ಬಿಜೆಪಿ ಮುಖಂಡ ಓದೋಗಂಗಪ್ಪ ಜನ್ಮದಿನ ಸಂಭ್ರಮ
ಹೂವಿನಹಡಗಲಿ 18: ಬಿಜೆಪಿ ಮುಖಂಡರಾದ ಓದೋಗಂಗಪ್ಪ ನವರ 66ನೇ ವರ್ಷದ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಬುಧವಾರ ಪಟ್ಟಣದಲ್ಲಿ ಬೈಕ್ ರಾ್ಯಲಿ, ರಕ್ತದಾನ ಮತ್ತು ನೇತ್ರದಾನ ಶಿಬಿರವನ್ನು ಆಯೋಜಿಸುವ ಮೂಲಕ ವಿಭಿನ್ನವಾಗಿ ಜನ್ಮದಿನವನ್ನು ಆಚರಿಸಿಕೊಂಡರು.
ಪಟ್ಟಣದ ಶಿವ ಶಾಂತವೀರ ಸಮುದಾಯ ಭವನದಲ್ಲಿ ನಡೆದ ಓದೋಗಂಗಪ್ಪನವರ ಜನ್ಮದಿನಾಚರಣೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ, ಹಿರೇಹಡಗಲಿ ಹಾಲವೀರ್ಪಜ್ಜ ಆಶೀರ್ವಾಚನ ನೀಡಿದರು. ನಂದಿಪುರ ಮಹೇಶ್ವರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಉತ್ತಂಗಿ ಸೋಮಶಂಕರ ಸ್ವಾಮೀಜಿ, ಅಂಗೂರು ಶ್ರೀಗಳು ಗಂಗಪ್ಪನವರಿಗೆ ಕಂಬಳಿ ಹೊದಿಸಿ, ಕುರಿಮರಿಯನ್ನು ನೀಡಿ ಸತ್ಕರಿಸಿದರು.
ನಿವೃತ್ತ ಯೋಧರು ಮತ್ತು ನಾನಾ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಓದೋಗಂಗಪ್ಪ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.ಇದಕ್ಕೂ ಮೊದಲು ಮೈಲಾರ ಲಿಂಗೇಶ್ವರ ದೇವಸ್ಥಾನದಿಂದ ತಮ್ಮ ಅಭಿಮಾನಿಗಳು ಬೈಕ್ ರಾ್ಯಲಿ ನಡೆಸಿದರು. ನಂತರ ರಕ್ತದಾನ ಮತ್ತು ನೇತ್ರಾದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ವೇಳೆ ಎಂಪಿಎಂ ಮಂಜುನಾಥ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ಈಟಿ ಲಿಂಗರಾಜ, ಓಲಿ ಈಶಪ್ಪ, ಜಿ.ಬುಳ್ಳಪ್ಪ, ಬೀರಬ್ಬಿ ಬಸವರಾಜ, ಸಿರಾಜ ಬಾವಿಹಳ್ಳಿ, ಜಿ.ಪಂ.ಮಾಜಿ ಸದಸ್ಯ ಎಸ್.ಎಂ. ಲಲಿತಾಮ್ಮ, ಎಲ್.ಸೋಮಿನಾಯ್ಕ, ಈ.ಟಿ.ಮಾಲತೇಶ, ಸನ್ಮತಿ, ಎ.ಜೆ.ವೀರೇಶ, ಸೇರಿದಂತೆ ತಾಲೂಕಿನಿಂದ ಸಾವಿರಾರು ಅಭಿಮಾನಿಗಳು ಭಾಗವಹಿಸಿ ಸಂಭ್ರಮಿಸಿದರು.