ಕಾರವಾರ

ಶಾಸಕಿ ರೂಪಾಲಿ ನಾಯ್ಕ ಮೇಲಿನ ಪಸೆಂರ್ಟೇಜ್ ಆರೋಪ ನಿರಾಧಾರ- ಕಾರವಾರ ಬಿಜೆಪಿ

ಶಾಸಕಿ ರೂಪಾಲಿ ನಾಯ್ಕ ಮೇಲಿನ ಪಸೆಂರ್ಟೇಜ್ ಆರೋಪ ನಿರಾಧಾರ- ಕಾರವಾರ ಬಿಜೆಪಿ

ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆ ಕಟ್ಟಡ ನಿರ್ಮಾಣ ವಿವಾದ : 

ಕಾರವಾರ 08: 150 ಕೋಟಿ ವೆಚ್ಚದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ರಾಜಕಾರಣಿಯೋರ್ವರು ಪಸಂರ್ಟೇಜ್ ಕೇಳುತ್ತಿರುವ ಕಾರಣ ಕಾಮಗಾರಿ ನೆನಗುದಿಗೆ ಬಿದ್ದಿದೆ ಎಂದು ಹೇಳಿರುವ ಮಾಜಿ ಸಚಿವರ ಹೇಳಿಕೆಗೆ ಶಾಸಕಿ ರೂಪಾಲಿ ನಾಯ್ಕರೇ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಅವರ ಆರೋಪ ಆಧಾರ ರಹಿತವಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ್ ನಾಯ್ಕ ಹೇಳಿದ್ದು, ಮಾಧವ ನಾಯ್ಕ ಸುಳ್ಳು ಹೇಳುತ್ತಿದ್ದಾರೆಂದು ಟೀಕಿಸಿದರು. 

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಕಾರವಾರದ ಮೆಡಿಕಲ್ ಕಾಲೇಜಿಗೆ ಮಂಜೂರಾಗಿದ್ದ 150 ಕೋಟಿ ವೆಚ್ಚದ ಆಸ್ಪತ್ರೆ ಕಾಮಗಾರಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಪಸಂರ್ಟೇಜ್ ರಾಜಕಾರಣ ನಡೆಸಿದ ಕಾರಣಕ್ಕೆ ವಿಳಂಬವಾಗುತ್ತಿದೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಅವರು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿರುವುದಾಗಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಅಸಲಿಯಾಗಿ ಮಾಜಿ ಸಚಿವ ಆನಂದ ಅಸ್ನೊಟಿಕರ್ ಅವರು ಶಾಸಕಿ ರೂಪಾಲಿ ನಾಯ್ಕ ಅವರ  ಹೆಸರನ್ನು ಎಲ್ಲಿಯೂ ಹೇಳಿಲ್ಲ.  ಅಸ್ನೋಟಿಕರ್ ಹೇಳಿರುವುದು ರಾಜಕಾರಣಿಯೋರ್ವರು ಎಂದು ಹೇಳಿದ್ದಾರೆ. ಆದರೆ  ಗುತ್ತಿಗೆದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ  ಅವರು ಶಾಸಕಿ ರೂಪಾಲಿ ನಾಯ್ಕ  ಹೆಸರನ್ನು ಹೇಳಿದ್ದು,  ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇದನ್ನು ಜಿಲ್ಲಾ ಬಿಜೆಪಿ ಉಗ್ರವಾಗಿ ಖಂಡಿಸುವುದಾಗಿ ಹೇಳಿದರು.  

ಜಿಲ್ಲೆಯಲ್ಲಿ ಸೂಕ್ತ ಆಸ್ಪತ್ರೆಗಳೇ ಇಲ್ಲದ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ವಿಶೇಷ ಪ್ರಯತ್ನ ನಡೆಸಿ 150 ಕೋಟಿ ಮಂಜೂರಿಸಿಕೊಂಡು ಬಂದಿರುವುದಕ್ಕೆ ಅಭಿನಂದಿಸಬೇಕಿತ್ತು. ಆದರೆ ಅದನ್ನು ಮಾಡದೆ ಮಾಧವ ನಾಯ್ಕ ಸುಳ್ಳು ಆರೋಪ ಮಾಡುತ್ತಿದ್ದಾರೆ.   ಆದರೆ ಅಸಲಿಯಾಗಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮಾಧವ ನಾಯ್ಕ ಅಡ್ಡಗಾಲು ಹಾಕಿರುವುದು.  

ಶಾಸಕಿ ರೂಪಾಲಿ ನಾಯ್ಕ  ಆಸ್ಪತ್ರೆ ನಿರ್ಮಾಣಕ್ಕೆ ಬೇಕಾಗಿದ್ದ ಹೆಚ್ಚುವರಿ ಭೂಮಿಗೆ ಸ್ಥಳ ನೀಡುವಂತೆ ಕಾರಾಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.  ಜೈಲು ಸ್ಥಳಾಂತರಕ್ಕೆ ಸಹ ಪತ್ರ ಬರೆದಿದ್ದಾರೆ. ನೂತನ ಆಸ್ಪತ್ರೆ  ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾದುದು ಜಿಲ್ಲಾ ಕಾರಾಗೃಹ ಇಲಾಖೆ. ಕಾರಾಗೃಹ ಇಲಾಖೆ ಆಸ್ಪತ್ರೆಯ ಈಗಿನ ಹೊಸ ಕಟ್ಟಡ ನಿರ್ಮಾಣದ ಜಾಗ ತನ್ನದೆಂದು ತಕರಾರು ತೆಗೆದಿದೆ. ಜಿಲ್ಲಾ  ಕಾರಾಗೃಹಕ್ಕೆ ಅಂಕೋಲಾ ತಾಲೂಕಿನಲ್ಲಿ ಜಾಗ ಮಂಜೂರಾಗಿ, ಯೋಜನೆ ಅನುಷ್ಠಾನಕ್ಕೆ ಬಾರದೆ ಹಾಗೆ ಉಳಿದುಕೊಂಡಿದೆ. ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆ ಕಟ್ಟಡ  ದೊಡ್ಡ ಬಜೆಟ್ ನಿಂದ ಆಗಬೇಕಾದ ಕಾರಣ ಮುಖ್ಯಮಂತ್ರಿ  ಯಡಿಯೂರ​‍್ಪ ಅವರ ಮೂಲಕವೇ ಶಂಕುಸ್ಥಾಪನೆಗೆ ಶಾಸಕರು  ಪ್ರಯತ್ನಿಸುತ್ತಿದ್ದಾರೆ. ಆದರೆ ಮಾಧವ ನಾಯ್ಕ ಹತ್ತಿ ಇಲ್ಲದೆ ನೂಲು ತೆಗೆಯುವಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರವಾರ ಮತ್ತು ಅಂಕೋಲಾ ತಾಲೂಕಿನ ಬಿಜೆಪಿ ಪದಾಧಿಕಾರಿಗಳು ಹಾಗೂ  ಸುಭಾಷ ಗುನಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ