ಮೂಕಿಹಾಳ ಗ್ರಾ.ಪಂ. ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಸುಮಿತ್ರಾ ಅವಿರೋಧ ಆಯ್ಕೆ
ತಾಳಿಕೋಟಿ 14: ತಾಲೂಕಿನ ಮೂಕಿಹಾಳ ಗ್ರಾಮ್ ಪಂಚಾಯತ ಅಧ್ಯೆಕ್ಷೆಯಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಸುಮಿತ್ರಾ ತಳವಾರ ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷೆಯಾದ ಶಾಂತವ್ವ ಸೋಮಪ್ಪ ಸುಧಾಕರ (ಹಗರಗುಂಡ) ಇವರ ರಾಜಿನಾಮೆಯಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕಾಗಿ ಮಂಗಳವಾರ ಗ್ರಾಮ್ ಪಂಚಾಯತ ಸಭಾ ಭವನದಲ್ಲಿ ಚುನಾವಣೆ ಪ್ರಕ್ರೀಯೆ ಜರುಗೀತು.
20 ಸಂಖ್ಯಾಬಲ ಹೊಂದಿದ್ದ ಪಂಚಾಯತ್ನ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಸುಮಿತ್ರಾ ರಾಜಕುಮಾರ ತಳವಾರ (ಮೂಕಿಹಾಳ) ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಒಟ್ಟು 20 ಸದಸ್ಯರಲ್ಲಿ 16ಸದಸ್ಯರು ಸಭೆಯಲ್ಲಿ ಹಾಜರಿದ್ದು 4ಸದಸ್ಯರು ಗೈರು ಹಾಜರಾಗಿದ್ದರು.
ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಾಳಿಕೋಟಿ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಬಿ. ಆರ್. ಬಿರಾದಾರ, ಅವರು ಸುಮಿತ್ರಾ ತಳವಾರ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಒ ಎಸ್. ವಾಯ್. ತಳವಾರ ಹಾಗೂ ಬಸನಗೌಡ ಚೌದ್ರಿ ಕಾರ್ಯ ನಿರ್ವಹಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಬಿಜೆಪಿ ಧುರಿಣ ನಿಂಗಪ್ಪಗೌಡ ಭಪ್ಪರಗಿ, ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿಯವರ ಕಾರ್ಯ ವೈಖರಿಯನ್ನು ಮೆಚ್ಚಿ ಸದಸ್ಯೆಯಾದ ಸುಮಿತ್ರಾ ತಳವಾರ ಅವರು ನಮ್ಮ ಪಕ್ಷಕ್ಕೆ ಸೆರೆ್ಡಯಾಗಿ ಇಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆಯು ನಮ್ಮ ಪಕ್ಷದ ಸದಸ್ಯೆಯೆ ಅಧ್ಯಕ್ಷೆಯಾಗಿದ್ದರು. ನೂತನ ಅಧ್ಯಕ್ಷರು ಉತ್ತಮ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ನೂತನ ಅಧ್ಯಕ್ಷೆ ಸುಮಿತ್ರಾ ತಳವಾರ ಅವರು ಮಾತನಾಡಿ ನಮ್ಮ ಮುಖಂಡರಾದ ನಿಂಗಪ್ಪಣ್ಣ ಭಪ್ಪರಗಿ ಇವರ ಮಾರ್ಗದರ್ಶನದಲ್ಲಿ ನಾನು ನನಗೆ ಸಿಕ್ಕ ಅವಕಾಶವನ್ನು ಪಂಚಾಯತ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳ ಅಭಿವೃದ್ಧಿಗಾಗಿ ಬಳಸಿಕೋಳ್ಳುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.
ವಿಜಯೋತ್ಸವ: ಬಿಜೆಪಿ ಮುಖಂಡ ನಿಂಗಪ್ಪಗೌಡ ಭಪ್ಪರಗಿ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಗುಲಾಲಿ ಎರಚಿ ಪಟಾಕ್ಷಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಮುಖಂಡರಾದ ಈರಣ್ಣ ಹೊಕ್ರಾಣಿ (ಕಲ್ಲದೇವನಹಳ್ಳಿ), ಪುರಸಭೆ ಸದಸ್ಯ ಮುತ್ತಪ್ಪ ಚಮಲಾಪೂರ, ಸಿದ್ದಣ್ಣ ಮೂಕಿಹಾಳ,ಸಾಹೇಬ ಪಟೇಲ ಮೋಕಾಶಿ, ತಿಪ್ಪಣ್ಣ ಸಜ್ಜನ, ಮಾಳಪ್ಪ ಬಿಳೇಬಾವಿ, ಗ್ರಾ. ಪಂ ಸದಸ್ಯರಾದ ಬಾಬು ಪಟೇಲ್ ಗುಡ್ನಾಳ, ಮಾಳಮ್ಮ ಬಿರಾದಾರ, ಜಾವೀದ ಪಟೇಲಪಾಟೀಲ, ಚನ್ನಮ್ಮ ಮಕಾಳಿ, ರೇವಣಪ್ಪ ಮೇಟಿ, ದೇವಮ್ಮ ಕುಡಲಗಿ, ನೀಲಮ್ಮ ಒಡಗೇರಿ, ಸೋಮಲಿಂಗಪ್ಪ ಚಲವಾದಿ, ಗಂಗವ್ವ ನಾಯ್ಕೋಡಿ, ಶಿವಪ್ಪ ಗೊನಾಳ, ದೆವಣ್ಣ, ಪರುಶರಾಮ ನಾಗೂರ, ಬೋರಮ್ಮ ದೇಸಾಯಿ, ಭೀಮಪ್ಪ ವಗ್ಗರ, ಮತ್ತೀತರರು ಉಪಸ್ಥಿತರಿದ್ದರು.