ಅಥಣಿ

ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ನಿಶ್ಚಿತ: ಸವದಿ

ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ನಿಶ್ಚಿತ: ಸವದಿ

ಅಥಣಿ 30: ವಿಧಾನ ಪರಿಷತ್ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.  

ಅವರು ತಾಲೂಕಿನ ಐಗಳಿ ಗ್ರಾಮದ ಮಾಣಿಕ್ ಪ್ರಭು ಮಠದ ಆವರಣದಲ್ಲಿ ಕೊಕಟನೂರ, ತೆಲಸಂಗ, ಐಗಳಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತ ಸದಸ್ಯರ ಸಮಾವೇಶದ ನಂತರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  

ಕಟವಗಿಮಠ ತಮ್ಮ ಎರಡೂ ಅವಧಿಯಲ್ಲಿಯೂ ಸಹ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಶ್ರಮಿಸಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಗ್ರಾಪಂ, ಪಪಂ, ಪುರಸಭಾ ಹಾಗೂ ನಗರ ಸಭೆ ಸದಸ್ಯರು ಇವರನ್ನು ನಿಶ್ಚಿತವಾಗಿಯೂ ಬೆಂಬಲಿಸುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ. ಬಿಜೆಪಿ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಬಿಜೆಪಿ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ ಯಾರೂ ಗೊಂದಲಕ್ಕೀಡಾಗಬಾರದು ಎಂದರು.  

ಬಿಜೆಪಿ ಅಭ್ಯರ್ಥಿ ಮಹಾಂತೇಶ ಕಟವಗಿಮಠ ಮಾತನಾಡಿ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಏನು ಎನ್ನುವುದು ಜಿಲ್ಲೆಯ ಜನತೆಗೆ ಗೊತ್ತಿದೆ ಗ್ರಾಮ ಪಂಚಾಯತ ಸದಸ್ಯರಿಗೆ ಸಮಸ್ಯೆಗಳು ಎದುರಾದಾಗ ವಿಧಾನ ಪರಿಷತ್‌ನಲ್ಲಿ ಅವರ ಪರವಾಗಿ ಧ್ವನಿ ಎತ್ತಿರುವೆ ಆದರೂ ಕೂಡ ಲಕ್ಷ್ಮೀ ಹೆಬ್ಬಾಳಕರ ನನ್ನನ್ನು ಟೀಕಿಸಿದ್ದಾರೆ ಇದಕ್ಕೆ ಮತದಾರ ಬಾಂಧವರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದರು.  

 ಕೊಳಗೇರಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು.  

 ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ,  ಬಿಜೆಪಿ ಮುಖಂಡರಾದ ಚಿದಾನಂದ ಸವದಿ, ನಿಂಗಪ್ಪಾ ಖೋಕಲೆ, ಎಸ್‌.ಎ.ಮುದಕಣ್ಣವರ,  ಶ್ರೀಶೈಲ ನಾಯಿಕ, ಎ.ಎಮ್‌.ಖೊಬ್ರಿ, ಸುಶೀಲ ಪತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ