ಕೊಪ್ಪಳ

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಕೊಪ್ಪಳ 29: ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಇಂದು ಭಾರತೀಯ ಜನತಾ ಪಾರ್ಟಿ ಕೊಪ್ಪಳ ಜಿಲ್ಲಾ ಘಟಕದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ನಡೆದಂತಹ ಆಂಜನೇಯ ದೇವಸ್ಥಾನ ಎದುರುಗಡೆ ಇರುವ ಧ್ವಜದ ಕಂಬಕ್ಕೆ ಹನುಮನ ಧ್ವಜವನ್ನು ಕಟ್ಟಲಾಗಿತ್ತು.ದಿ. 22. ರಂದು ಗ್ರಾಮ ಪಂಚಾಯಿತಿ ಅನುಮತಿ ಪಡೆದು ಗ್ರಾಮದ ಎಲ್ಲರೂ ಸೇರಿ ಆಚರಣೆ ಮಾಡಲಾಗಿತ್ತು.ಆದರೆ ಕಾಂಗ್ರೆಸ್ಸಿನ ಕೆಲವು ಮುಖಂಡರು ಶಾಸಕರು ವಿರೋಧ ಮಾಡಿದ ನಂತರ ಪೊಲೀಸ್ ಅಧಿಕಾರಿಗಳ ಮುಖಾಂತರ ಧ್ವಜಕ್ಕೆ ಕಟ್ಟಿದ ಹನುಮನ ಧ್ವಜವನ್ನು ತೆರವು ಗೊಳಿಸಲಾಗಿದೆ. ಗ್ರಾಮದಲ್ಲಿ ಶಾಂತಿಯಿಂದ ಇದ್ದು ಇಂದು ಗಲಭೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.ಮತ್ತು ಸ್ಥಳೀಯರ ಪ್ರತಿಭಟನೆ ಮಾಡಿದ್ದಕ್ಕೆ ಲಾಟಿಚಾರ್ಜ್‌ ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.ರಾಮನ ವಿರೋಧಿ ಹನುಮನ ವಿರೋಧಿ ಹನುಮನ ಧ್ವಜದ ವಿರೋಧಿ ಹಿಂದುತ್ವ ವಿರೋಧಿ ದೇಶದ ಪರಂಪರೆ ವಿರೋಧವನ್ನು ನಿರಂತರವಾಗಿ ಕಾಂಗ್ರೆಸ್ ಪಕ್ಷ ಮಾಡುತ್ತಾ ಇದೆ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ. 

ಈ ಪ್ರತಿಭಟನೆಯಲ್ಲಿ  ಜಿಲ್ಲಾಧ್ಯಕ್ಷರು ನವೀನ್ ಗುಳಗಣ್ಣನವರು,ಲೋಕಸಭಾ ಸದಸ್ಯರು ಸಂಗಣ್ಣ ಕರಡಿ,ಜಿಲ್ಲಾ ವಕ್ತಾರರು ಮಹೇಶ ಅಂಗಡಿ,ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರು ಸಣ್ಣ ಕನಕಪ್ಪ ಚಲವಾದಿ,ಜಿಲ್ಲಾ ಮಹಿಳಾ ಅಧ್ಯಕ್ಷರು ವಾಣಿಶ್ರೀ ಮಠದ,  ಮಂಜುಳಾ ಅಂಬರೀಶ್ ಕರಡಿ,  ಯುವ ಮುಖಂಡರಾದ ಗಣೇಶ್ ಹೊರತಟ್ನಾಳ್,  ಮಂಜುನಾಥ್ ಪಾಟೀಲ್ ಹಂದ್ರಾಳ, ತಾಲೂಕು ಅಧ್ಯಕ್ಷರು ಪ್ರದೀಪ,ನಗರ ಅಧ್ಯಕ್ಷರು ಸುನೀಲ, , ಚಂದ್ರು ಕವಲೂರ, ಮಂಜುನಾಥ್ ಮುಸಲಾಪುರ್ ಕೀರ್ತಿ ಪಾಟೀಲ,ಗೀತಾ ಮುತ್ತಾಳ,ರವಿಚಂದ್ರನ ಮಾಲಿ ಪಾಟೀಲ,ಸಿದ್ದು ಪಾಟೀಲ,ವೆಂಕಟೇಶ ಪೂಜಾರಿ,ರಮೇಶ ಕವಲೂರ,ಶರಣಯ್ಯ, ಬಸಯ್ಯ, ನೀಲಕಂಠಯ್ಯ, ಅಮಿತ ಕಂಪ್ಲಿಕರ್,  ಪ್ರಶಾಂತ.ಪ್ರಾಣೇಶ ಮಾದನೂರ,ಗವೀಶ. ಪಕ್ಷದ ಮುಖಂಡರು ಪದಾಧಿಕಾರಿಗಳು ಚುನಾವಣಾ ಪ್ರತಿನಿಧಿಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು . 


ಸುದ್ದಿ ಓದಿ