ಬಿಜೆಪಿ ಗೆಲುವು: ಸಂಭ್ರಮಾಚರಣೆ
ಯರಗಟ್ಟಿ 04: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವುದಕ್ಕೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಮುಖಂಡ ಅಜೀತಕುಮಾರ ದೇಸಾಯಿ ಮಾತನಾಡಿ ಫಲಿತಾಂಶ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದಾರೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಹಣದ ಹೊಳೆ ಹರಿಸಿತ್ತು ಆದರೆ ಬೆಳಗಾವಿ ಲೋಕಸಭಾ ಮತದಾರು ಹಣ ನೋಡದೆ ಬಿಜೆಪಿ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜಗದೀಶ ಶೆಟ್ಟರ ಅವರನ್ನು ಕೈಹಿಡಿದಿದ್ದಾರೆ ಎಂದರು.
ಸದಾನಂದ ಹಣಬರ, ಕೃಷ್ಣಮೂರ್ತಿ ತೊರಗಲ, ಸಂತೋಷ ವಾಲಿ, ಸುನೀಲ ಬೂದಿಗೊಪ್ಪ, ಗೋವಿಂದ ಪೂಜೇರ, ಮುದಕಪ್ಪ ತಡಸಲೂರ, ಪ್ರವೀಣ ಬೆಣ್ಣೆ, ಮುದಕಪ್ಪ ರವಿ, ಮಂಜುನಾಥ ಕೊಪ್ಪದ, ದುಂಡಯ್ಯ ಹಿರೇಮಠ, ಸೊನು ತಲ್ಲೂರು, ಪಿಂಟು ಮಠಪತಿ, ವಿನಾಯಕ ಇಟ್ನಾಳ ಸೇರಿದಂತೆ ಅನೇಕ ಇದ್ದರು