ತಾಳಿಕೋಟಿ

ಹಲವು ಏಳುಬೀಳುಗಳಿಂದ ಬಿಜೆಪಿ ಬಲಿಷ್ಠ: ನಡಹಳ್ಳಿ

ಹಲವು ಏಳುಬೀಳುಗಳಿಂದ ಬಿಜೆಪಿ ಬಲಿಷ್ಠ: ನಡಹಳ್ಳಿ


ತಾಳಿಕೋಟೆ 07: ಜಗತ್ತಿನ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಹಲವು ಏಳುಬೀಳುಗಳನ್ನು ಕಂಡಿದೆ. ಪಕ್ಷಕ್ಕಾಗಿ ಲಕ್ಷಾಂತರ ಕಾರ್ಯಕರ್ತರು ತ್ಯಾಗ, ಬಲಿದಾನ ಮಾಡಿದ್ದಾರೆ. ಹಿರಿಯರ ತ್ಯಾಗ, ಬಲಿದಾನವನ್ನು ನೆನಪು ಮಾಡಿಕೊಂಡು ಬಿಜೆಪಿಯನ್ನು ಇನ್ನಷ್ಟು ಬಲಪಡಿಸೋಣ ಎಂದು ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು. 

ಅವರು ಪಟ್ಟಣದ ವಿಠ್ಠಲಮಂದಿರದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಜನಸಂಘದ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷ ಬೆಳೆಯಲು ಕಷ್ಟವಿದೆ. ಹಿರಿಯರ ತ್ಯಾಗ ಬಲಿದಾನದಿಂದ ಬಿಜೆಪಿ ಪಕ್ಷ ಈ ಮಟ್ಟಕ್ಕೆ ಬೆಳೆದಿದೆ. ಬಾರತೀಯ ಜನತಾ ಪಕ್ಷ ಕಟ್ಟುವದು ಬಹು ದೊಡ್ಡ ಸವಾಲಾಗಿತ್ತು. ಮನೆ ಮನೆಗೆ ಹೋಗಿ ಪ್ರಚಾರ ನಡೆಸಲಾಗುತ್ತಿತ್ತು. ಆದರೂ ಜನ ಬರುತ್ತಿದ್ದಿಲ್ಲ. ಈ ಭಾಗದಲ್ಲಿ ಪಿ.ಎಚ್‌.ಪೂಜಾರಿ, ಕಲಬುರ್ಗಿ ಭಾಗದಲ್ಲಿ ಬಸವರಾಜ ಪಾಟೀಲ ಸೇಡಂ ಶ್ರಮವಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವೇ ಅಕಾರದಲ್ಲಿದೆ. ಸರ್ಕಾರದ ಕಾರ್ಯಕ್ರಮಗಳು ಮನೆ ಮನೆ ತಲುಪಿಸುವ ಕಾರ್ಯ ಆಗಬೇಕು. ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಕಾರಕ್ಕೆ ಬರುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದರು. 

ಜಿಲ್ಲಾ ಬಿಜೆಪಿ ಅದ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಮಾತನಾಡಿ, ಕಾಂಗ್ರೇಸ್ ಪಕ್ಷ ಕೇವಲ ಮತ ಬ್ಯಾಂಕಗಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಾಂಸ್ಕೃತಿಯವಾಗಿ, ಆರ್ಥಿಕವಾಗಿ ಭಾತರವನ್ನು ಸದೃಡವಾಗಿಸುವ ಉದ್ದೇಶದಿಂದ ಬಿಜೆಪಿ ಪಕ್ಷವನ್ನು ಆರಂಭಿಸಲಾಯಿತು. ಮೂಲಕ ಕನಸು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಸಾಕಾರವಾಗಿದೆ. 370 ನೇ ಕಲಂ ರದ್ದತಿ, ರಾಮ ಮಂದಿರ, ವಾರಣಾಸಿ ಪುನರಸ್ಥಾಪನೆ ಜೊತೆ ಜೊತೆಗೆ ಅಭಿವೃದ್ದಿ ಹೊಸ ಶೆಖೆಯನ್ನೇ ಆರಂಭಿಸಿದ್ದಾರೆ. 7 ವರ್ಷದಲ್ಲಿ ಬ್ರಷ್ಠಾಚಾರ ರಹಿತ ಆಡಳಿತ ನೀಡಿದ್ದರ ಫಲವಾಗಿ ಇಂದು ಜನರು ಬಿಜೆಪಿಯತ್ತ ಮುಖ ಮಾಡಿದ್ದರ ಫಲವಾಗಿ ಎಲ್ಲ ರಾಜ್ಯಗಳಲ್ಲಿ ಅಕಾರ ಹಿಡಿಯಲು ಸಾಧ್ಯವಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ಜನ ಸಂಘ ಹಾಗೂ ಬಿಜೆಪಿ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಹಿರಿಯ ಕಾರ್ಯಕರ್ತ ಸುಭಾಷ ಯಾಳಗಿ ಅವರ ಆರ್ಥಿಕ ಪರಿಸ್ಥಿತಿಯನ್ನು ಕೇಳಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು 50 ಸಾವಿರ  ಧನ ಸಹಾಯ ನೀಡಿದರು. 

  ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಮಂಜು ಶೇಟ್ಟಿ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ರಾಘವೇಂದ್ರ ವಿಜಾಪೂರ, ಮುದಕಣ್ಣ ಬಡಿಗೇರ, ಮಾನಸಿಂಗ ಕೊಕಟನೂರ, ಅಣ್ಣಪ್ಪ ಜಗತಾಪ, ಶಶಿಧರ ಡಿಸಲೆ, ಕಾಶಿನಾತ ಮುರಾಳ, ವಿಶ್ವನಾಥ ಹೂಗಾರ, ಪ್ರಕಾಸ ಹಜೇರಿ, ರವಿ ಕಟ್ಟಿಮನಿ, ಹಣಮಂತ್ರಾಯ ಢವಳಗಿ, ಶರಣಗೌಡ ಗೋಟಖಂಡ್ಕಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ