ರಾಯಬಾಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸಾಕಷ್ಟು ಕೊಡುಗೆ: ಐಹೊಳೆ
ಲೋಕದರ್ಶನ ವರದಿ
ಚಿಕ್ಕೋಡಿ 29: ರಾಯಬಾಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ. ಕ್ಷೇತ್ರದಲ್ಲಿ ಜಲಜೀವನ ಮಿಷನ, ರಸ್ತೆ, ಸಮುದಾಯ ಭವನ ಮತ್ತು ದೇವಸ್ಥಾಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಬುಧವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಗ್ರಾಮೀಣ ಜನರು ಸಮರ್ಪಕ ರಸ್ತೆ ಮೇಲೆ ಓಡಾಡಲು ಹೈಟಿಕ ರಸ್ತೆ ನಿರ್ಮಾಣ ಮಾಡಲಾಗಿದೆ. ರೈತರು ಬೆಳೆದ ಕಬ್ಬು ಮತ್ತು ಇತರೆ ಉತ್ಪಣಗಳನ್ನು ಕಾರ್ಖಾನೆಗಳಿಗೆ ಕಳಿಸಲು ಗುಣಮಟ್ಟ ರಸ್ತೆ ಅವಶ್ಯಕ ಎಂದರು.
ಕ್ಷೇತ್ರದ ಜನರು ಶುದ್ಧ ನೀರು ಸೇವಿಸಲು ಪ್ರಧಾನಿ ನರೇಂದ್ರ ಮೋದಿಜಿ ಅವರು ಜಲಜೀವನ ಮಿಷನ ಯೋಜನೆ ಜಾರಿಗೆ ತಂದಿದ್ದಾರೆ. ಜಾಗನೂರ ಮತ್ತು ಪೋಗತ್ಯಾನಟ್ಟಿ ಗ್ರಾಮದಲ್ಲಿ ಜಲಜೀವನ ಮಿಷನ ಯೋಜನೆಗೆ 2.90 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಜಾಗನೂರ ಗ್ರಾಮದ ನಿಪ್ಪಾಣಿ ಮತ್ತು ವಗ್ಗನ್ನವರ ತೋಟದ ರಸ್ತೆಗೆ 40 ಲಕ್ಷ ರೂ ಬಿಡುಗಡೆಯಾಗಿದೆ. ಜಾಗನೂರ ಗ್ರಾಮದಿಂದ ಎನ್.ಎಂ ವರೆಗೆ ಕೂಡು ರಸ್ತೆಗೆ 1 ಕೋಟಿ ರೂ, ಜಾಗನೂರ ಮಮದಾಪೂರ ಮತ್ತು ಜೋಡಟ್ಟಿ ಗ್ರಾಮದವರೆಗೆ ರಸ್ತೆ ಕಾಮಗಾರಿಗೆ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದರು.
ಹಿರಣಕೇಶಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ, ಶಿವರಾಯ ಸನದಿ, ಲಕ್ಷ್ಮಣ ಹಣಮನ್ನವರ, ಸಿದ್ದು ಖಿಚಿಡಿ, ಮಹಾಂತೇಶ ಶಿರಗೂರ, ರಾಜು ಶಿರಗೂರ ಮುಂತಾದವರು ಇದ್ದರು