ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ: ಸವದಿ
ಲೋಕದರ್ಶನ ವರದಿ
ಅಥಣಿ (ಸಂಬರಗಿ)23: ಅಥಣಿ ಪುರಸಭೆ ಚುನಾವಣೆಯಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಯುವಾ ಮುಖಂಡ ಶಿವಕುಮಾರ ಸವದಿ ಹೇಳಿದರು.
ಅಥಣಿ ಪಟ್ಟಣದ ವಾರ್ಡ ಅಭ್ಯರ್ಥಿ ಮುತ್ತುರಾಜ ಕಾಂಬಳೆ ಪರ ಪ್ರಚಾರಕ್ಕಾಗಿ ಅಯೋಜಿಸಿದ್ದ
ಸಭೆಯಲ್ಲಿ ಮಾತನಾಡಿದ ಆವರು ನಗರ ಅಬಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಎಲ್ಲರು ಸಹಕರಿಸಬೇಕು ಎಂದು ವಿನಂತಿಸಿದರು. 27 ವಾರ್ಡಗಳಲ್ಲೂ ಪ್ರಚಾರ ಜೋರಾಗಿದೆ. ಎಲ್ಲಾ ವಾರ್ಡಗಳಲ್ಲಿ ಮತದಾರರು ಬೆಂಬಲಿಸುತ್ತಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಹೆಚ್ಚು ಅನುದಾನ ತಂದು ನಗರದ ಪಟ್ಟಣದ ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಈ ವೇಳೆ ಅಥಣಿ ಬಿಜೆಪಿ ಮಂಡಲ ಅಧ್ಯಕ್ಷರಾದ ಅನ್ನಾಸಾಹೇಬ ನಾಯಕ, ರಾಮನಗೌಡಾ ಪಾಟೀಲ, ಸುಶೀಲ ಪತ್ತಾರ, ರಮೇಶ ಪಟ್ಟಣ ಸೇರಿದಂತೆ ವಾರ್ಡದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.