ಯರಗಟ್ಟಿ

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಭರ್ಜರಿ ಗೆಲುವು: ಸಂಭ್ರಮಾಚರಣೆ

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಭರ್ಜರಿ ಗೆಲುವು: ಸಂಭ್ರಮಾಚರಣೆ

ಯರಗಟ್ಟಿ 04: ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮತ್ತೆ ಕಮಲ ಅರಳುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ ಈ ಕುರಿತು ಅಧಿಕೃತ ಘೋಷಣೆ ಆಗುತ್ತಿದ್ದಂತೆ ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೊರಾಗಿತ್ತು. 

ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. 

ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ, ಗ್ರಾ ಪಂ. ಉಪಾಧ್ಯಕ್ಷ ಗುರು ವಾಲಿ, ಗ್ರಾ. ಪಂ. ಸದಸ್ಯ ಗೌಡಪ್ಪ ಸವದತ್ತಿ, ಗುರುಪಾದ ಪಾಟೀಲ, ಸುರೇಶ ಅಂಗಡಿ, ಪ್ರಕಾಶ ಹೊಸಮನಿ, ಯಲ್ಲಪ್ಪ ಪಟ್ಟಪ್ಪನವರ, ಸುರೇಶ ತಮ್ಮಣ್ಣವರ, ಹನುಮಂತ ನರೇರ, ಕೆಂಚಪ್ಪ ಮರಕಟ್ಟಿ, ಯಲ್ಲಪ್ಪ ನಂದಿ, ಉಮೇಶ ಮಿರ್ಜಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ