ಕಾರವಾರ

ಕರ್ನಾಟಕದ ಬಿಜೆಪಿ ಮೇಲೆ ಬಿಎಸ್‌ವೈ ಹಿಡಿತ : ಅಸ್ನೊಟಿಕರ್

ಕರ್ನಾಟಕದ ಬಿಜೆಪಿ ಮೇಲೆ ಬಿಎಸ್‌ವೈ ಹಿಡಿತ : ಅಸ್ನೊಟಿಕರ್

ಕಾರವಾರ :   ಕರ್ನಾಟಕದ ಬಿಜೆಪಿಯ ಮೇಲೆ ಬಿಎಸ್‌ವೈ ಹಿಡಿತ ಸಾಧಿಸಿದ್ದಾರೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು. ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ಮುಂದೆ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿದೆ ಎಂದು ಅಭಿಪ್ರಾಯಪಟ್ಟ ಅಸ್ನೋಟಿಕರ್, ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿಗೆ ಲಾಭವಾಗಲಿದೆ ಎಂದರು. ಪಕ್ಷದಲ್ಲಿ ಹದ್ದು ಮೀರಿ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಯೋಗಿಶ್ವರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಅಸ್ನೋಟಿಕರ್ ಹೇಳಿದರು. ಯಡಿಯೂರ​‍್ಪ ಅವರು ಕರ್ನಾಟಕದ ಬಿಜೆಪಿಯ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರೇ ಇನ್ನು ಮುಂದೆ ಸೂಪರ್ ಸಿಎಂ ಆಗಿ ಅಧಿಕಾರ ಚಲಾಯಿಸಲಿದ್ದಾರೆಂದ ಅವರು 2023ಕ್ಕೆ ವಿಜಯೇಂದ್ರ ಮುಖ್ಯಮಂತ್ರಿಯಾಗಲಿದ್ದಾರೆ. ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಆಯ್ಕೆ ಮಾಡಿದ್ದು ಒಳ್ಳೆಯ ನಿರ್ಧಾರ. ಮುಂದಿನ ಸರ್ಕಾರದ ರಚನೆಯ ವೇಳೆ ಕುಮಾರಸ್ವಾಮಿ ಮಹತ್ವದ ರೂಲ್ ನಿರ್ವಹಿಸಲಿದ್ದಾರೆಂದರು. 


ಸುದ್ದಿ ಓದಿ