ಕಂಪ್ಲಿ

ಬಾಲಕಿಯರ ನಿಲಯಕ್ಕೆ ಬಿ.ರಾಜೇಶ್ವರಿ ಭೇಟಿ ನೀಡಿ ಪರೀಶೀಲನೆ

ಬಾಲಕಿಯರ ನಿಲಯಕ್ಕೆ ಬಿ.ರಾಜೇಶ್ವರಿ ಭೇಟಿ ನೀಡಿ ಪರೀಶೀಲನೆ

ಬಾಲಕಿಯರ ನಿಲಯಕ್ಕೆ ಬಿ.ರಾಜೇಶ್ವರಿ ಭೇಟಿ ನೀಡಿ ಪರೀಶೀಲನೆ  

ಕಂಪ್ಲಿ 29: ಪಟ್ಟಣದ ಕೊಟ್ಟಾಲ್ ರಸ್ತೆಯ ಬ್ರೈಟ್‌ವೇ ಶಾಲೆ ಬಳಿಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯಕ್ಕೆ ಬಳ್ಳಾರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ರಾಜೇಶ್ವರಿ ಶುಕ್ರವಾರ ಭೇಟಿ ನೀಡಿ ಪರೀಶೀಲಿಸಿದರು. ಇಲ್ಲಿನ ಅಡುಗೆ ಕೊಠಡಿಗೆ ಭೇಟಿ ನೀಡಿದ ತಕ್ಷಣ ಅಲ್ಲಿ ಕೊಳತಿದ್ದ ಟಮೋಟ, ಉಳ್ಳಾಗಡ್ಟಿ ಸೇರಿದಂತೆ ನಾನಾ ತರಕಾರಿಗಳನ್ನು ಕಂಡು ಕೆಂಡಾಮಂಡಲವಾದರು. ನಂತರ ಬಿ.ರಾಜೇಶ್ವರಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಇಲ್ಲಿನ ನಿಲಯ ಪಾಲಕರು ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅತಿ ಶೀಘ್ರದಲ್ಲಿ ಇಲ್ಲಿನ ನಿಲಯ ಪಾಲಕರನ್ನು ಬದಲಾಯಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ಎಫ್‌ಡಿಎ ಶಿವಪ್ಪ, ಎಸ್‌ಡಿಎ ವಿಕಾಸ, ನಿಲಯ ಪಾಲಕರಾದ ವಿರುಪಾಕ್ಷಿ, ಅರುಣ್ ಇದ್ದರು. 


ಸುದ್ದಿ ಓದಿ