ಶಿಗ್ಗಾವ್

ಬಿಜೆಪಿ ಬೆಂಬಲಿತ ಸದಸ್ಯ ಆಯ್ಕೆ, ಸನ್ಮಾನ

ಬಿಜೆಪಿ ಬೆಂಬಲಿತ  ಸದಸ್ಯ ಆಯ್ಕೆ, ಸನ್ಮಾನ

ಶಿಗ್ಗಾವಿ 02:  ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತಿಗೆ ನೆಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ  ಸದಸ್ಯರೂ ಆಯ್ಕೆಯಾದ ಹಿನ್ನಲೆಯಲ್ಲಿ ಅವರನ್ನು ಪಟ್ಟಣದ ಸವಣೂರ ರಸ್ತೆಯಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಕಾರ್ಯಾಲಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಭಾಜಪ  ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ರಾಜ್ಯ ಯುವ ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯ ನರಹರಿ ಕಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಸಂಜನಾ ರಾಯ್ಕರ, ರೇಣುಕನಗೌಡ ಪಾಟೀಲ,  ಸಂತೋಷ ದೊಡ್ಡಮನಿ, ಷಣ್ಮೂಖ ಮಾದರ, ಸೇರಿದಂತೆ ಕಾರ್ಯಕರ್ತರು ಹಾಗೂ ಹನುಮರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಓದಿ