ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಬಾವುಟ ಹಾರಿಸುವುದು ಶತಸಿದ್ಧ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬು
ಕಂಪ್ಲಿ:ಡಿ.28. ಪಟ್ಟಣದ ಕೊಟ್ಟಾಲ್ ರಸ್ತೆಯ ವೆಂಕಟೇಶ ಟಾಕೀಸ್ ಎದುರುಗಡೆಯ ಕಲ್ಗುಡಿ ಸಂಕೀರ್ಣದ ಕೆಳಗಡೆಯ ಮಳಿಗೆಯಲ್ಲಿ ನೂತನ ವೃದ್ಧಿ ಕ್ರಿಯೇಷನ್ಸ್ ಫೋಟೋಗ್ರಾಫಿ ಅಂಗಡಿಯನ್ನು ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಭಾನುವಾರ ಅದ್ಧೂರಿಯಾಗಿ ಉದ್ಘಾಟಿಸುವ ಮೂಲಕ ಶುಭ ಹಾರೈಯಿಸಿದರು. ನಂತರ ಸುರೇಶಬಾಬು ಮಾತನಾಡಿ, ಇತ್ತೀಚಿನ ದಿನಮಾನದಲ್ಲಿ ಮದುವೆ, ಜನ್ಮದಿನ, ನಾಮಕರಣ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ಫೋಟೋಗ್ರಾಫಿಯ ಅವಶ್ಯಕತೆ ಇದೆ. ಆದ್ದರಿಂದ ಇಲ್ಲಿನ ಕೊಟ್ಟಾಲ್ ರಸ್ತೆಯಲ್ಲಿ ಮುಖಂಡ ಗೊಂದಿ ಶಿವುಕುಮಾರ ಅವರ ನೇತೃತ್ವದಲ್ಲಿ ನೂತನ ವೃದ್ಧಿ ಕ್ರಿಯೇಷನ್ಸ್ ಫೋಟೋಗ್ರಾಫಿ ಶಾಪ್ ಅನಾವರಣಗೊಂಡಿರುವುದು ಸಂತದದ ವಿಷಯವಾಗಿದೆ.
ಆಧುನಿಕ ಭಾರತದ ಡಿಜಿಟಲ್ ಯುಗದಲ್ಲಿ ಫೋಟೋಗ್ರಾಫಿಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಜನರು ಇಂದು ಫೋಟೋಗ್ರಾಫಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳುವ ಜೊತೆಗೆ ಮುಂದಿನ ದಿನದಲ್ಲಿ ಸ್ಥಳೀಯ ಪುರಸಭೆ, ಗ್ರಾಪಂ ಸೇರಿದಂತೆ ಇನ್ನಿತರ ಚುನಾವಣೆಗಳು ಬರಲಿದ್ದು, ಬಿಜೆಪಿಯೂ ಪ್ರತಿಯೊಂದು ಚುನಾವಣೆ ಎದುರಿಸಲು ಸಕಲ ಸಜ್ಜಾಗಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಟಿಕೆಟ್ ನೀಡಲಾಗುವುದು. ಮತ್ತು ಬರುವ ಚುನಾವಣೆಗಳಲ್ಲಿ ಬಿಜೆಪಿ ತಕ್ಕ ಹಿಡಿತಕ್ಕೆ ತೆಗೆದುಕೊಳ್ಳುವುದು ಶತಸಿದ್ಧ ಎಂದರು. ಈ ಸಂದರ್ಭದಲ್ಲಿ ಆಹಾರ ಶಿರಸ್ತೇದಾರ ರವಿಕುಮಾರ ರಾಥೋಡ್, ಮುಖಂಡರಾದ ಗೊಂದಿ ಶಿವುಕುಮಾರ, ಚೇತನ್‌ಕುಮಾರ, ಗೊಂದಿ ಸಂತೋಷ್, ಎಂ.ವಿಶ್ವನಾಥ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಇತರರು ಇದ್ದರು.