ಹೋರಾಡಿ, ಉನ್ನತ ಶಿಕ್ಷಣ ಪಡೆದು ದೆಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮುಖಾಂತರ ಗೆಲುವು ಸಂಪಾದಿಸಬೇಕೆಂದು ಕರೆ ಕೊಟ್ಟಿದ್ದಾರೆ. ಇಂದಿನ ಯುವ ಪಿಳಿಗೆ ಅವರ ಆದರ್ಶಗಳನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ವಿವಿಧ ಇಲಾಖೆಯ  ಅಧಿಕಾರಿಗಳಾದ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾಜರ್ುನ, ಮಾಜಿ ಯೋಧ ಎಂ.ಡಿ.ಚಿಕ್ಕಣ್ಣವರ, ದುರ್ಗಾ ಗೇಶ ಗೋಣೆಮ್ಮನವರ, ಹನುಮಂತಪ್ಪ ಕಾಟೇನಹಳ್ಳಿ, ಐ ಬಿ ಬೆನಕಪ್ಪ, ಜಿ ದೊಡ್ಡ ಬಸವರಾಜ್, ಮಲ್ಲೇಶ್, ರವಿ ಹುಣಸಿಮರ, ಗುಡ್ಡಪ್ಪ ಹಂಚಿನಮನಿ, ಹನುಮಂತಪ್ಪ,  ಬಸವರಾಜ,  ಚನ್ನಬಸಯ್ಯ ಪ್ರಸಾದಿಮಠ ಸೇರಿದಂತೆ ಇತರರಿದ್ದರು.

ಸುದ್ದಿ ಓದಿ