ಶಿಗ್ಗಾವ್

ಸ್ರ್ತೀ-ಪುರುಷ ಸಮಾನತೆಯಿಂದ ಬದುಕು ಗಟ್ಟಿ: ಬಿ.ಜಯಶ್ರೀ

ಸ್ರ್ತೀ-ಪುರುಷ ಸಮಾನತೆಯಿಂದ ಬದುಕು ಗಟ್ಟಿ: ಬಿ.ಜಯಶ್ರೀ

ಶಿಗ್ಗಾವಿ 13: ಒಂದು ಹೆಣ್ಣು ಯಶಸ್ವಿಯಾದ ಗಂಡಿನ ಹಿಂದೆ ಇರುತ್ತಾಳೆಯೋ ಹಾಗೂ ಯಶಸ್ವಿಯಾದ ಹೆಣ್ಣಿನ ಹಿಂದೆ ಗಂಡನಿರಬೇಕು ಸ್ರ್ತೀ ಪುರುಷರಲ್ಲಿ ಸಮಾನತೆ ಮೂಡಿದಾಗ ಮಾತ್ರ ಬದುಕು ಗಟ್ಟಿಗೊಳ್ಳಲು ಸಾಧ್ಯ. ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾಗಿ ದುಡಿಯುವ ಸಾಮರ್ಥ್ಯ ಹೊಂದಿದ್ದಾರೆ ಅವಳನ್ನು ಶಿಕ್ಷಣದಿಂದ ವಂಚಿತಳಾಗದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಪ್ರತಿಯೊಬ್ಬರು ನೀಡಬೇಕು ಎಂದು ರಂಗಕರ್ಮಿ ಬಿ. ಜಯಶ್ರೀ ಅಭಿಪ್ರಾಯಪಟ್ಟರು.

ತಾಲೂಕಿನ ಶಿಶುವಿನಾಳದ ಗುರುಗೋವಿಂದ ಭಟ್ಟ ಹಾಗೂ ಸಂತ ಶರೀಫ ವೇದಿಕೆಯಲ್ಲಿ ಹುಬ್ಬಳ್ಳಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ  ನಡೆದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿಶುನಾಳ ಶರೀಫರ ಭಾವೈಕ್ಯತೆಯ ಮಣ್ಣು, ಭಕ್ತಿಯ ಸೊಡಗು ಈ ಮಣ್ಣಿನಲ್ಲಿದೆ. ಗುರು ಶಿಷ್ಯರ ಸಂಬಂಧ ನೋಡಬೇಕೆಂದರೆ ಅದು ಗುರುಗೋವಿಂದ ಭಟ್ಟರು ಸಂತ ಶರೀಫರನ್ನು ನೋಡಬೇಕು, ಶಿಶುನಾಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಕೋಟಿ ರೂ. ಮಂಜೂರಾತಿ ನೀಡಿದ್ದಾರೆ. ನಾವು ಪ್ರತಿನಿಧಿಸುವ ಕ್ಷೇತ್ರ ಶರಣರ ಹಾಗೂ ಹಲವಾರು ಗಣ್ಯರು ನಡೆದಾಡಿದ ಕ್ಷೇತ್ರವಾಗಿದ್ದು ನಾವು ಪುಣ್ಯವಂತರು ಎಂದರು.

ಈ ಸಂದರ್ಭದಲ್ಲಿ ಚನ್ನಮ್ಮ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ, ಚನ್ನಮ್ಮ ಬೊಮ್ಮಾಯಿ ಇದ್ದರು. ಪ್ರಾಸ್ತಾವಿಕವಾಗಿ ಚಂದ್ರಶೇಖರ ವಸ್ತ್ರದ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಾಹಿತಿ ಶಿವಾನಂದ ಮ್ಯಾಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸುದ್ದಿ ಓದಿ